ತಿರುಪತಿ ಬಾಲಾಜಿ ದರ್ಶನಕ್ಕೆ ಆರಂಭವಾದ ಟಿಕೆಟ್‌ ಮಾರಾಟ; ಮೊದಲ ದಿನವೇ ಭಕ್ತಾಧಿಗಳ ದೀರ್ಘ ಸಾಲು

83 ದಿನಗಳ ಲಾಕ್‌ಡೌನ್ ನಂತರ ಜೂನ್ 08ರಂದು ಪ್ರಾಯೋಗಿಕವಾಗಿ ತಿರುಪತಿ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ಈ ವೇಳೆ ದೇವಾಲಯದ ಆಡಳಿತ ವರ್ಗ ಮತ್ತು ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನ ನೀಡಲಾಗಿತ್ತು. ಈ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ನಂತರ ಜೂನ್.11 ಗುರುವಾರದಿಂದ ಸಾಮಾನ್ಯ ಭಕ್ತಾದಿಗಳಿಗೂ ದೇವರ ದರ್ಶನದ ಬಾಗಿಲು ತೆರೆಯಲು ಟಿಟಿಡಿ ಆಡಳಿತ ಮಂಡಳಿ ನಿರ್ಧರಿಸಿದೆ.

ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತಾಧಿಗಳು.

ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿರುವ ಭಕ್ತಾಧಿಗಳು.

  • Share this:
ಹೈದರಾಬಾದ್: ಲಾಕ್‌ಡೌನ್ ನಂತರ ಮೊದಲ ಬಾರಿಗೆ ಜೂನ್.11 ಗುರುವಾರದಿಂದ ತಿರುಪತಿ ತಿರುಮಲ ದೇವಾಲಯದ ಬಾಗಿಲು ಭಕ್ತರಿಗಾಗಿ ತೆರೆಯಲಿದ್ದು, ದೇವರ ದರ್ಶನದ ಟಿಕೆಟ್‌ಗಾಗಿ ಭಕ್ತರು ಇಂದು ಬೆಳಗ್ಗೆಯಿಂದಲೇ ಉದ್ದನೇಯ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂದಿದೆ.

83 ದಿನಗಳ ಲಾಕ್‌ಡೌನ್ ನಂತರ ಜೂನ್ 08ರಂದು ಪ್ರಾಯೋಗಿಕವಾಗಿ ತಿರುಪತಿ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ಈ ವೇಳೆ ದೇವಾಲಯದ ಆಡಳಿತ ವರ್ಗ ಮತ್ತು ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನ ನೀಡಲಾಗಿತ್ತು. ಈ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ನಂತರ ಜೂನ್.11 ಗುರುವಾರದಿಂದ ಸಾಮಾನ್ಯ ಭಕ್ತಾದಿಗಳಿಗೂ ದೇವರ ದರ್ಶನದ ಬಾಗಿಲು ತೆರೆಯಲು ಟಿಟಿಡಿ ಆಡಳಿತ ಮಂಡಳಿ ನಿರ್ಧರಿಸಿದೆ.

ತಿರುಪತಿ ದೇವಾಲಯದ ಆಡಳಿತ ಮಂಡಳಿ ಮಂಗಳವಾರ ಬೆಳಗ್ಗೆ 08 ಗಂಟೆಯಿಂದಲೇ ರಾಜ್ಯಾದ್ಯಂತ ಇರುವ ತನ್ನ ಕೌಂಟರ್‌ಗಳ ಮೂಲಕ ಈಗಾಗಲೇ ದರ್ಶನದ ಟಿಕೆಟ್ ಮಾರಟ ಆರಂಭಿಸಿದೆ. ಪರಿಣಾಮ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಶ್ರೀನಿವಾಸಂ, ಭೂದೇವಿ ಕಾಂಪ್ಲೆಕ್ಸ್ ಮತ್ತು ವಿಷ್ಣುವಾಸಂ ನಲ್ಲಿ ಟಿಕೆಟ್ ನೀಡುವ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸಲು ನೂರಾರು ಜನರು ಮುಂಜಾನೆಯಿಂದಲೇ ಉದ್ದನೆಯ ಸಾಲುಗಳಲ್ಲಿ ನಿಂತಿದ್ದರು.

ಟಿಕೆಟ್‌ಗಾಗಿ ತುಂಬಾ ಜನ ಆಗಮಿಸಿದ್ದ ಕಾರಣ ಕೇವಲ 11 ಗಂಟೆಯ ಒಳಗೆ ಎಲ್ಲಾ ಟಿಕೆಟ್‌ಗಳೂ ಮಾರಾಟವಾಗಿವೆ. ಬಾಲಾಜಿ ದರ್ಶನಕ್ಕೆ ಈವರೆಗೆ ಜೂನ್.30ರ ವರೆಗಿನ ಎಲ್ಲಾ 9,000 ಟಿಕೆಟ್‌ಗಳು ಮಾರಾಟ ಮಾಡಲಾಗಿದ್ದು, ಜೂನ್.12ರ ನಂತರ ಮತ್ತೆ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ : ಚೀನಾ ವಸ್ತುಗಳು-ಆಪ್‌ಗಳನ್ನು ಬಹಿಷ್ಕರಿಸಲು ಬಿಜೆಪಿ ಕರೆ; ಟಿಕ್‌ಟಾಕ್‌ನಲ್ಲಿ ಖಾತೆ ತೆರೆದ ಕೇಂದ್ರ ಸರ್ಕಾರ!
ದೇವರ ದರ್ಶನದ ಟಿಕೆಟ್‌ಗಳನ್ನು ಖರೀದಿಸುವವರಿಗೆ ಎಲ್ಲಾ COVID-19 ಮಾನದಂಡಗಳನ್ನು ಪರಿಶೀಲಿಸಿದ ನಂತರ ದರ್ಶನ ಕ್ಯೂ ಲೈನ್‌ಗಳಿಗೆ ಅನುಮತಿಸಲಾಗುತ್ತದೆ. ಇದಲ್ಲದೆ, ಟಿಕೆಟ್ ಬಯಸುವ ಎಲ್ಲರೂ ಕಡ್ಡಾಯವಾಗಿ ಮುಖವಾಡವನ್ನು ಧರಿಸಬೇಕು ಮತ್ತು ಟಿಕೆಟ್ ಸಾಲುಗಳನ್ನು ಪ್ರವೇಶಿಸುವ ಮೊದಲು ಸ್ಯಾನಿಟೈಜರ್ ಬಳಸಬೇಕು ಎಂದು ತಿಳಿಸಲಾಗಿದೆ. ಟಿಕೆಟ್‌ಗಾಗಿ ಭಕ್ತಾಧಿಗಳು ಕನಿಷ್ಟ 5 ರಿಂದ 6 ಅಡಿ ಅಂತರವನ್ನು ಕಾಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.
First published: