HOME » NEWS » Coronavirus-latest-news » TELANGANA GOVT TO CONDUCTING EXPERIMENTAL DELIVERY OF COVID 19 VACCINES USING DRONES KVD

ಆಗಸದಲ್ಲಿ ಹಾರಿ ಬರುತ್ತಾ ವ್ಯಾಕ್ಸಿನ್.. ತೆಲುಗು ಸಿನಿಮಾಗಳ ಶೈಲಿಯಲ್ಲೇ ಇದೆ ತೆಲಂಗಾಣ ಸರ್ಕಾರದ ಐಡಿಯಾ!

ಕಾರುಗಳು ಹಾರದಿದ್ದರೆ ಅದು ತೆಲುಗು ಸಿನಿಮಾನೇ ಅಲ್ಲ ಎಂದು ಕಾಲೆಳೆಯುತ್ತಿದ್ದವರಿಗೆ ತೆಲಂಗಾಣ ಸರ್ಕಾರ ಸೆಡ್ಡು ಹೊಡೆದಿದೆ. ಸಿನಿಮಾಗಳಲ್ಲಿ ಮಾತ್ರ ಅಲ್ಲ ನಿಜವಾಗಿಯೂ ನಾವು ವಿಭಿನ್ನವಾಗಿ ಯೋಚಿಸಿ ಮ್ಯಾಜಿಕ್​ ಸೃಷ್ಟಿಸಬಲ್ಲೆವು ಎಂದು ತೋರಿಸಿಕೊಡಲು ಮುಂದಾಗಿದ್ದಾರೆ.

Kavya V | news18-kannada
Updated:April 30, 2021, 4:57 PM IST
ಆಗಸದಲ್ಲಿ ಹಾರಿ ಬರುತ್ತಾ ವ್ಯಾಕ್ಸಿನ್.. ತೆಲುಗು ಸಿನಿಮಾಗಳ ಶೈಲಿಯಲ್ಲೇ ಇದೆ ತೆಲಂಗಾಣ ಸರ್ಕಾರದ ಐಡಿಯಾ!
ಸಾಂದರ್ಭಿಕ ಚಿತ್ರ
  • Share this:
ಹೈದ್ರಾಬಾದ್​: ದೇಶವನ್ನು ಕಾಡುತ್ತಿರುವ ಕೊರೋನಾದ ವಿರುದ್ಧ ನಮಗಿರುವ ಒಂದೇ ಅಸ್ತ್ರ ವ್ಯಾಕ್ಸಿನ್​​. ನಾಳೆಯಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರು. ಕೇಂದ್ರ ಸರ್ಕಾರ ವಯಸ್ಕರೆಲ್ಲಾ ವ್ಯಾಕ್ಸಿನ್​ ಪಡೆಯಬಹುದು ಎಂದು ಘೋಷಿಸಿದಾಗಿನಿಂದ ಎಲ್ಲಾ ರಾಜ್ಯಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿವೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ತನ್ನ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿವೆ. ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡಲು ಸಮರೋಪಾದಿ ಕೆಲಸ ಮಾಡುತ್ತಿವೆ. ಈ ಮಧ್ಯೆ ತೆಲಂಗಾಣ ಸರ್ಕಾರ ತಮ್ಮ ತೆಲುಗು ಸಿನಿಮಾಗಳ ಶೈಲಿಯಲ್ಲೇ ಲಸಿಕೆ ವಿತರಣೆಗೆ ಹೊಸ ಐಡಿಯಾ ಮಾಡಿದ್ದಾರೆ.

ತೆಲುಗು ಸಿನಿಮಾ ಅಂದ ಮೇಲೆ ಅದರಲ್ಲಿ ಹತ್ತಾರು ಕಾರುಗಳು ಆಗಸದಲ್ಲಿ ಹಾರುವ ದೃಶ್ಯ ಇದ್ದೇ ಇರುತ್ತೆ. ಇದು ತೆಲುಗು ಸಿನಿಮಾಗಳ ಟ್ರೇಡ್​ ಮಾರ್ಕ್​ ಅಂದ್ರು ತಪ್ಪಾಗಲ್ಲ. ಇದನ್ನೇ ಹೋಲುವ ಐಡಿಯಾವೊಂದನ್ನು ತೆಲಂಗಾಣ ಸರ್ಕಾರ ಜಾರಿಗೆ ತರಲು ಚಿಂತಿಸಿದೆ. ತೆಲುಗು ಜನಕ್ಕೆ ಲಸಿಕೆಯನ್ನು ಆಗಸದ ಮೂಲಕ ಕೊಟ್ಟರೆ ಹೇಗೆ ಎಂದು ಅಲ್ಲಿನ ಸರ್ಕಾರ ಚರ್ಚೆ ನಡೆಸಿದೆ. ಆಗಸದಲ್ಲಿ ಅಂದರೆ ಡ್ರೋಣ್​ ಮೂಲಕ ಲಸಿಕೆಯನ್ನು ವಿತರಿಸುವ ಬಗ್ಗೆ ಪ್ರಾಯೋಗಿಕ ಪರೀಕ್ಷೆಗೆ ತೆಲಂಗಾಣ ಸರ್ಕಾರ ಮುಂದಾಗಿದೆ.

ಕ್ಷಿಪ್ರವಾಗಿ, ತಂತ್ರಜ್ಞಾನ ಬಳಸಿಕೊಂಡು ಲಸಿಕೆ ವಿತರಿಸಲು ತೆಲಂಗಾಣ ಸರ್ಕಾರ ಗಂಭೀರವಾಗಿ ಚಿಂತಿಸಿದೆ. ವ್ಯಾಕ್ಸಿನ್​ ಸಾಗಾಟಕ್ಕೆ ಡ್ರೋಣ್​ ಬಳಸುವ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವನ್ನು ಸಿಎಂ ಕೆ.ಚಂದ್ರಶೇಖರ್​ ರಾವ್​ ಸರ್ಕಾರ ಸಂಪರ್ಕಿಸಿದೆ. ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಿರುವ ಸಚಿವಾಲಯ ಡ್ರೋಣ್​​ ಪ್ರಾಯೋಗಿಕ ಬಳಕೆಗೆ ಅನುಮತಿ ನೀಡಿದೆ. ಡ್ರೋಣ್​ ಮೂಲಕ ವ್ಯಾಕ್ಸಿನ್​ ವಿತರಣೆ ಪ್ರಾಯೋಗಿಕವಾಗಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಜನರು ಇರುವವಲ್ಲಿಗೆ ಲಸಿಕೆ ಆಗಸದಲ್ಲಿ ಹಾರಿಬರಲಿದೆ.

ಇದನ್ನೂ ಓದಿ: Real Hero: ಬಿರು ಬೇಸಿಗೆಯಲ್ಲಿ ಗಂಟೆಗಟ್ಟಲೇ PPE ಕಿಟ್ ಧರಿಸುವ ವೈದ್ಯನ ಕರುಣಾಜನಕ ಕಥೆ..!

ಕಾರುಗಳು ಹಾರದಿದ್ದರೆ ಅದು ತೆಲುಗು ಸಿನಿಮಾನೇ ಅಲ್ಲ ಎಂದು ಕಾಲೆಳೆಯುತ್ತಿದ್ದವರಿಗೆ ತೆಲಂಗಾಣ ಸರ್ಕಾರ ಸೆಡ್ಡು ಹೊಡೆದಿದೆ. ಸಿನಿಮಾಗಳಲ್ಲಿ ಮಾತ್ರ ಅಲ್ಲ ನಿಜವಾಗಿಯೂ ನಾವು ವಿಭಿನ್ನವಾಗಿ ಯೋಚಿಸಿ ಮ್ಯಾಜಿಕ್​ ಸೃಷ್ಟಿಸಬಲ್ಲೆವು ಎಂದು ತೋರಿಸಿಕೊಡಲು ಮುಂದಾಗಿದ್ದಾರೆ. ಸದ್ಯ ಪ್ರಯೋಗಿಕ ಹಂತದಲ್ಲಿರುವ ಡ್ರೋನ್​ ವ್ಯಾಕ್ಸಿನ್​ ಯೋಜನೆ ಯಶಸ್ವಿಯಾಗಲಿ ಅನ್ನೋದು ಎಲ್ಲರ ಆಶಯ. ಇನ್ನು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್​ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Published by: Kavya V
First published: April 30, 2021, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories