ಮೈಸೂರು ಮೃಗಾಲಯ ಕಷ್ಟದಲ್ಲಿದೆ, ಸಹಾಯ ಮಾಡಿ ಅಂತ ಮೊದಲ ಬಾರಿಗೆ ಮನವಿ‌ ಮಾಡಿದ ಆಡಳಿತ ಮಂಡಳಿ

ಬೆಂಗಳೂರಿನ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದಉಸ್ತುವಾರಿ ಸಚಿವರು, ವಾಟ್ಸ್‌ಪ್ ಗ್ರೂಪ್ ಮುಖಾಂತರ ಮಾಹಿತಿ ಹಂಚಿಕೊಂಡು ಪ್ರಾಣಿಗಳನ್ನ ದತ್ತು ಪಡೆಯಿರಿ ಅಂತ ಮನವಿ ಮಾಡಿದ್ದರು.

news18-kannada
Updated:April 29, 2020, 3:23 PM IST
ಮೈಸೂರು ಮೃಗಾಲಯ ಕಷ್ಟದಲ್ಲಿದೆ, ಸಹಾಯ ಮಾಡಿ ಅಂತ ಮೊದಲ ಬಾರಿಗೆ ಮನವಿ‌ ಮಾಡಿದ ಆಡಳಿತ ಮಂಡಳಿ
ಮೈಸೂರು ಮೃಗಾಲಯ
  • Share this:
ಮೈಸೂರು(ಏ.29): ದೇಶಾದ್ಯಂತ ಲಾಕ್‌ಡೌನ್ ವ್ಯವಸ್ಥೆ ಜಾರಿಯಲ್ಲಿದ್ದು, ಎಲ್ಲ ಕ್ಷೇತ್ರದಲ್ಲು ನಷ್ಟ ಸಾಮಾನ್ಯವಾಗಿದೆ. ಆದರೆ, ಇದೇ ಮೊದಲ ಬಾರಿಗೆ ವಿಶ್ವಪ್ರಸಿದ್ದ ಮೈಸೂರು ಚಾಮರಾಜೇಂದ್ರ ಮೃಗಾಲಯ ಇದೀಗ ಲಾಕ್‌ಡೌನ್‌ನಿಂದಾಗಿ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಮೈಸೂರು ಮೃಗಾಲಯ ಸ್ವಾಯತ್ತ ಸಂಸ್ಥೆಯಾಗಿದ್ದು, ಟಿಕೆಟ್ ಹಣ ಹಾಗೂ ಪ್ರಾಣಿದತ್ತು ಯೋಜನೆಯ ಹಣದಿಂದಲೇ ಇಡೀ ಮೃಗಾಲಯ ನಿರ್ವಹಣೆ ಮಾಡಲಾಗುತ್ತಿದ್ದರು. ಆದರೆ ಮಾರ್ಚ್ 15ರ ನಂತರ 45 ದಿನಗಳಿಂದ ಲಾಕ್‌ಡೌನ್‌ನಿಂದಾಗಿ ಬಂದ್ ಆಗಿರುವ ಮೃಗಾಲಯ ನಿಜಕ್ಕು ಆರ್ಥಿಕವಾಗಿ ನಷ್ಟಕ್ಕಿಡಾಗಿದೆ.

ಈ ತಿಂಗಳಿನಲ್ಲಿ ಪ್ರಾಣಿಗಳಿಗೆ ಆಹಾರಕ್ಕೆ ಬೇಕಾಗಿರುವ ಬರೋಬ್ಬರಿ 2 ಕೋಟಿ ಹಣ ಹೊಂದಿಸೋಕು ಮೃಗಾಲಯ ಕಷ್ಟ ಪಡುತ್ತಿದ್ದು, ಸಿಬ್ಬಂದಿಗಳಿಗೆ ವೇತನ, ವಿದ್ಯುತ್, ನೀರು ಹಾಗೂ ಇತರೆ ವ್ಯವಸ್ಥೆಗೆ ಬೇಕಾಗಿರುವ ಹಣಕ್ಕೆ ಯಾವುದೇ ಆದಾಯ ಇಲ್ಲ. ಈ ಸಂಕಷ್ಟದ ನಡುವೆ ಮೃಗಾಲಯದ ನಿರ್ದೇಶಕರು ಬಹಿರಂಗವಾಗಿ ಮೃಗಾಲಯ ಕಷ್ಟದಲ್ಲಿದೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಕೊರೋನಾ ಲಾಕ್‌ಡೌನ್ ಮಧ್ಯೆ ಇಂದು ಪ್ರಾಣಿಗಳಿಗೆ ನೆರವು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮೃಗಾಲಯಕ್ಕೆ ಭಾರಿ ಮೊತ್ತದ ಹಣ ದೇಣಿಗೆಯಾಗಿ ನೀಡಿದ್ದಾರೆ. ಸಚಿವ ಸೋಮಶೇಖರ್‌ರಿಂದ ಚಾಮುಂಡಿ ಆನೆ ದತ್ತು ಸ್ವೀಕರಿಸಿದ್ದಾರೆ. ಕಳೆದ ವಾರ ಮೈಸೂರಿಗೆ ಆಗಮಿಸಿದ್ದಾಗ ಮೃಗಾಲಯಕ್ಕೆ ಭೇಟಿ ನೀಡಿದ್ದ ಸಚಿವರು ಮೃಗಾಲಯ ನೋಡಿ ಸಂತಸ ಪಟ್ಟಿದ್ದರು. ಅಲ್ಲದೆ ಚಾಮುಂಡಿ ಹೆಸರಿನ ಆನೆಯನ್ನ ದತ್ತು ಪಡೆದು, ದತ್ತು ಯೋಜನೆ ಬಗ್ಗೆ ಶ್ಲಾಘಿಸಿದ್ದರು. ಇದಾದ ನಂತರ ದತ್ತು ಯೋಜನೆ ಬಗ್ಗೆ ಬೆಂಗಳೂರಿನ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದ ಸಚಿವರು, ವಾಟ್ಸ್‌ಪ್ ಗ್ರೂಪ್ ಮುಖಾಂತರ ಮಾಹಿತಿ ಹಂಚಿಕೊಂಡು ಪ್ರಾಣಿಗಳನ್ನ ದತ್ತು ಪಡೆಯಿರಿ ಅಂತ ಮನವಿ ಮಾಡಿದ್ದರು.

ನಿನ್ನೆ ರಾತ್ರಿಯ ಒಳಗಾಗಿ ಚಕ್ ಅಥವ ಡಿಡಿ ಮೂಲಕ ಮೃಗಾಲಯಕ್ಕೆ ಹಣ ನೀಡಿದರೆ ಅದನ್ನ  ಮೈಸೂರಿಗೆ ತೆರಳಿ ಮೃಗಾಲಯಕ್ಕೆ ತಲುಪಿಸುವ ಮನವಿ ಮಾಡಿದ್ದರು. ಸೋಮಶೇಖರ್ ಮನವಿ ಹಾಗೂ ಮಾಹಿತಿಗೆ ಸ್ಪಂದಿಸಿದ ಸ್ನೇಹಿತರು, ಬರೋಬ್ಬರಿ 73ಲಕ್ಷದಷ್ಟು ಹಣವನ್ನ ಚೆಕ್ ಮುಖಾಂತರ ನೀಡಿದ್ದು,  ಇಂದು ಮೈಸೂರಿಗೆ ಆಗಮಿಸಿದ್ದ ಉಸ್ತುವಾರಿ ಸಚಿವ 73 ಲಕ್ಷದ 16 ಸಾವಿರ ಹಣದ ಚೆಕ್‌ಗಳನ್ನ ಮೃಗಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಅಜಿತ್ ಕುಲಕರ್ಣಿಯವರಿಗೆ ಹಸ್ತಾಂತರ ಮಾಡಿದರು.

ಇದೆ ವೇಳೆ ಪ್ರಾಣಿ ಪ್ರೀಯರು ಮೃಗಾಲಯಕ್ಕೆ ದೇಣಿಗೆ ನೀಡಿ, ಮೃಗಾಲಯ ಸಂಕಷ್ಟದಲ್ಲಿದೆ ಎಲ್ಲರು ಪ್ರಾಣಿಗಳನ್ನ ದತ್ತು ಪಡೆಯಿರಿ ಅಂತ  ರಾಜ್ಯದ ಜನತೆಗೆ ಮೈಸೂರು ಉಸ್ತುವಾರಿ ಸಚಿವ ಎಸ್​ ಟಿ ಸೋಮಶೇಖರ್ ಮನವಿ ಮಾಡಿಕೊಂಡರು. ನಾನು ಕಳೆದ ವಾರ ಮೃಗಾಲಯ ಭೇಟಿ ನೀಡಿ ಆನೆಯೊಂದನ್ನು ದತ್ತು ಪಡೆದಿದ್ದೆ‌. ಬೆಂಗಳೂರಿಗೆ ತೆರಳಿ ಅಲ್ಲಿಯ‌ ನನ್ನ ಸ್ನೇಹಿತರನ್ನು ಮನವಿ ಮಾಡಿದ್ದೆ . ಈ ವಾರ 73 ಲಕ್ಷ ಹಣ ಸಂಗ್ರಹ ಆಗಿದೆ, ಮುಂದಿನ ವಾರ ಮತ್ತಷ್ಟು ಹಣ ಸಂಗ್ರಹ ಆಗಲಿದೆ. ಜನಪ್ರತಿನಿಧಿಗಳು‌ ಹಾಗೂ ಸಾರ್ವಜನಿಕರು ಹೆಚ್ಚು ಹೆಚ್ಚು ಪ್ರಾಣಿ ದತ್ತು ತೆಗೆದುಕೊಳ್ಳಿ. ಮೃಗಾಲಯದ ಪ್ರಾಣಿಗಳ ಆಹಾರಕ್ಕೆ ತಿಂಗಳಿಗೆ 2 ಕೋಟಿ ಹಣ ಬೇಕಾಗಿದೆ, ಈ ಸಮಯ ಕಷ್ಟದ ಸಮಯವಾಗಿದೆ ಇಂತಹ ಸಂದರ್ಭದಲ್ಲಿ ಮೃಗಾಲಯಕ್ಕೆ ಸಹಾಯ ಬೇಕಾಗಿದೆ ಹೇಳಿದ್ದಾರೆ.

ಇದನ್ನೂ ಓದಿ : ಕಲಬುರ್ಗಿಯಲ್ಲಿ ಮತ್ತೆ ಎಂಟು ಪಾಸಿಟಿವ್ - ಆತಂಕಕ್ಕೆ ಕಾರಣವಾದ ಪಿ-205 ಚೈನ್ ಲಿಂಕ್

ಒಟ್ಟಿನಲ್ಲಿ ಮೈಸೂರು ಮೃಗಾಲಯ ಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಪ್ರಾಣಿಗಳಿಗಾಗಿ ಸಹಾಯಹಸ್ತ ನೀಡಿ ಅಂತ, ಸಾರ್ವಜನಿಕರಲ್ಲಿ ಮೊಟ್ಟ ಮೊದಲ ಬಾರಿಗೆ ಮನವಿ ಮೈಸೂರು ಮೃಗಾಲಯ ಮನವಿ ಮಾಡಿರುವುದು ನಿಜಕ್ಕು ದುರದೃಷ್ಟಕರ ಸಂಗತಿಯಾಗಿದೆ. ಸದ್ಯ ಮೃಗಾಲಯ ಮುಚ್ಚಿದ್ದರು ದತ್ತು ಯೋಜನೆ ಚಾಲ್ತಿಯಲ್ಲಿದೆ, ಆನ್‌ಲೈನ್‌ನಲ್ಲು ಪ್ರಾಣಿಗಳನ್ನ ದತ್ತು ಪಡೆಯಬಹುದು. ಜನರು ಕಷ್ಟದ ಸಮಯದಲ್ಲಿ ಮೃಗಾಲಯಕ್ಕೆ ಸಹಾಯ ಮಾಡಿ ಎಂದು ಕೇಳಿಕೊಳ್ಳುವುದರ‌ ಜೊತೆ ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ.
First published: April 29, 2020, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading