ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿದ್ದು ರಾಜ್ಯ ಸರ್ಕಾರದ ಒಳ್ಳೆಯ ನಿರ್ಧಾರ; ತಜ್ಞರ ಅಭಿಪ್ರಾಯ

ಕೊರೋನಾ ವೈರಸ್ ಬೆಂಗಳೂರಿನಲ್ಲಿ ವೇಗ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿರುವುದು ಸೋಂಕು ಹರಡುವ ವೇಗವನ್ನು ತಗ್ಗಿಸುತ್ತದೆ. ಜನರ ಸಂಪರ್ಕ ಕಡಿಮೆಯಾಗುವುದರಿಂದ ಖಂಡಿತವಾಗಿ ಸೋಂಕಿನ ಹರಡುವಿಕೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಒಂದು ವಾರದ ಬಂದ್ ಒಳ್ಳೆಯ ನಿರ್ಧಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:July 11, 2020, 10:18 PM IST
ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿದ್ದು ರಾಜ್ಯ ಸರ್ಕಾರದ ಒಳ್ಳೆಯ ನಿರ್ಧಾರ; ತಜ್ಞರ ಅಭಿಪ್ರಾಯ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಜುಲೈ 11); ಮಾರಣಾಂತಿಕ ಕೊರೋನಾ ಸೋಂಕು ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಅಧಿಕವಾಗುತ್ತಿದ್ದು, ಇದನ್ನು ನಿಯಂತ್ರಿಸುವ ಹಾಗೂ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್‌ ಬುಲೆಟಿನ್‌ ಪ್ರಕಾರ ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 2,798 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. 70 ಮಂದಿ ಅಸುನೀಗಿದ್ಧಾರೆ. ಇಲ್ಲಿಯವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 36,216 ತಲುಪಿದ್ದರೆ, ಸಾವಿನ ಪ್ರಮಾಣ 613ಕ್ಕೆ ಏರಿಕೆಯಾಗಿದೆ. ಇನ್ನೂ ಬೆಂಗಳೂರಿನಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 1,533 ಜನರಿಗೆ ಸೋಂಕು ಖಚಿತಪಟ್ಟಿದೆ. ಅಲ್ಲದೆ, ಸಾವಿನ ಸಂಖ್ಯೆ 229ಕ್ಕೆ ಏರಿಕೆಯಾಗಿದೆ" ಎಂದು ತಿಳಿಸಲಾಗಿದೆ.

ಇದೇ ಕಾರಣಕ್ಕೆ ಹಲವಾರು ತಜ್ಞರು "ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸಲು ಲಾಕ್‌ಡೌನ್‌ ಏಕೈಕ ಮಾರ್ಗ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್‌ ಘೋಷಣೆ ಮಾಡಬೇಕು" ಎಂದು ಒತ್ತಾಯಿಸಿದ್ದರು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಹೆಚ್‌.ಡಿ. ಕುಮಾರಸ್ವಾಮಿ ಸಹ, "ಈ ಹಿಂದೆ ಅನಗತ್ಯ ಸಂದರ್ಭದಲ್ಲಿ ದೇಶವನ್ನು ಲಾಕ್‌ಡೌನ್ ಮಾಡಿ, ಇದೀಗ ಸೋಂಕು ಅಧಿಕವಾಗುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್ ತೆರವು ಮಾಡಿರುವುದು ಸರಿಯಲ್ಲ. ಇದರಿಂದ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿದೆ. ವಾಣಿಜ್ಯ-ವಹಿವಾಟಿಗಿಂತಲೂ ಜನ ಆರೋಗ್ಯ ಮತ್ತು ಜೀವ ಮುಖ್ಯ" ಎಂದು ಆಗ್ರಹಿಸಿದ್ದರು. ಆದರೂ, ರಾಜ್ಯ ಸರ್ಕಾರ ಮತ್ತೆ ಲಾಕ್‌ಡೌನ್‌ ಮಾಡುವ ನಿರ್ಧಾರಕ್ಕೆ ಮುಂದಾಗಿರಲಿಲ್ಲ.

ಆದರೆ, ಇಂದು ವಾಣಿಜ್ಯ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳ ಜೊತೆಗೆ ಸರಣಿ ಸಭೆ ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ ಮಂಗಳವಾರದಿಂದ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ.

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿರುವ ಆರೋಗ್ಯ ಇಲಾಖೆ ತಜ್ಞರು, "ಕೊರೋನಾ ವೈರಸ್ ಬೆಂಗಳೂರಿನಲ್ಲಿ ವೇಗ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿರುವುದು ಸೋಂಕು ಹರಡುವ ವೇಗವನ್ನು ತಗ್ಗಿಸುತ್ತದೆ. ಜನರ ಸಂಪರ್ಕ ಕಡಿಮೆಯಾಗುವುದರಿಂದ ಖಂಡಿತವಾಗಿ ಸೋಂಕಿನ ಹರಡುವಿಕೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಒಂದು ವಾರದ ಬಂದ್ ಒಳ್ಳೆಯ ನಿರ್ಧಾರ.

ಇದನ್ನೂ ಓದಿ : ಕೊರೋನಾ ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆ ಸ್ವಾಗತಾರ್ಹ; ಕುಮಾರಸ್ವಾಮಿ

ಅಲ್ಲದೆ, ಈ ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ಸೌಕರ್ಯಗಳನ್ನು ಸಜ್ಜು ಮಾಡಿಕೊಳ್ಳೋಕೂ ಸರ್ಕಾರಕ್ಕೆ ಸಮಯ ಸಿಕ್ಕಂತಾಗುತ್ತದೆ. ಕೈಮೀರಿ ಹೋಗುತ್ತಿರುವ ಬೆಂಗಳೂರಿನ ಪ್ರಕರಣಗಳಿಗೆ ಮೂಗುದಾರ ಹಾಕುವಲ್ಲಿ ಲಾಕ್ ಡೌನ್ ಯಶಸ್ವಿಯಾಗಲಿದೆ" ಎಂದು ರಾಜ್ಯದ ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Published by: MAshok Kumar
First published: July 11, 2020, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading