HOME » NEWS » Coronavirus-latest-news » THE GOVERNMENT IS NOT HANDLING THE CORONA SITUATION PROPERLY SAYS DK SHIVAKUMAR RHHSN

ಕೊರೋನಾ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಅಂಕಿ-ಅಂಶಗಳು ನಂಬುವಂತಿಲ್ಲ; ಸರ್ವಪಕ್ಷ ಸಭೆಯಲ್ಲಿ ಡಿಕೆಶಿ ಅಸಮಾಧಾನ

ಕೊರೋನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ. ಮಕ್ಕಳ ಶಿಕ್ಷಣದ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದಿರಿ ಅಂತ ಜನರಿಗೆ ಹೇಳಿ. ಬರೀ ಪಾಸ್ ಮಾಡಿದರೆ ಸಾಕಾ..? ಮುಂದೇನು ಅಂತ ಹೇಳಿ. ಮೊದಲು ಸಾರಿಗೆ ಮುಷ್ಕರ ನಿಲ್ಲಿಸಿ. ಅವರನ್ನು ಕರೆದು ಮಾತಾಡಿ ಸ್ವಾಮಿ. ನೀವು ಅಧಿಕಾರದಲ್ಲಿ ಇದ್ದೀರಿ ಅಂತ ಕೇಳ್ತಾರೆ. ನಿಮ್ಮ‌ ಲೋಪ ಇದ್ದರೂ ನಾವು ಸಹಕಾರ ಕೊಡಲು ಸಿದ್ಧರಿದ್ದೇವೆ ಎಂದರು.

news18-kannada
Updated:April 20, 2021, 5:44 PM IST
ಕೊರೋನಾ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಅಂಕಿ-ಅಂಶಗಳು ನಂಬುವಂತಿಲ್ಲ; ಸರ್ವಪಕ್ಷ ಸಭೆಯಲ್ಲಿ ಡಿಕೆಶಿ ಅಸಮಾಧಾನ
ಡಿಕೆ ಶಿವಕುಮಾರ್.
  • Share this:
ಬೆಂಗಳೂರು: ಕೋವಿಡ್ ವಿಷಯದಲ್ಲಿ ರಾಜ್ಯಪಾಲರ ಮಧ್ಯ ಪ್ರವೇಶ ಸ್ವಾಗತ ಮಾಡುತ್ತೇನೆ.  ಇದರಲ್ಲಿ‌ ವಿವಾದ ಮಾಡಲ್ಲ. ಇವತ್ತಿನ ಸಭೆಯಲ್ಲಿ ಆರೋಗ್ಯ ಸಚಿವರಾದ ಡಾ.ಸುಧಾಕರ್ ನೀಡಿದ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನೀವು ಈ ವಿಚಾರ ಪ್ರತಿಷ್ಠೆ ಮಾಡ್ಕೋಬೇಡಿ. ನೀವು ಮಾಡಿರುವ ತಪ್ಪು ಒಪ್ಕೊಳ್ಳಿ. ನೀವು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ನೀವು ಕೆಳ ಹಂತದ ಅಧಿಕಾರಿಗಳ ಬಳಕೆ ಮಾಡಿದ್ದೀರಾ..? ನಾಲ್ಕೈದು ಮಂತ್ರಿ ಅಂದ್ರೆ ಸರ್ಕಾರ ಅಲ್ಲ.  ಎಲ್ಲಾ ಸಚಿವರನ್ನು ಬಳಕೆ ಮಾಡಿಕೊಳ್ಳಿ. ಜಿಲ್ಲೆಗಳಲ್ಲಿ ಯಾವ ಸಚಿವರು ಸಭೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದರು.

ಕೊರೋನಾ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಾವು ಸಹಕಾರ ಕೊಡಲು ಸಿದ್ಧರಿದ್ದೇವೆ. ಆದರೆ ನಾವೆಲ್ಲಾ ಸರಿ ಮಾಡಿದ್ದೀನಿ ಅಂತ ಹೇಳ್ಕೊಂಡು ಕುತ್ಕೋಬೇಡಿ.  ಕಂದಾಯ ಸಚಿವರು ಬರೀ ಮಾತಾಡ್ತಾರೆ. ಬೆಂಗಳೂರು ಸುತ್ತಮುತ್ತಲೂ ನಾಲ್ಕು ಸ್ಮಶಾನ ಮಾಡಿ. ನಮ್ಮ ಸಂಸ್ಕೃತಿ ಬಗ್ಗೆ ನಾವು ಮಾತನಾಡುತ್ತೇವೆ. ಅಂತ್ಯಸಂಸ್ಕಾರದ ವಿಚಾರದಲ್ಲಿ ಸೂಕ್ತ ಕ್ರಮ ತಗೆದುಕೊಳ್ಳಿ. ಅಭಿವೃದ್ಧಿ ಕೆಲಸ ಈಗ ನಿಲ್ಲಿಸಿ. ಆರೋಗ್ಯಕ್ಕೆ ಹೆಚ್ಚು ಅನುದಾನ ಕೊಡಿ ಎಂದು ಆಗ್ರಹಿಸಿದರು.

ಇದನ್ನು ಓದಿ: ಕೊರೋನಾ ನಿಯಂತ್ರಣ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಸಿದ್ದರಾಮಯ್ಯ ನೀಡಿದ ಸಲಹೆ ಮತ್ತು ಮಾಡಿದ ಒತ್ತಾಯಗಳೇನು?

ಲಸಿಕೆ ಅಭಿಯಾನ ಯಶಸ್ವಿಯಾಗಿ ಮಾಡಿ. ಭಾರತದಲ್ಲಿ ಮೊದಲು ಲಸಿಕೆ ಕೊಡಿಸಿ.  ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಮೊದಲು ನಮ್ಮ ಮನೆ ಮಕ್ಕಳನ್ನು ಉಳಿಸಿ. ನಂತರ ರಪ್ತು ಮಾಡಿ. ಪ್ರಧಾನಿಗೆ ಹೇಳಿ. ಲಸಿಕೆ ಬೇರೆ ದೇಶಕ್ಕೆ ರಫ್ತು ಮಾಡದಂತೆ ಎಂದು ಡಿಕೆಶಿ ಆಗ್ರಹಿಸಿದರು. ನೀವು ಕೊರೋನಾ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಔಷಧ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರ ಕೊಡುವ ಅಂಕಿ-ಅಂಶ ಒಪ್ಪುವ ಹಾಗೆ ಇಲ್ಲ. ನೀವು ರಾಜಕೀಯ ಮಾಡುತ್ತಿದ್ದೀರಿ. ಆದರೆ ನಾವು ಮಾಡುತ್ತಿಲ್ಲ ಎಂದು ಡಿಕೆಶಿ ಹೇಳಿದರು.

ಕೊರೋನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ. ಮಕ್ಕಳ ಶಿಕ್ಷಣದ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದಿರಿ ಅಂತ ಜನರಿಗೆ ಹೇಳಿ. ಬರೀ ಪಾಸ್ ಮಾಡಿದರೆ ಸಾಕಾ..? ಮುಂದೇನು ಅಂತ ಹೇಳಿ. ಮೊದಲು ಸಾರಿಗೆ ಮುಷ್ಕರ ನಿಲ್ಲಿಸಿ. ಅವರನ್ನು ಕರೆದು ಮಾತಾಡಿ ಸ್ವಾಮಿ.  ನೀವು ಅಧಿಕಾರದಲ್ಲಿ ಇದ್ದೀರಿ ಅಂತ ಕೇಳ್ತಾರೆ. ನಿಮ್ಮ‌ ಲೋಪ ಇದ್ದರೂ ನಾವು ಸಹಕಾರ ಕೊಡಲು ಸಿದ್ಧರಿದ್ದೇವೆ. ರಾಜ್ಯಪಾಲರು ಸಭೆ ಕರೆದಿರುವ ಬಗ್ಗೆ ನಾವು ನಂತರ ಮಾತಾಡೋಣ. ಆದರೆ ಸಭೆ ನಡೆದ ಬಗ್ಗೆ ಗೌರವ ಇದೆ. ಸಿಎಂ ಯಡಿಯೂರಪ್ಪ ಅವರಿಗೆ ಆರೋಗ್ಯ ಸರಿಯಿಲ್ಲ. ಆದರೂ ಸಭೆಯಲ್ಲಿ ಭಾಗಿ ಆಗಿರುವುದಕ್ಕೆ ರಾಜ್ಯಪಾಲರಿಗೆ ಧನ್ಯವಾದಗಳು ಎಂದು ಹೇಳಿದರು.
Published by: HR Ramesh
First published: April 20, 2021, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories