ಪ್ರಧಾನಿ ಕರೆಯಂತೆ ಮನೆಯಲ್ಲೇ ಉಳಿದ ಜನ; ಮೊಬೈಲ್​​ ಇಂಟರ್​​ನೆಟ್​​​ ಬಳಕೆದಾರರ ಹೆಚ್ಚಳ; ಸಂಪೂರ್ಣ ಸೇವೆ ಒದಗಿಸಲು ಡಿಜಿಟಲ್​ ಇಂಡಸ್ಟ್ರೀ ನಿರ್ಧಾರ

ಇನ್ನು, ಸ್ಟಾರ್​​​ ಮತ್ತು ಡಿಸ್ನಿ ಇಂಡಿಯಾ ಸಂಸ್ಥೆ ಮುಖ್ಯಸ್ಥ ಉದಯ್​​ ಶಂಕರ್​​ ನೇತೃತ್ವದಲ್ಲಿ ಟೆಲಿಕಾಂ ಕಂಪನಿಗಳ ಸಭೆಯಲ್ಲಿ ಬಹುತೇಕ ಡಿಜಿಟಲ್​​ ಮೀಡಿಯ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಎನ್​​.ಪಿ ಸಿಂಗ್​(ಸೋನಿ), ಸಂಜಯ್​​ ಗುಪ್ತಾ(ಗೂಗಲ್​​), ಅಜಿತ್​​ ಮೋಹನ್​​(ಫೇಸ್​​ಬುಕ್​​), ಸುಧಾನ್​​ಶು ವಾತ್ಸ್​(ವಿಯಾಕಾಂ), ಗೌರವ್​​ ಗಾಂಧಿ(ಅಮೇಜಾನ್​​​ ಪ್ರೈಮ್​​ ವಿಡಿಯೋ), ಅಂಬಿಕಾ ಖುರಾನಾ(ನೆಟ್​​ಪ್ಲಿಕ್ಸ್​), ವರುಣ್​​​ ನರಾಂಗ್​​(ಹಾಟ್​​ ಸ್ಟಾರ್​​) ಹೀಗೆ ಹಲವು ಡಿಜಿಟಲ್​​​ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

news18-kannada
Updated:March 25, 2020, 4:34 PM IST
ಪ್ರಧಾನಿ ಕರೆಯಂತೆ ಮನೆಯಲ್ಲೇ ಉಳಿದ ಜನ; ಮೊಬೈಲ್​​ ಇಂಟರ್​​ನೆಟ್​​​ ಬಳಕೆದಾರರ ಹೆಚ್ಚಳ; ಸಂಪೂರ್ಣ ಸೇವೆ ಒದಗಿಸಲು ಡಿಜಿಟಲ್​ ಇಂಡಸ್ಟ್ರೀ ನಿರ್ಧಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಮಾ.25): ಕೊರೋನಾ ವೈರಸ್​​​​ ನಿಯಂತ್ರಣಕ್ಕೆ ಮುಂಜಾಗೃತ ಕ್ರಮವಾಗಿ 21 ದಿನಗಳ ಕಾಲ ಇಡೀ ದೇಶ ಸಂಪೂರ್ಣ ಲಾಕ್​​ಡೌನ್​​ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಹಿರಿಯರು, ಯುವಕರು, ಮಕ್ಕಳು ಎಲ್ಲರೂ ಯೋಗದಾನ ಮಾಡುತ್ತಿದ್ದಾರೆ. ಜನತಾ ಕರ್ಫ್ಯೂಗೆ ಬೆಂಬಲ ನೀಡಿದಂತೆಯೇ 21 ದಿನದ ಕರ್ಫ್ಯೂಗೂ ಬೆಂಬಲಿಸಿ ದೇಶಕ್ಕೆ ಸಂಕಟ ಬಂದಾಗ ಹೇಗೆ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂಬುದನ್ನು ತೋರಿಸಲು ಮುಂದಾಗಿದ್ದಾರೆ.  ಹೀಗೆ ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಮನೆಯಲ್ಲಿ ಎಲ್ಲರೂ ಇರುವ ಪರಿಣಾಮ ಮೊಬೈಲ್​​ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಮೊಬೈಲ್​​ ಇಂಟರ್​​ನೆಟ್​​​​ ಬಳಕೆಯಲ್ಲಿ ತೀವ್ರತೆ ಕಾಣಿಸಿಕೊಂಡಿದೆ. ಹಾಗಾಗಿ ಮೊಬೈಲ್​​ ಇಂಟರ್​​ನೆಟ್​​​ ಬಳಕೆದಾರರಿಗೆ ಯಾವುದೇ ತೊಂದರೆ ಆಗದಂತೆ ಕೇಂದ್ರ ಸರ್ಕಾರ ಮತ್ತು ಟೆಲಿಕಾ ಕಂಪನಿಗಳು ಮುನ್ನೆಚ್ಚರಿಕೆ ವಹಿಸಿವೆ.

ಡಿಜಿಟಲ್​​ ಇಂಡಸ್ಟ್ರೀ ಸಂಪೂರ್ಣವಾಗಿ ಮೊಬೈಲ್​​ ಇಂಟರ್​​ನೆಟ್​​ ಬಳಕೆದಾರರಿಗೆ ಸಹಕಾರ ನೀಡಲು ನಿರ್ಧರಿಸಿದೆ. ನೆಟ್​​ವರ್ಕ್​​ ವಿಚಾರದಲ್ಲಿ ಯಾವುದೇ ವ್ಯತ್ಯಯ ಕಾಣಬಾರದು ಎಂಬ ಕಾರಣಕ್ಕಾಗಿ ಸ್ಟಾರ್​​​ ಮತ್ತು ಡಿಸ್ನಿ ಇಂಡಿಯಾ ಸಂಸ್ಥೆ ಮುಖ್ಯಸ್ಥ ಉದಯ್​​ ಶಂಕರ್​​ ನೇತೃತ್ವದಲ್ಲಿ ಟೆಲಿಕಾಂ ಕಂಪನಿಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಜನ ಎಲ್ಲಿಂದ ಬೇಕಾದರು ನೆಟ್​​ವರ್ಕ್​​ ಸಮಸ್ಯೆಯಿಲ್ಲದೆ ಇಂಟರ್​​ನೆಟ್​​ ಬಳಸಬಹುದು ಎಂಬ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇನ್ನು, ಸ್ಟಾರ್​​​ ಮತ್ತು ಡಿಸ್ನಿ ಇಂಡಿಯಾ ಸಂಸ್ಥೆ ಮುಖ್ಯಸ್ಥ ಉದಯ್​​ ಶಂಕರ್​​ ನೇತೃತ್ವದಲ್ಲಿ ಟೆಲಿಕಾಂ ಕಂಪನಿಗಳ ಸಭೆಯಲ್ಲಿ ಬಹುತೇಕ ಡಿಜಿಟಲ್​​ ಮೀಡಿಯ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು. ಎನ್​​.ಪಿ ಸಿಂಗ್​(ಸೋನಿ), ಸಂಜಯ್​​ ಗುಪ್ತಾ(ಗೂಗಲ್​​), ಅಜಿತ್​​ ಮೋಹನ್​​(ಫೇಸ್​​ಬುಕ್​​), ಸುಧಾನ್​​ಶು ವಾತ್ಸ್​(ವಿಯಾಕಾಂ), ಗೌರವ್​​ ಗಾಂಧಿ(ಅಮೇಜಾನ್​​​ ಪ್ರೈಮ್​​ ವಿಡಿಯೋ), ಅಂಬಿಕಾ ಖುರಾನಾ(ನೆಟ್​​ಪ್ಲಿಕ್ಸ್​), ವರುಣ್​​​ ನರಾಂಗ್​​(ಹಾಟ್​​ ಸ್ಟಾರ್​​) ಹೀಗೆ ಹಲವು ಡಿಜಿಟಲ್​​​ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: ಕೊರೋನಾ ವೈರಸ್​​ ನಿಯಂತ್ರಣಕ್ಕೆ ಅಗತ್ಯ ಕ್ರಮ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಹೈ ಅಲರ್ಟ್

ದೇಶ ಮತ್ತು ಗ್ರಾಹಕರ ಹಿತಾಸಕ್ತಿಗಾಗಿ ಇಡೀ ಡಿಜಿಟಲ್​​ ಇಂಡಸ್ಟ್ರೀ ಶ್ರಮಿಸಬೇಕು. ಯಾರಿಗೂ ನೆಟ್​​ವರ್ಕ್​​ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲರೂ ಒಮ್ಮತದಿಂದ ಈ ನಿರ್ಧಾರಕ್ಕೆ ಬದ್ದವಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಎಚ್​​ಡಿಯಿಂದ ಅಲ್ಟ್ರಾ ಎಚ್​​ಡಿಯವರೆಗೂ ಅಥವಾ ಕೇವಲ ಎಸ್​​ಡಿ ಕಟೆಂಟ್​​ 480ಪಿ ನೀಡಲು ತೀರ್ಮಾನ ಮಾಡಲಾಗಿದೆ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಮುಂದಿನ ಏಪ್ರಿಲ್​​ 14ರವರೆಗೂ ಡಿಜಿಟಲ್​​ ಕಂಪನಿಗಳು ಸಂಪೂರ್ಣ ಸೇವೆಯನ್ನು ಒದಗಿಸಲಿವೆ ಎನ್ನಲಾಗಿದೆ.
First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading