ಕೊರೋನಾ ವೈರಸ್​​ ವಿಷಯದಲ್ಲಿ ಸರಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ: ಸಚಿವ ಶ್ರೀರಾಮುಲು

B. Sriramulu | Corona Virus in Karnataka : ಕಲಬುರಗಿ ನಗರದಲ್ಲಿ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ಆರಂಭ ಮಾಡಲಾಗಿದ್ದು, ಇಲ್ಲಿನ ಜನರು ಆತಂಕ ಪಡುವ ಅಗತ್ಯವಿಲ್ಲ, ಮಾಸ್ಕ್ ಮತ್ತು ಸಾನಿಟೆರಿ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಲ್ಲಿ ಅಂತಹ ‌ಮೆಡಿಕಲ್ ಶಾಪ್ ಗಳ‌ ಪರವಾನಿಗೆ ರದ್ದು ಮಾಡಲಾಗುವುದು

news18-kannada
Updated:March 14, 2020, 10:01 PM IST
ಕೊರೋನಾ ವೈರಸ್​​ ವಿಷಯದಲ್ಲಿ ಸರಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ: ಸಚಿವ ಶ್ರೀರಾಮುಲು
ಸಚಿವ ಬಿ ಶ್ರೀರಾಮುಲು
  • Share this:
ಕಲಬುರ್ಗಿ (ಮಾ.14) : ಕೊರೋನಾ ವೈರಸ್​​ ವಿಷಯದಲ್ಲಿ ಸರಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ, ಜನರ ಆರೋಗ್ಯ ಕಾಪಾಡಲು ಯಾವುದೇ ನಾಟಕ ಮಾಡಲ್ಲ, ಕಲಬುರಗಿಯಲ್ಲಿ ಓರ್ವ ವ್ಯಕ್ತಿಯನ್ನುಕಳೆದುಕೊಂಡ ನೋವು ನನಗೆ ಕಾಡುತ್ತಿದೆ ಎಂದು ಆರೋಗ್ಯ ಸಚಿವ  ಬಿ ಶ್ರೀರಾಮುಲು ಹೇಳಿದರು.

ಕಲಬುರಗಿ ನಗರದಲ್ಲಿ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ಆರಂಭ ಮಾಡಲಾಗಿದ್ದು,  ಇಲ್ಲಿನ ಜನರು ಆತಂಕ ಪಡುವ ಅಗತ್ಯವಿಲ್ಲ, ಮಾಸ್ಕ್ ಮತ್ತು ಸಾನಿಟೆರಿ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಲ್ಲಿ ಅಂತಹ ‌ಮೆಡಿಕಲ್ ಶಾಪ್ ಗಳ‌ ಪರವಾನಿಗೆ ರದ್ದು ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಕೊರೋನಾ ವೈರಸ್ ಗೆ ವ್ಯಕ್ತಿ ಬಲಿಯಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ಕುಟುಂಬಸ್ಥರ ಆರೋಪಕ್ಕೆ  ಪ್ರತಿಕ್ರಿಯೆ ನೀಡಿದ ಸಚಿವರು, ಭಗವಂತ ನೋಡುತ್ತಾನೆ, ಯಾರೆ ನಿರ್ಲಕ್ಷ್ಯ ವಹಿಸಿದರೂ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥಸ್ಥರಿಗೆ ಸಹಾಯ  ಮಾಡಲು ಸರ್ಕಾರ ಮಾಡಲು ಸಿದ್ದವಿದೆ ಎಂದರು.

ವೃದ್ದನ ‌ಕುಟುಂಬಸ್ಥರ ತಪಾಸಣೆಯ ವರದಿಯಲ್ಲಿ ಮೂವರಿಗೆ ನೆಗಟಿವ್ ಬಂದಿದೆ. ಇನ್ನೂ ಒಬ್ಬರ ರಿಪೋರ್ಟ್ ನಾಳೆ ಸಂಜೆ ಒಳಗೆ  ಗೊತ್ತಾಗಲಿ. ಒಟ್ಟು ನಾಲ್ಕು ಜನರ ವರದಿ ಪೈಕಿ ಮೂವರಿಗೆ ನೆಗಟಿವ್ ಬಂದಿದೆ. ಕಲಬುರ್ಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ರಾಜ್ಯದ ಜನರು ಆತ್ಮಸ್ಥೈರ್ಯದಿಂದ ಇರಬೇಕು, ಎಲ್ಲರೂ ಮಾಸ್ಕ್ ಹಾಕಿಕೊಳ್ಳಬಾರದು,ಕೆಮ್ಮು, ಜ್ವರ ಕಂಡುಬಂದರೆ ಮಾಸ್ಕ್ ಹಾಕಿಕೊಳ್ಳಬೇಕು. ಕೊರೋನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಮೂರು ತಿಂಗಳ ಒಳಗೆ ವೈದ್ಯರ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯದಲ್ಲಿ​ ಆರು ಜನರಲ್ಲಿ ಕೊರೋನಾ ಸೋಂಕು, 731 ಮಂದಿಗೆ ಪರೀಕ್ಷೆ; ವೈದ್ಯಕೀಯ ಸಚಿವ ಕೆ ಸುಧಾಕರ್​

ರಾಜ್ಯದ ಜನರ ಹಿತದೃಷ್ಟಿಯಿಂದ ಹಾಗೂ ಮಗಳಿಗಾಗಿ ತಿರುಪತಿಗೆ ಹೋಗಿದ್ದೆ, ವಿಜ್ಞಾನ  ಮತ್ತು ದೇವರನ್ನು ಬಿಡಲು ಆಗಲ್ಲ, ಧರ್ಮ,ವಿಜ್ಞಾನ ಒಂದೆ ನಾಣ್ಯದ ಎರಡು ಮುಖಗಳು, ಎರಡು ಬಿಡಲು ಆಗುವದಿಲ್ಲ ಎಂದರು.
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading