HOME » NEWS » Coronavirus-latest-news » THE GOVERNMENT IS NOT RESPONSIBLE FOR CORONA INCREASE BECAUSE OF PEOPLE NEGLIGENCE SAYS MP RENUKACHARYA SHTV HK

ಕೊರೋನಾ ಹೆಚ್ಚಳಕ್ಕೆ ಸರ್ಕಾರ ಕಾರಣವಲ್ಲ, ಜನರ ನಿರ್ಲಕ್ಷ್ಯವೇ ಕಾರಣ ; ಎಂ ಪಿ ರೇಣುಕಾಚಾರ್ಯ

ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲೂ ಮಾಸ್ಕ್ ಹಾಗೂ ಪ್ರತಿ ಮನೆ ಮನೆಗೆ ಭೇಟಿ ನೀಡಿದಾಗಲೂ ಮಾಸ್ಕ್ ನೀಡಿದ್ದೇನೆ. ಆದರೆ, ಜನರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. 

news18-kannada
Updated:October 16, 2020, 3:19 PM IST
ಕೊರೋನಾ ಹೆಚ್ಚಳಕ್ಕೆ ಸರ್ಕಾರ ಕಾರಣವಲ್ಲ, ಜನರ ನಿರ್ಲಕ್ಷ್ಯವೇ ಕಾರಣ ; ಎಂ ಪಿ ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ
  • Share this:
ಬೆಂಗಳೂರು(ಅಕ್ಟೋಬರ್​. 16): ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಜನರು ಮಾತ್ರ ಕೋವಿಡ್ ನಿಯಮಗಳನ್ನು ಪಾಲುಸುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಕಳವಳ ವ್ಯಕ್ತಪಡಿಸಿದ್ದಾರೆ. ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ಹೆಚ್ಚಳಕ್ಕೆ ಸರ್ಕಾರ ಕಾರಣವಲ್ಲ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ನನ್ನ ಮತ ಕ್ಷೇತ್ರದಲ್ಲಿ ಪ್ರತಿ ಬೂತ್ ನ ಪ್ರತಿ ಮನೆಗೂ ಹೋಗಿ ಔಷಧಿ ಸೇರಿ ಇತರೆ ನೆರವುಗಳನ್ನು ನೀಡಿದ್ದೇನೆ. ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲೂ ಮಾಸ್ಕ್ ಹಾಗೂ ಪ್ರತಿ ಮನೆ ಮನೆಗೆ ಭೇಟಿ ನೀಡಿದಾಗಲೂ ಮಾಸ್ಕ್ ನೀಡಿದ್ದೇನೆ. ಆದರೆ, ಜನರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮಾಸ್ಕ್ ಧರಿಸಿ ಅಂದ್ರೆ ಏನೂ ಆಗಲ್ಲ ಬಿಡಣ್ಣ ಅಂತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು 9 ಬಾರಿ ಕೊರೋನಾ ಪರೀಕ್ಷೆ ಮಾಡಿಸಿ ಕೊಂಡಾಗಲೂ ನೆಗೆಟಿವ್ ಬಂದಿದೆ. ಆದರೆ, ಹತ್ತನೇ ಬಾರಿ ಪಾಸಿಟಿವ್ ಬಂದಿತ್ತು. ಕ್ಷೇತ್ರದಲ್ಲಿ ಇದ್ದಾಗ ನನಗೆ ಕೊರೋನಾ ಬರಲಿಲ್ಲ. ಆದರೆ ಅಧಿವೇಶನದಲ್ಲಿ‌ ಪಾಲ್ಗೊಂಡ ವೇಳೆ ಕೊರೋನಾ ಬಂದಿರಬಹುದೆಂಬ ಭಾವನೆ ಇದೆ. ಹಾಗಾಗಿ, ತಕ್ಷಣ ಚಿಕಿತ್ಸೆಗೆ ಒಳಗಾಗಿ ನಂತರ ಹೋಂ ಕ್ವಾರಂಟೈನ್ ಗೆ ತೆರಳಿದ್ದೆ. ಮತ್ತೆ ಪರೀಕ್ಷೆ ಮಾಡಿಸಿಕೊಂಡಾಗ ನನಗೆ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಹೊರಗೆ ಬಂದಿದ್ದೇನೆ. ಪ್ರತಿಯೊಬ್ಬರೂ ಸಹ ನಿರ್ಲಕ್ಷ್ಯ ತೋರದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಿದರು.

ಅಪಪ್ರಚಾರ :

ಹಳ್ಳಿಗಳಿಗೆ ವೈದ್ಯರನ್ನು ಕೋವಿಡ್ ಪರೀಕ್ಷೆ ನಡೆಸಲು ಕಳುಹಿಸಿಕೊಟ್ಟ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಕೋವಿಡ್ 19 ಬಂದಿಲ್ಲ, ಅಂತಹ ಕಾಯಿಲೆ ಯಾವುದೂ ಇಲ್ಲ‌. ಪರೀಕ್ಷೆ ಮಾಡಿಸಿ ಪಾಸಿಟಿವ್ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಿ ನಾಲ್ಕೈದು ಲಕ್ಷ ಹಣ ವಸೂಲಿ ಮಾಡುತ್ತಾರೆ. ಹಾಗೆ, ಹೀಗೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆಲ್ಲ ಕಿವಿಗೊಡಬೇಡಿ. ಪರೀಕ್ಷೆ ಮಾಡಿಸಿ ಎಂದು ರೇಣುಕಾಚಾರ್ಯ ಮನವಿ ಮಾಡಿದರು.

ಇದನ್ನೂ ಓದಿ : ಪ್ರವಾಹ ತುರ್ತು ಪರಿಹಾರ ಕಾರ್ಯಕ್ಕೆ 85 ಕೋಟಿ ರೂ ಬಿಡುಗಡೆ; ಸಂತ್ರಸ್ತರ ಅಗತ್ಯ ಸೇವೆಗೆ ಸಿಎಂ ಸೂಚನೆ

ನಾಮಪತ್ರ ಸಲ್ಲಿಸುವ ವೇಳೆ ಕೋವಿಡ್ ನಿಯಮ ಉಲ್ಲಂಘನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೇ ಆಗಲಿ ನಿಯಮ‌ ಪಾಲಿಸುವುದು ಉತ್ತಮ. ಉಪ ಚುನಾವಣೆ  ಕೇವಲ ಎರಡು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಗ್ರಾಮ ಪಂಚಾಯತ್ ಚುನಾವಣೆ  ಅಂದರೆ ಜನ ಜಿದ್ದಿಗೆ ಬಿದ್ದ ರೀತಿಯಲ್ಲಿ ಚುನಾವಣೆ ಮಾಡುತ್ತಾರೆ. ಅದಕ್ಕೆ ಎಲ್ಲರ ತೀರ್ಮಾನ ಕೂಡ ಮುಖ್ಯ. ನಾವು ಮತ್ತೊಬ್ಬರಿಗೆ ಮಾದರಿಯಾಗಿರಬೇಕು. ಆ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸ್ವ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಿಗೆ  ಹೇಳಿದರು.
ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಂದ ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ರೇಣುಕಾಚಾರ್ಯ, ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕ್ರಮ ಕೈಗೊಳ್ಳುತ್ತಾರೆ ಎಂದೇಳಿ, ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
Published by: G Hareeshkumar
First published: October 16, 2020, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories