ತೆಲಂಗಾಣದಲ್ಲಿ ಏ.16ರವರೆಗೂ ಕರ್ಫ್ಯೂ ಜಾರಿ; ಸಿಎಂ ಕೆ ಚಂದ್ರಶೇಖರ್​​ ರಾವ್​​ ಘೋಷಣೆ

ಜತೆಗೆ, ರಾಜ್ಯದ ಎಲ್ಲಾ ಶಾಕರು ಜನರಿಗೆ ಸಿಗಬೇಕು. ಇಂತಹ ಕಠಿಣ ಸಂದರ್ಭದಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಬೇಕು. ಅಂತೆಯೇ ಕ್ವಾರಂಟೈನ್​​ಗೊಳಗಾದವರ ಪಾಸ್​ಪೋರ್ಟ್​ ಅನ್ನು ಸರ್ಕಾರ ವಾಪಸ್ಸು ಪಡೆಯುತ್ತಿದೆ. ಒಂದು ವೇಳೆ ಅವರು ಕೂಡ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಪಾಸ್ ಪೋರ್ಟ್ ರದ್ದು ಮಾಡಲಾಗುವುದು ಎಂದಿದ್ದರು ಸಿಎಂ ಕೆಸಿಆರ್​​.

news18-kannada
Updated:March 26, 2020, 5:32 PM IST
ತೆಲಂಗಾಣದಲ್ಲಿ ಏ.16ರವರೆಗೂ ಕರ್ಫ್ಯೂ ಜಾರಿ; ಸಿಎಂ ಕೆ ಚಂದ್ರಶೇಖರ್​​ ರಾವ್​​ ಘೋಷಣೆ
ಜತೆಗೆ, ರಾಜ್ಯದ ಎಲ್ಲಾ ಶಾಕರು ಜನರಿಗೆ ಸಿಗಬೇಕು. ಇಂತಹ ಕಠಿಣ ಸಂದರ್ಭದಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಬೇಕು. ಅಂತೆಯೇ ಕ್ವಾರಂಟೈನ್​​ಗೊಳಗಾದವರ ಪಾಸ್​ಪೋರ್ಟ್​ ಅನ್ನು ಸರ್ಕಾರ ವಾಪಸ್ಸು ಪಡೆಯುತ್ತಿದೆ. ಒಂದು ವೇಳೆ ಅವರು ಕೂಡ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಪಾಸ್ ಪೋರ್ಟ್ ರದ್ದು ಮಾಡಲಾಗುವುದು ಎಂದಿದ್ದರು ಸಿಎಂ ಕೆಸಿಆರ್​​.
  • Share this:
ಹೈದರಾಬಾದ್​​​(ಮಾ.26): ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್​​ಡೌನ್ ಅವಧಿಯನ್ನು ತೆಲಂಗಾಣದಲ್ಲಿ ವಿಸ್ತರಿಸಲಾಗಿದೆ. ಮುಂದಿನ ಏ.14ರವರೆಗೆ ಇದ್ದ ಈ ಲಾಕ್​​ಡೌನ್​​ ಅವಧಿಯನ್ನು ತೆಲಂಗಾಣದಲ್ಲಿ ಇನ್ನೆರಡು ದಿನಕ್ಕೆ ಅಂದರೆ ಏ.16ರವರೆಗೂ ವಿಸ್ತರಿಸಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್​​ ರಾವ್​​ ಆದೇಶಿಸಿದ್ದಾರೆ. ಈ ಲಾಕ್​​ಡೌನ್​​ ಆದೇಶ ಉಲ್ಲಂಘಿಸಿ ಬೀದಿಗಿಳಿದರೆ ಕಂಡಲ್ಲಿ ಗುಂಡಿಕ್ಕಿ ಎಂದು ಪೊಲೀಸರಿಗೆ ಆದೇಶ ನೀಡಬೇಕಾಗುತ್ತದೆ ಎಂದು ಕೆಸಿಆರ್​​ ಪುನರುಚ್ಚರಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶ 21 ದಿನ ಬಂದ್​​ ಮಾಡುವುದಾಗಿ ಆದೇಶ ನೀಡಿದರು. ಜತೆಗೆ ಈ ಅವಧಿಯಲ್ಲಿ ಯಾರೂ ಕೂಡ ಹೊರಗೆಬಾರದಂತೆ ಮನವಿ ಮಾಡಿದ್ದರು ಪ್ರಧಾನಿ ನರೇಂದ್ರ ಮೋದಿ ಹೀಗೆಳಿದರು ತೆಲಂಗಾಣದಲ್ಲಿ ಜನ ಗುಂಪು ಸೇರುತ್ತಿದ್ದರು. ಇದರ ಬೆನ್ನಲ್ಲೇ ಕಿಡಿಕಾರಿದ್ದ ಸಿಎಂ ಕೆಸಿಆರ್, ಕೋವಿಡ್ 19 ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್​​ಡೌನ್ ಮಾಡಲಾಗಿದೆ. ಹಾಗಾಗಿ ಜನ ಮನೆಯಲ್ಲೇ ಇರಬೇಕು. ಒಂದು ವೇಳೆ ಜನ ಲಾಕ್​​ಡೌನ್ ಉಲ್ಲಂಘಿಸುವುದನ್ನು ಮುಂದುವರಿಸಿದಲ್ಲಿ ನಾನು ಕಂಡಲ್ಲಿ ಗುಂಡಿಕ್ಕಿ ಆದೇಶ ಜಾರಿಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.

ಜತೆಗೆ, ರಾಜ್ಯದ ಎಲ್ಲಾ ಶಾಕರು ಜನರಿಗೆ ಸಿಗಬೇಕು. ಇಂತಹ ಕಠಿಣ ಸಂದರ್ಭದಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಬೇಕು. ಅಂತೆಯೇ ಕ್ವಾರಂಟೈನ್​​ಗೊಳಗಾದವರ ಪಾಸ್​ಪೋರ್ಟ್​ ಅನ್ನು ಸರ್ಕಾರ ವಾಪಸ್ಸು ಪಡೆಯುತ್ತಿದೆ. ಒಂದು ವೇಳೆ ಅವರು ಕೂಡ ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಪಾಸ್ ಪೋರ್ಟ್ ರದ್ದು ಮಾಡಲಾಗುವುದು ಎಂದಿದ್ದರು ಸಿಎಂ ಕೆಸಿಆರ್​​.

ಇದನ್ನೂ ಓದಿ: ದಯವಿಟ್ಟು ನನ್ನ ಮಾತು ಕೇಳಿ, ಇಲ್ಲದಿದ್ದರೆ ಕಂಡಲ್ಲಿ ಗುಂಡಿಡಲು ಆದೇಶಿಸಬೇಕಾಗುತ್ತದೆ: ಕೆಸಿಆರ್​

ತೆಲಂಗಾಣದಲ್ಲಿ ಇಲ್ಲಿಯವರೆಗೂ ಸುಮಾರು 44 ಪ್ರಕರಣಗಳು ಕಂಡು ಬಂದಿವೆ. ಸುಮಾರು 140ಕ್ಕೂ ಹೆಚ್ಚು ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading