HOME » NEWS » Coronavirus-latest-news » TEMPORARY RELIEF FOUND TO CRAFTSMEN FORMER MINISTER CP YOGESHWAR WROTE A LETTER TO DCM ASHWATH NARAYAN HK

ಕರಕುಶಲಕರ್ಮಿಗಳಿಗೆ ತಾತ್ಕಾಲಿಕ ಪರಿಹಾರ ನೀಡಿ: ಡಿಸಿಎಂಗೆ ಪತ್ರ ಬರೆದ ಸಿ.ಪಿ. ಯೋಗೇಶ್ವರ್

ಗೊಂಬೆಗಳನ್ನ ತಯಾರು ಮಾಡುವವರೇ ಸಂಕಷ್ಟದಲ್ಲಿದ್ದಾರೆ. ಕೊರೋನಾ ಎಫೆಕ್ಟ್ ನಿಂದಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

news18-kannada
Updated:May 19, 2020, 10:04 AM IST
ಕರಕುಶಲಕರ್ಮಿಗಳಿಗೆ ತಾತ್ಕಾಲಿಕ ಪರಿಹಾರ ನೀಡಿ: ಡಿಸಿಎಂಗೆ ಪತ್ರ ಬರೆದ ಸಿ.ಪಿ. ಯೋಗೇಶ್ವರ್
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
  • Share this:
ರಾಮನಗರ(ಮೇ. 19): ಚನ್ನಪಟ್ಟಣದ ಬೊಂಬೆಗಳು ಅಂದ್ರೆ ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಆದರೆ, ಕಳೆದ ಎರಡು ತಿಂಗಳಿಂದ ಈ ಗೊಂಬೆಗಳು ಮಾರಾಟವಾಗುತ್ತಿಲ್ಲ. ತಯಾರಾದ ಬೊಂಬೆಗಳು ಹೊರ ರಾಜ್ಯಗಳಿಗೆ ರಫ್ತಾಗುತ್ತಿಲ್ಲ. ಹಾಗಾಗಿ ಬೊಂಬೆ ತಯಾರಕರ ಬದುಕು ಬಹಳ ಕಷ್ಟವಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೂಡಲೇ ಕರಕುಶಲಕರ್ಮಿಗಳಿಗೆ ತಾತ್ಕಾಲಿಕವಾಗಿ ಪರಿಹಾರ ಕೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಅವರಿಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪತ್ರ ಬರೆದು ಒತ್ತಾಯಿಸಿದ್ದಾರೆ.

ಚನ್ನಪಟ್ಟಣದ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿಯೇ ಸರಿಸುಮಾರು 200 ರಕ್ಕೂ ಹೆಚ್ಚು ಜನರು ಬೊಂಬೆ ತಯಾರಿಕೆಯಲ್ಲಿಯೇ ತಮ್ಮ ಜೀವನವನ್ನ ಕಂಡುಕೊಂಡಿದ್ದಾರೆ. ಆದರೆ, ಎರಡು ತಿಂಗಳಿಂದ ಅವರಿಗೆ ಕೆಲಸವೇ ಇಲ್ಲದಂತಾಗಿದೆ. ಇಡೀ ವಿಶ್ವದಲ್ಲೇ ಚನ್ನಪಟ್ಟಣ ಗೊಂಬೆಗಳು ಅಂದ್ರೆ ಹೆಸರುವಾಸಿ. ಆದರೆ ಈಗ ಆ ಗೊಂಬೆಗಳನ್ನ ತಯಾರು ಮಾಡುವವರೇ ಸಂಕಷ್ಟದಲ್ಲಿದ್ದಾರೆ. ಕೊರೋನಾ ಎಫೆಕ್ಟ್ ನಿಂದಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

ಡಿಸಿಎಂ ಗೆ ಬರೆದ ಪತ್ರ


ವಿದೇಶಿ ಪ್ರವಾಸಿಗರಂತೂ ಕಳೆದ ಎರಡು ತಿಂಗಳಿಂದ ಇತ್ತ ಮುಖವೇ ಮಾಡುತ್ತಿಲ್ಲ. ಹಾಗಾಗಿ ರಾಮನಗರ - ಚನ್ನಪಟ್ಟಣದಲ್ಲಿದ್ದ ಟಾಯ್ಸ್ ಶೋ ರೂಮ್​ಗಳು ಸಹ ಬಂದ್ ಆಗಿವೆ. ಇನ್ನು ಕರಕುಶಲಕರ್ಮಿಗಳ ಬಳಿ ತಯಾರಾಗಿರುವ ಆಟಿಕೆಗಳನ್ನ ಶೋ ರೂಮ್ ನವರು ಖರೀದಿ ಮಾಡುತ್ತಿಲ್ಲ. ಖರೀದಿ ಮಾಡಿದರು ಸಹ ಅತೀ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ತಯಾರಿಕರಿಗೆ ದೊಡ್ಡಮಟ್ಟದ ಲಾಸ್ ಆಗುತ್ತಿದೆ.

ಇದನ್ನೂ ಓದಿ : ಕೊರೋನಾ ಪರೀಕ್ಷೆಯ ಬಳಿಕ ತಕ್ಷಣ ಸಿಗುತ್ತಿಲ್ಲ ವರದಿ; ತುಮಕೂರಿನಲ್ಲಿ ಹೊಸ ತಲೆನೋವು

ಹಾಗಾಗಿ ಇದೆಲ್ಲವನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಕ್ರಮವಹಿಸಬೇಕು. ಚನ್ನಪಟ್ಟಣ ಗೊಂಬೆಗಳ ಮೂಲಕ ಭಾರತ ದೇಶದ ಹಿರಿಮೆಯನ್ನ ಎತ್ತಿಹಿಡಿಯುತ್ತಿದ್ದ ಕರಕುಶಲಕರ್ಮಿಗಳಿಗೆ ನೆರವಾಗಬೇಕೆಂದು ಸಿ.ಪಿ.ಯೋಗೇಶ್ವರ್ ಒತ್ತಾಯಿಸಿದ್ದಾರೆ.

(ವರದಿ: ಎ ಟಿ ವೆಂಕಟೇಶ್)
First published: May 19, 2020, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories