ಬೆಂಗಳೂರು (ಮೇ 30); ಮಂಡ್ಯ ಮೂಲದ ವ್ಯಕ್ತಿಯೊಬ್ಬರು ಇಂದು ತೆಲಂಗಾಣದ ಮೆಡಿಕೋವರ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಆದರೆ, ಆಸ್ಪತ್ರೆಯ ಸಂಪೂರ್ಣ ಬಿಲ್ ಕಟ್ಟದ ಕಾರಣ ಕುಟುಂಬಸ್ಥರಿಗೆ ಮೃತದೇಹ ನೀಡಲು ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ಥರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಕೊನೆಗೆ ಸಹಾಯ ಕೇಳಿ ಡಿ.ಕೆ. ಶಿವಕುಮಾರ್ ಮಾಡಿದ ಒಂದೇ ಒಂದು ಟ್ವೀಟ್ಗೆ ತೆಲಂಗಾಣ ಸರ್ಕಾರ ಸ್ಪಂದಿಸಿ, ಸ್ವತಃ ಸಚಿವ ಕೆ.ಟಿ. ರಾಮಾರಾವ್ ಮುಂದೆ ನಿಂತು ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿರುವ ಅಪರೂಪದ ಘಟನೆ ಇಂದು ನಡೆದಿದೆ.
ಇಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದ ಡಿ.ಕೆ. ಶಿವಕುಮಾರ್, "ತೆಲಂಗಾಣದಲ್ಲಿ ಮಂಡ್ಯದ ಮೂಲದ ವ್ಯಕ್ತಿ ಕೋವಿಡ್ ಕಾರಣಕ್ಕೆ ಹೈದ್ರಾಬಾದ್ ನ ಮೆಡಿಕೋವರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಅಸ್ಪತ್ರೆಯವರು ಕುಟುಂಬಸ್ಥರಿಗೆ ವ್ಯಕ್ತಿಯ ಶವವನ್ನ ಹಸ್ತಾಂತರಿಸುತ್ತಿಲ್ಲ. 7.5 ಲಕ್ಷ ಬಿಲ್ ಪಾವತಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ಕುಟುಂಬವರು ಇನ್ನೂ 2 ಲಕ್ಷ ಮಾತ್ರ ಪಾವತಿಸಬೇಕು. ಆದರೂ, ಮೃತದೇಹ ನೀಡುತ್ತಿಲ್ಲ.
Shivakumar Garu, Will take care immediately if you can pass on her contact information
ಈ ವಿಚಾರವನ್ನು ಮಂಡ್ಯದ ಮಂಜುಳಾ ಎಂಬುವವರು ನನ್ನ ಗಮನಕ್ಕೆ ತಂದಿದ್ದಾರೆ. ಕೂಡಲೇ ಇದರ ಬಗ್ಗೆ ಗಮನಹರಿಸಿ. ಆಸ್ಪತ್ರೆಯವರಿಂದ ಶವವನ್ನ ಕೊಡಿಸಿಕೊಡಿಸಿ" ಎಂದು ಡಿ.ಕೆ. ಶಿವಕುಮಾರ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಈ ಟ್ವೀಟ್ಗೆ ಕೂಡಲೇ ಪ್ರತಿಕ್ರಿಯೆ ನೀಡಿರುವ ತೆಲಂಗಾಣದ ಕೈಗಾರಿಕೆ ಮತ್ತು ಐಟಿ-ಬಿಟಿ ಸಚಿವ ಕೆ.ಟಿ. ರಾಮಾರಾವ್, ಶಿವಕುಮಾರ್ ಜೀ ನೀವು ಆತಂಕಪಡುವ ಅಗತ್ಯ ಇಲ್ಲ. ಸಂಬಂಧಪಟ್ಟ ಕುಟುಂಬಸ್ಥರ ದೂರವಾಣಿ ಸಂಖ್ಯೆಯನ್ನು ನೀಡಿ, ನಾವು ಅವರಿಗೆ ಸಹಾಯ ಮಾಡುತ್ತೇವೆ" ಎಂದು ತಿಳಿಸಿದ್ದಾರೆ. ಅದರಂತೆ ಸಹಾಯ ಹಸ್ತವನ್ನೂ ಚಾಚಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ತರಿಗೆ ಸಹಾಯ ಮಾಡುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮನವಿಗೆ ತೆಲಂಗಾಣ ಸರ್ಕಾರ ಕೂಡಲೇ ಸ್ಪಂದಿಸಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣ ಭಾರೀ ಮೆಚ್ಚುಗೆ ಗಳಿಸುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ