Coronavirus: ಚೀನಾದಲ್ಲಿ ಡೆಲ್ಟಾ ರೂಪಾಂತರ ಆರ್ಭಟ, ಬೀಜಿಂಗ್ ಸೇರಿದಂತೆ ಹಲವೆಡೆ ಆತಂಕ!

Delta Variant: ಭಾರತ ಹಾಗೂ ಇತರ ದೇಶಗಳಿಗಾಗಿ ಚೀನಾ ತನ್ನ ವಿಮಾನಯಾನ ಸೇವೆಯನ್ನು ಆರಂಭಿಸಿಲ್ಲ ಅದೇ ರೀತಿ ಬೀಜಿಂಗ್‌ಗೆ ಹೋಗುವ ಹೆಚ್ಚಿನ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಇತರ ನಗರಗಳಿಗೆ ಮರುನಿರ್ದೇಶಿಸಲಾಗಿದೆ. ಬೀಜಿಂಗ್ ಪ್ರವೇಶಿಸುವ ಮುನ್ನ ಪ್ರಯಾಣಿಕರಿಗೆ 21 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ಡೆಲ್ಟಾ ರೂಪಾಂತರ.

ಡೆಲ್ಟಾ ರೂಪಾಂತರ.

  • Share this:

    Delta Variant: ಚೀನಾದಲ್ಲಿ ಡೆಲ್ಟಾ ರೂಪಾಂತರವು ಹಠಾತ್ ಏರಿಕೆಯಾಗಿದ್ದು ರಾಜಧಾನಿ ಬೀಜಿಂಗ್ ಸೇರಿದಂತೆ ದೇಶದ 15 ನಗರಗಳಲ್ಲಿ ಭಾರಿ ಪ್ರಮಾಣದ ಕೋವಿಡ್ ಕೇಸ್‌ಗಳು ವರದಿಯಾಗಿವೆ ಎಂದು ಮಾಧ್ಯಮ ಪ್ರಕಟಣೆಯೊಂದು ತಿಳಿಸಿದೆ. ಡಿಸೆಂಬರ್ 2019ರಲ್ಲಿ ವುಹಾನ್‌ನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾದ ನಂತರ ಇದೇ ಮೊದಲ ಬಾರಿಗೆ ಡೆಲ್ಟಾದ ಆಕ್ರಮಣದಿಂದಾಗಿ ದೇಶವು ಹೆಚ್ಚಿನ ಕೋವಿಡ್ ಕೇಸ್‌ಗಳನ್ನು ದಾಖಲಿಸುತ್ತಿದೆ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ರಾಜಧಾನಿಯಾದ ನಾನ್ಜಿಂಗ್ ವಿಮಾನ ನಿಲ್ದಾಣದಿಂದ ಪ್ರಾರಂಭವಾದ ಕೋವಿಡ್-19 ಕೇಸ್‌ಗಳ ಹೆಚ್ಚಳವು ಇದೀಗ ಐದು ಪ್ರಾಂತ್ಯಗಳು ಹಾಗೂ ಬೀಜಿಂಗ್ ಪುರಸಭೆಗೂ ಹರಡಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.


    ನಾನ್ಜಿಂಗ್ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ವಿಮಾನಗಳ ಸೇವೆ ರದ್ದುಪಡಿಸಲಾಗಿದ್ದು ವಿಮಾನ ನಿಲ್ದಾಣದ ಹೆಚ್ಚಿನ ಸಿಬ್ಬಂದಿಗಳಲ್ಲಿ ವೈರಸ್ ಹರಡಿರುವುದು ಖಚಿತವಾಗಿದೆ. ಡೆಲ್ಟಾ ರೂಪಾಂತರದ ಮೊದಲ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದವು ಎಂದು ಚೀನೀ ನಗರಗಳಿಂದ ವರದಿಯಾದ ಸುದ್ದಿಯಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಇದು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಹರಡಬಹುದು ಎಂಬ ಕಳವಳ ದೇಶದಲ್ಲಿ ಮನೆಮಾಡಿದೆ.


    ಭಾರತ ಹಾಗೂ ಇತರ ದೇಶಗಳಿಗಾಗಿ ಚೀನಾ ತನ್ನ ವಿಮಾನಯಾನ ಸೇವೆಯನ್ನು ಆರಂಭಿಸಿಲ್ಲ ಅದೇ ರೀತಿ ಬೀಜಿಂಗ್‌ಗೆ ಹೋಗುವ ಹೆಚ್ಚಿನ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಇತರ ನಗರಗಳಿಗೆ ಮರುನಿರ್ದೇಶಿಸಲಾಗಿದೆ. ಬೀಜಿಂಗ್ ಪ್ರವೇಶಿಸುವ ಮುನ್ನ ಪ್ರಯಾಣಿಕರಿಗೆ 21 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.


    ಇದನ್ನೂ ಓದಿ: Joint Family: ಕೂಡು ಕುಟುಂಬದಲ್ಲಿ ಇದ್ದರೆ ಬಹಳಷ್ಟು ಪ್ರಯೋಜನಗಳಿವೆ, ಆ ಬಗ್ಗೆ ನೀವು ಯೋಚಿಸಿದ್ದೀರಾ?

    ಆಫ್ರಿಕಾ ದೇಶದ ಉನ್ನತ ಅಧಿಕಾರಿಯೊಬ್ಬರು ವೈಭವೋಪೇತ ಹೋಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅಧಿಕಾರಿ ಹಾಗೂ ಅವರ ನಿಯೋಗದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಅಲ್ಲಿಂದ ನಂತರ ಕೋವಿಡ್‌ನ ಹೊಸ ರೂಪಾಂತರ ಪ್ರಬಲವಾಗಿ ಹರಡುತ್ತಿದೆ ಎಂದು ತಿಳಿದುಬಂದಿದೆ. ಗಾಬರಿಗೊಂಡ ಅಧಿಕಾರಿಗಳು ಹೋಟೆಲ್ ಸೀಲ್‌ಡೌನ್ ಮಾಡಿದರು ಹಾಗೂ ಹೋಟೆಲ್‌ನಲ್ಲಿದ್ದ ನೂರಾರು ಅತಿಥಿಗಳನ್ನು 21 ದಿನದ ಕ್ವಾರಂಟೈನ್‌ನಲ್ಲಿರಿಸಿದ್ದರೂ ಅವರ ಸಂಪರ್ಕಕ್ಕೆ ನೂರಾರು ಜನರು ಬಂದಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ನಾನ್‌ಜಿಂಗ್‌ನಲ್ಲಿ ಇದುವರೆಗೆ 200 ಕೊರೋನಾ ಕೇಸ್‌ಗಳು ವರದಿಯಾಗಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.


    ಹಾಲಿವುಡ್ ಚಿತ್ರ ‘ಅವತಾರ್‌' ಚಿತ್ರೀಕರಣವಾದ ಸ್ಥಳವಾದ ಹುನಾನ್ ಪ್ರಾಂತ್ಯದ ಜನಪ್ರಿಯ ಪ್ರವಾಸಿ ತಾಣ ಜಂಗ್‌ಜಿಯಾಜಿ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಬಹುದಾದ ಇನ್ನೊಂದು ಸ್ಥಳವೆಂದು ನಂಬಲಾಗಿದೆ. ಲುಕೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಾಲ್ಕು ಸೋಂಕಿತರು ಜಂಗ್‌ಜಿಯಾಜ್‌ನಲ್ಲಿ ನಡೆದ ಸಾಂಸ್ಕೃತಿಕ ಪ್ರದರ್ಶನವನ್ನು ವೀಕ್ಷಿಸಿದ್ದರು ಈ ಪ್ರದರ್ಶನದಲ್ಲಿ ಸರಿಸುಮಾರು 2,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದರು ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಜಂಗ್‌ಜಿಯಾಜ್‌ನಿಂದ ಮರಳಿದ್ದ ಎರಡು ಪ್ರಕರಣಗಳಲ್ಲಿ ಕೋವಿಡ್ ರೂಪಾಂತರ ವರದಿಯಾಗಿದೆ ಎಂದು ಬೀಜಿಂಗ್ ವರದಿ ಮಾಡಿದೆ.


    ಇದನ್ನೂ ಓದಿ: Covid Vaccine: ಕೋವಿಶೀಲ್ಡ್, ಕೋವ್ಯಾಕ್ಸಿನ್‌ ಲಸಿಕೆಗಳನ್ನು ಮಿಕ್ಸ್‌ ಮಾಡಬಹುದಾ? ಈ ಬಗ್ಗೆ ಪ್ರಯೋಗ ನಡೆಸಲು ತಜ್ಞರ ಸಮಿತಿ ಶಿಫಾರಸು

    ಹೆಚ್ಚು ಹರಡುವ ಡೆಲ್ಟಾ ರೂಪಾಂತರವು ದೇಶಾದ್ಯಂತ ಶೀಘ್ರವಾಗಿ ಹರಡಲು ಕಾರಣವಾಗಿದೆ ಎಂದು ಪೆಕಿಂಗ್ ಯೂನಿವರ್ಸಿಟಿ ಫಸ್ಟ್ ಹಾಸ್ಪಿಟಲ್‌ನ ಉಸಿರಾಟದ ತಜ್ಞ ವಾಂಗ್ ಗುವಾಂಗ್ಫಾ ಹೇಳಿದ್ದಾರೆ. ಇನ್ನು ಕ್ಸಿಯಾಮೆನ್ ನಗರದಲ್ಲಿ ನ್ಯೂಕ್ಲಿಕ್‌ ಆ್ಯಸಿಡ್ ಪರೀಕ್ಷೆಯಲ್ಲಿ ನಾಲ್ವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ.


    ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದಂತೆ ಚೀನಾದ ಅನೇಕ ನಗರಗಳು ಸ್ಕ್ರೀನಿಂಗ್ ಹೆಚ್ಚಿಸಿದ್ದು ನಾನ್‌ಜಿಂಗ್ ಹಾಗೂ ದೃಢೀಕರಿಸಿದ ಪ್ರಕರಣಗಳು ಪತ್ತೆಯಾಗಿರುವ ಇತರ ನಗರಗಳ ನಿವಾಸಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ.




    ಕೊರೋನಾದ ಮೊದಲ ಪ್ರಕರಣ ಪತ್ತೆಯಾಗಿದ್ದು ಚೀನಾದ ವುಹಾನ್‌ ನಗರದಲ್ಲಾಗಿತ್ತು. ಪ್ರಸ್ತುತ ಚೀನಾ ತನ್ನ ಜನಸಂಖ್ಯೆಯ 40%ನಷ್ಟು ಲಸಿಕಾ ಅಭಿಯಾನ ಪೂರ್ಣಗೊಳಿಸಿದೆ.
    Published by:Soumya KN
    First published: