ಕೊರೋನಾ ತಡೆಗೆ ಕೇಂದ್ರ ಸರ್ಕಾರ ತುರ್ತಾಗಿ ಪ್ರತ್ಯೇಕ ಬಜೆಟ್​ ಮಂಡಿಸಬೇಕು; ಸಿದ್ದರಾಮಯ್ಯ ಒತ್ತಾಯ

ಕೊರೋನಾಗಾಗಿಯೇ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಕೇಂದ್ರದಿಂದ ಪ್ರತ್ಯೇಕ ಬಜೆಟ್ ಮಂಡಿಸಿ ರಾಜ್ಯಗಳಿಗೆ ಹಣಕಾಸು ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

news18-kannada
Updated:March 14, 2020, 3:23 PM IST
ಕೊರೋನಾ ತಡೆಗೆ ಕೇಂದ್ರ ಸರ್ಕಾರ ತುರ್ತಾಗಿ ಪ್ರತ್ಯೇಕ ಬಜೆಟ್​ ಮಂಡಿಸಬೇಕು; ಸಿದ್ದರಾಮಯ್ಯ ಒತ್ತಾಯ
ಸಿದ್ದರಾಮಯ್ಯ
  • Share this:
ಬೆಂಗಳೂರು (ಮಾರ್ಚ್​ 14); ಮಾರಣಾಂತಿಕ ಕೊರೋನಾ ವೈರಸ್​ ತಡೆಗೆ ಮುಂಜಾಗ್ರತಾ ಕ್ರಮಗಳ ಜೊತೆಗೆ ಕೇಂದ್ರ ಸರ್ಕಾರ ತುರ್ತಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಮಾಜಿ ಮುಖ್ಯಮಂ​ತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೊರೋನಾ ವೈರಸ್​ಗೆ ತುತ್ತಾಗಿ ವಿಶ್ವದಾದ್ಯಂತ ಈವರೆಗೆ 4 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಭಾರತದಲ್ಲೂ ಇಬ್ಬರು ಸಾವನ್ನಪ್ಪಿದ್ದು ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲೂ ಒಂದು ವಾರಗಳ ಕಾಲ ಸಾರ್ವಜನಿಕ ವಲಯವನ್ನು ಅಕ್ಷರಶಃ ಬಂದ್ ಮಾಡಲಾಗಿದೆ.

ಈ ಕುರಿತು ಇಂದು ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ಕೊರೋನಾ ಬಗ್ಗೆ ಜನ ಭಯಭೀತರಾಗಿದ್ದಾರೆ. ಇಲ್ಲಿಯವರೆಗೆ ಹೊರದೇಶದಿಂದ ಬಂದಿರೋರಿಗೆ ಮಾತ್ರ ಕೊರೋನಾ ಬಂದಿದೆ. ಸ್ಥಳೀಯರಿಂದ ಕೊರೋನಾ ಬಂದಿಲ್ಲ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸದರೆ ಸಾಲದು. ಅದಕ್ಕೆ ತಕ್ಕದಾಗಿ ಮುಂಜಾಗ್ರತೆ, ಸುರಕ್ಷತಾ ಕ್ರಮ ತಗೋಬೇಕು.

ಕೊರೋನಾಗಾಗಿಯೇ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಕೇಂದ್ರದಿಂದ ಪ್ರತ್ಯೇಕ ಬಜೆಟ್ ಮಂಡಿಸಿ ರಾಜ್ಯಗಳಿಗೆ ಹಣಕಾಸು ನೀಡಬೇಕು. ಆದರೆ, ಕೊರೋನಾ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ಸರ್ಕಾರದ ನಾಯಕರು ಕೊರೋನಾ ತಡೆಯುವ ಬದಲು ಬರೀ ಭಾಷಣ ಬಿಗಿಯುತ್ತಿದ್ದಾರೆ" ಎಂದು ಕಿಡಿಕಾರಿದರು.

ಇದನ್ನೂ ಓದಿ : ಕಲಬುರ್ಗಿಯಲ್ಲಿ ಹೈ ಅಲರ್ಟ್​​ ಘೋಷಣೆ; ಮೃತ ವೃದ್ಧನ ಕುಟುಂಬಸ್ಥರು ಸೇರಿ 76 ಜನರ ಮೇಲೆ ನಿಗಾ

 
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading