ಉಚಿತ ಲಸಿಕೆ ಘೋಷಿಸಿದ ತೆಲಂಗಾಣ, ಉತ್ತರಾಖಂಡ್ ಮುಖ್ಯಮಂತ್ರಿಗಳು; BSY ಸರ್ಕಾರದ ನಿರ್ಧಾರವೇನು?

ಜಾರ್ಖಂಡ್, ಗೋವಾ, ಛತ್ತೀಸ್​ಗಢ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಹಾಗೂ ಸಿಕ್ಕಿಂನಲ್ಲಿ ಉಚಿತವಾಗಿ ಲಸಿಕೆ ಹಂಚಿಕೆ ಮಾಡುವುದಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಉಚಿತವಾಗಿ ಲಸಿಕೆ ನೀಡುವಂತೆ ಬಿಎಸ್​ವೈ ಸರ್ಕಾರದ  ಮೇಲೆ ಒತ್ತಡ ಹೆಚ್ಚಾಗಿದೆ.

ಬಿ.ಎಸ್​. ಯಡಿಯೂರಪ್ಪ.

ಬಿ.ಎಸ್​. ಯಡಿಯೂರಪ್ಪ.

  • Share this:
ಬೆಂಗಳೂರು: ಕೊರೋನಾ 2ನೇ ಅಲೆ ಭೀಕರತೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಲಸಿಕಾ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಿದೆ. ರಾಜ್ಯ ಸರ್ಕಾರಗಳೇ ವ್ಯಾಕ್ಸಿನ್​ ಕಂಪನಿಯಿಂದ ಲಸಿಕೆ ಖರೀದಿಸಿ ಜನರಿಗೆ ನೇರವಾಗಿ ನೀಡಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಕ್ರಿಯಗೊಂಡಿರುವ ರಾಜ್ಯ ಸರ್ಕಾರಗಳು ಲಸಿಕೆ ಅಭಿಯಾನ ಸಂಬಂಧ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ತೆಲಂಗಾಣ ಹಾಗೂ ಉತ್ತರಾಖಂಡ್​ ಸರ್ಕಾರಗಳು ತನ್ನ ರಾಜ್ಯದ ಪ್ರತಿಯೊಬ್ಬರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿವೆ.

ತೆಲಂಗಾಣ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಘೋಷಿಸಿದ ಸಿಎಂ ಕೆ.ಚಂದ್ರಶೇಖರ್​ ರಾವ್​ ಇದಕ್ಕಾಗಿ 2,500 ಕೋಟಿ ಮೀಸಲಿಟ್ಟಿದ್ದಾರೆ. ಜನರ ಪ್ರಾಣ ಉಳಿಸುವುದು ನಮ್ಮ ಆದ್ಯತೆ. ರಾಜ್ಯದ ಜನರ ಆರೋಗ್ಯಕ್ಕಾಗಿ ಹಣ ವ್ಯಯಿಸುವುದು ಸಮಂಜಸ. ನೂರಾರು ಕೋಟಿ ಖರ್ಚು ಮಾಡಲು ಇದಕ್ಕಿಂತ ಉತ್ತಮ ಕಾರಣಬೇಕೆ. ಹೀಗಾಗಿ ರಾಜ್ಯದ ಪ್ರತಿಯೊಬ್ಬರಿಗೆ ನಮ್ಮ ಸರ್ಕಾರ ಉಚಿತವಾಗಿ, ಶೀಘ್ರವಾಗಿ ಲಸಿಕೆ ನೀಡಲಿದೆ ಎಂದು ಸಿಎಂ ಕೆಸಿಆರ್​ ರಾವ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸತ್ಯ ಇಲ್ಲಿದೆ: ಮಹಿಳೆಯರು ಋತುಸ್ರಾವದ 5 ದಿನ ಮುನ್ನ, 5 ದಿನ ನಂತರ ವ್ಯಾಕ್ಸಿನ್​ ಪಡೆಯುವಂತಿಲ್ವಾ?

ಇನ್ನು ಉತ್ತರಾಖಂಡ್​​ ಸಿಎಂ ತೀರ್ಥಸಿಂಗ್​ ರಾವತ್​ ಸಹ ತನ್ನ ರಾಜ್ಯದ ಜನಕ್ಕೆ ಉಚಿತ ಲಸಿಕೆ ಘೋಷಿಸಿದ್ದಾರೆ. ಉತ್ತರಾಖಂಡದ 50 ಲಕ್ಷ ನಾಗರೀಕರ ಲಸಿಕಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಜಾರ್ಖಂಡ್, ಗೋವಾ, ಛತ್ತೀಸ್​ಗಢ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಹಾಗೂ ಸಿಕ್ಕಿಂನಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ಹಂಚಿಕೆ ಮಾಡುವುದಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ರಾಜ್ಯದಲ್ಲೂ ಉಚಿತವಾಗಿ ಲಸಿಕೆ ನೀಡುವಂತೆ ಬಿಎಸ್​ವೈ ಸರ್ಕಾರದ  ಮೇಲೆ ಒತ್ತಡ ಹೆಚ್ಚಾಗಿದೆ.

ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಉಚಿತ ಲಸಿಕೆ ನೀಡಿ ನೆರವಿಗೆ ಬನ್ನಿ ಎಂದು
ಸಾರ್ವಜನಿಕ ವಲಯದಿಂದ ಹಾಗೂ ಪ್ರತಿಪಕ್ಷಗಳಿಂದ ಸಿಎಂ‌ ಬಿಎಸ್​ ಯಡಿಯೂರಪ್ಪ ಅವರ  ಮೇಲೆ ನಿರಂತರ ಒತ್ತಡ ಹಾಕಲಾಗುತ್ತಿದೆ. ಕೋವಿಡ್​ನಿಂದ‌ ಜನ ನಲುಗಿ ಹೋಗಿದ್ದಾರೆ. ಬಡಜನರು ಹಣ ಕೊಟ್ಟು ಲಸಿಕೆ ಪಡೆಯಲು ಸಾಧ್ಯವಿಲ್ಲ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಸರ್ಕಾರವೇ ಮುಂದೆ ಬಂದು ಉಚಿತ ಲಸಿಕೆ ನೀಡುವಂತೆ‌ ಸಿಎಂಗೆ ಆಂತರಿಕವಾಗಿ ಸ್ವಪಕ್ಷೀಯರಿಂದಲೂ ಒತ್ತಡ ಬೀಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದು, ಸಂಬಂಧಪಟ್ಟ ಸಚಿವರು,ಲ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
Published by:Kavya V
First published: