ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಸಾಗಿಸಲು ಟ್ರ್ಯಾಕ್ಟರ್ ಓಡಿಸಿದ ಡಾಕ್ಟರ್​..!

ಪರಿಸ್ಥಿತಿ ಬಿಗಡಾಯಿಸಿದಾಗ ಡಾಕ್ಟರ್ ಶ್ರೀರಾಮ್ ಅವರೇ ಟ್ರ್ಯಾಕ್ಟರ್​​ ಓಡಿಸಿಕೊಂಡು ಅಂತ್ಯಸಂಸ್ಕಾರ ಮಾಡುವ ಸ್ಥಳಕ್ಕೆ ಹೋದರು. ಕೋವಿಡ್​ ನಿಯಮಗಳ ಪ್ರಕಾರವೇ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿತು. ವೈದ್ಯರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.

news18-kannada
Updated:July 13, 2020, 10:29 PM IST
ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಸಾಗಿಸಲು ಟ್ರ್ಯಾಕ್ಟರ್ ಓಡಿಸಿದ ಡಾಕ್ಟರ್​..!
ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸಾಗಿಸಲು ಟ್ರ್ಯಾಕ್ಟರ್ ಓಡಿಸಿದ ವೈದ್ಯ
  • Share this:
ತೆಲಂಗಾಣ(ಜು.13): ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಸಾಗಿಸಲು ಟ್ರ್ಯಾಕ್ಟರ್ ಚಾಲಕ ನಿರಾಕರಿಸಿದ ಹಿನ್ನೆಲೆ,  ಸರ್ಕಾರಿ ವೈದ್ಯನೇ ಸ್ಟೆತಾಸ್ಕೋಪ್ ಬದಿಗಿಟ್ಟು ಟ್ರ್ಯಾಕ್ಟರ್ ಓಡಿಸಿರುವ ಅಪರೂಪದ ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ. 

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿರುವುದು ವರದಿಯಾಗಿದೆ. ಸುಮಾರು 45 ವರ್ಷದ ವೈದ್ಯ ಪೆಂಡ್ಯಾಲ ಶ್ರೀರಾಮ್​​ ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಂದು ಕೊರೋನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಸಾಗಿಸಲು ಟ್ರ್ಯಾಕ್ಟರ್​​​ವೊಂದನ್ನು ತರಿಸಲಾಗಿತ್ತು. ಆದರೆ ಟ್ರ್ಯಾಕ್ಟರ್ ಚಾಲಕ ಮೃತದೇಹವನ್ನು ಸಾಗಿಸಲು ಹಿಂಜರಿದು, ತಮಗೂ ಕೊರೋನಾ ತಗುಲುತ್ತದೆ ಎಂದು ಹೆದರಿದ್ದಾನೆ.

ಆಗ ಪೆದ್ದಪಲ್ಲಿಯ  ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ. ಆಗ ಡಾಕ್ಟರ್​ ಶ್ರೀರಾಮ್​ ಅವರು ಖುದ್ದು ತಾವಾಗಿಯೇ ಟ್ರ್ಯಾಕ್ಟರ್​ ಓಡಿಸಲು ಮುಂದಾಗಿದ್ದಾರೆ. ಜೂನ್​ 10ರಂದು ಕೊರೋನಾ ಪಾಸಿಟಿವ್​ ಬಂದಿದ್ದ 45 ವರ್ಷದ ವ್ಯಕ್ತಿ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಇದು ಆ ಜಿಲ್ಲಾಸ್ಪತ್ರೆಯಲ್ಲಿ ಮೊದಲ ಕೊರೋನಾ ಸಾವಿನ ಪ್ರಕರಣವಾಗಿದೆ.

ಹೀಗಾಗಿ ಈ ಸಾವು ಅಲ್ಲಿನ ಜನರಲ್ಲಿ ಭೀತಿ ಉಂಟು ಮಾಡಿತ್ತು. ಆಸ್ಪತ್ರೆಯ ಸಿಬ್ಬಂದಿ ಕೂಡ ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಹಿಂಜರಿದರು. ಮುನ್ಸಿಪಲ್ ಸಿಬ್ಬಂದಿ ಸಹಕರಿಸಿದರೂ ಸಹ ಟ್ರ್ಯಾಕ್ಟರ್ ಚಾಲಕ ಭೀತಿಯಿಂದ ಅಲ್ಲಿಂದ ಹೊರಟು ಹೋಗಿದ್ದಾನೆ ಎನ್ನಲಾಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆ

ಮೃತ ವ್ಯಕ್ತಿಯ ಕುಟುಂಬಸ್ಥರು ಸಹ ಆ ಸಮಯದಲ್ಲಿ ಅಸಹಾಯಕರಾಗಿದ್ದರು. ವೈದ್ಯರ ಪ್ರಕಾರ, ಆಸ್ಪತ್ರೆಯಲ್ಲಿ ಯಾವುದೇ ಆ್ಯಂಬುಲೆನ್ಸ್ ಸೇವೆ ಲಭ್ಯವಿರಲಿಲ್ಲ. ಜಿಲ್ಲಾಧಿಕಾರಿ ಆಸ್ಪತ್ರೆ ಸಿಬ್ಬಂದಿಗೆ ಪಿಪಿಇ ಕಿಟ್ ಮತ್ತು ಬಾಡಿ ಬ್ಯಾಗ್ಸ್​​​​ಗಳನ್ನು ಕೊಟ್ಟಿದ್ದರು.

ಪರಿಸ್ಥಿತಿ ಬಿಗಡಾಯಿಸಿದಾಗ ಡಾಕ್ಟರ್ ಶ್ರೀರಾಮ್ ಅವರೇ ಟ್ರ್ಯಾಕ್ಟರ್​​ ಓಡಿಸಿಕೊಂಡು ಅಂತ್ಯಸಂಸ್ಕಾರ ಮಾಡುವ ಸ್ಥಳಕ್ಕೆ ಹೋದರು. ಕೋವಿಡ್​ ನಿಯಮಗಳ ಪ್ರಕಾರವೇ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿತು. ವೈದ್ಯರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.ತೆಲಂಗಾಣದ ಹಣಕಾಸು ಸಚಿವ ಹರೀಶ್ ರಾವ್​ ಥನ್ನೇರು ವೈದ್ಯ ಶ್ರೀರಾಮ್​ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀರಾಮ್ ಅವರು ಕೊರೋನಾ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಮಾನವೀಯತೆ ಇನ್ನೂ ಸಹ ಜೀವಂತವಾಗಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಡಾಕ್ಟರ್ ಶ್ರೀರಾಮ್ಅವರು, ವೈದ್ಯಕೀಯ ವೃತ್ತಿ ಜೊತೆಗೆ ವ್ಯವಸಾಯವನ್ನು ಕೂಡ ಮಾಡುತ್ತಾರೆ. ಕೇವಲ ವೈದ್ಯ ಮಾತ್ರವಲ್ಲದೇ ಸರ್ಕಾರಿ ಸೇವಕರಾಗಿದ್ದಾರೆ.
Published by: Latha CG
First published: July 13, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading