HOME » NEWS » Coronavirus-latest-news » THANK YOU CORONAVIRUS HELPERS COVID19 EFFECT UTTARA KANNADA DISTRICT PROVIDED MIGRANT WORKERS SHELTER HK

ಲಾಕ್​ಡೌನ್​ಗೆ ಸಿಲುಕಿದ ವಲಸೆ ಕಾರ್ಮಿಕರ ನರಕಯಾತನೆ – ನಿರ್ಮಾಣ ಹಂತದ ಕಟ್ಟಡದಲ್ಲಿ ಆಶ್ರಯ

Thank You Coronavirus Helpers: ಸುಮಾರು 25ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಇಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಬೆಳಿಗ್ಗೆ ತಿಂಡಿ ಎರಡು ಹೊತ್ತಿನ ಊಟ ಮಾತ್ರ ಸಿಗುತ್ತಿದೆ. ಬದಲಾಗಿ ಇವರಿಗೆ ಜಿಲ್ಲಾಡಳಿತದಿಂದ ಯಾವುದೇ ಸೌಕರ್ಯ ನೀಡಲಾಗಿಲ್ಲ.

news18-kannada
Updated:April 13, 2020, 10:57 PM IST
ಲಾಕ್​ಡೌನ್​ಗೆ ಸಿಲುಕಿದ ವಲಸೆ ಕಾರ್ಮಿಕರ ನರಕಯಾತನೆ – ನಿರ್ಮಾಣ ಹಂತದ ಕಟ್ಟಡದಲ್ಲಿ ಆಶ್ರಯ
ವಲಸೆ ಕಾರ್ಮಿಕರು
  • Share this:
ಕಾರವಾರ(ಏ. 13): ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಲಾಕ್ ಡೌನ್ ನಿಂದ ಸಿಲುಕಿಕೊಂಡ ವಲಸೆ ಕಾರ್ಮಿಕರು ದಿನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ವಲಸೆ ಕಾರ್ಮಿಕರಿಗೆ ಒಂದು ಜಾಗ ನೀಡಬೇಕು ಎನ್ನುವ ತರಾತುರಿಯಲ್ಲಿ ಕಾರವಾರದ ನಿರ್ಮಾಣ ಹಂತದ ಸರಕಾರಿ ಕಟ್ಟಡದಲ್ಲಿ ಆಶ್ರಯ ನೀಡಿದೆ.

ಸುಮಾರು 25ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಇಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಬೆಳಿಗ್ಗೆ ತಿಂಡಿ ಎರಡು ಹೊತ್ತಿನ ಊಟ ಮಾತ್ರ ಸಿಗುತ್ತಿದೆ. ಬದಲಾಗಿ ಇವರಿಗೆ ಜಿಲ್ಲಾಡಳಿತದಿಂದ ಯಾವುದೇ ಸೌಕರ್ಯ ನೀಡಲಾಗಿಲ್ಲ. ಹೇಗಾದರೂ ಮಾಡಿ ಧಾನಿಗಳು ನಮ್ಮ ಪರವಾಗಿ ಬಂದು ಕಣ್ಣು ತೆರೆದು ಉತ್ತಮ ವಾತಾವರಣ ಕಲ್ಪಿಸಿ ಕೊಡುವಂತೆ ಗೋಗರೆಯುತ್ತಿದ್ದಾರೆ.

ಹೊಟ್ಟೆಗೆ ಸಮಸ್ಯೆ ಇಲ್ಲ ಆದರೆ, ಇಲ್ಲಿ ದೂಳು ತುಂಬಿದ ಕಟ್ಟಡದಲ್ಲಿ ಉಳಿದುಕೊಳ್ಳುವುದು ಕಷ್ಟವಾಗಿದೆ. ಇವತ್ತಿನವರೆಗೂ ಯಾವೊಬ್ಬ ಜನಪ್ರತಿನಿಧಿಯಾಗಲಿ ಇಲ್ಲ ಅಧಿಕಾರಿಗಳು ಇವರ ಯೋಗಕ್ಷೇಮವನ್ನು ವಿಚಾರಿಸಿಲ್ಲ. ಕೇವಲ ಮಧ್ಯಾಹ್ನ ರಾತ್ರಿ ಊಟ ಕೊಡುವುದಕ್ಕೆ ಮಾತ್ರ ನಿಯೋಜನೆಗೊಂಡ ಸಿಬ್ಬಂದಿ ಬರುತ್ತಾರೆ. ಆದರೆ, ಆಶ್ರಯ ನೀಡಿದ ಕಟ್ಟದಲ್ಲಿ ದೂಳು ತುಂಬಿದರೂ ಯಾರು ಕಣ್ಣಾಯಿಸಿ‌ ನೋಡುತ್ತಿಲ್ಲ. ಅದೆ ದೂಳಿನ ಜಾಗದಲ್ಲಿ ನಿದ್ದೆ ಮಾಡುತ್ತಿದ್ದಾರೆ.

ಇನ್ನು, ಇಲ್ಲಿ ಸಿಲುಕಿಕೊಂಡ ಕಾರ್ಮಿಕರಲ್ಲಿ ಹೊರ ರಾಜ್ಯದವರ ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯವರು ಇದ್ದಾರೆ. ಇವರಿಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಆಶ್ರಯ ನೀಡಲಾಗಿದ್ದು ದಿನನಿತ್ಯಕ್ಕೂ ನರಕ ಯಾತನೆಯನ್ನ ಅನುಭವಿಸುತ್ತಿದ್ದಾರೆ.

ಹಾಸಿಗೆ ಚಾಪೆ ಇಲ್ಲದೇ ದೂಳು ತುಂಬಿದ ನೆಲದ ಮೇಲೆಯೇ ಮಲಗಿ ಮೈ ಪೂರ್ತಿ ದೂಳಾಗುತ್ತಿದೆ. ಹೀಗಾಗಿ ಅನಾರೋಗ್ಯದ ಆತಂಕ ಇಲ್ಲಿನ ವಲಸೆ ಕಾರ್ಮಿಕರು ಕೂಡಾ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : ಲಾಕ್ ಡೌನ್ ನಿಂದ ಬೀದಿ ಪಾಲಾಗುತ್ತಿರುವ ಕಾರ್ಮಿಕರು - ನರೇಗಾ ಯೋಜನೆಯಡಿ ಕೆಲಸ ಕೊಡಲು ಮುಂದಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ

ಒಟ್ಟಾರೆ ಕಾರ್ಮಿಕರ ಪರವಾಗಿ ಸರಕಾರ ಇದೆ ಎಂದು ಅಭಯ ಹಸ್ತ ನೀಡುವುದು ಒಂದೆಡೆ ಆದರೆ, ಅದೆ ಮಗ್ಗುಲಲ್ಲೇ ವಲಸೆ ಕಾರ್ಮಿಕರು ಈಗ ನಿಮಿಷ ನಿಮಿಷಕ್ಕೂ ನರಕಯಾತನೆ ಅನುಭವಿಸುತ್ತಿದ್ದಾರೆ.(ವರದಿ : ದರ್ಶನ್​​ ನಾಯ್ಕ)
First published: April 13, 2020, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories