ಟ್ರಾವೆಲ್ ಪಾಸ್‌ ನೀಡಲು ರೆಫ್ರಿಜರೇಟರ್‌ ಅನ್ನು ಲಂಚವಾಗಿ ಪಡೆದ ತೆಲಂಗಾಣ ಎಸಿಪಿ ವರ್ಗಾವಣೆ

ಮಂಚೈರಿಯನ್‌ನಿಂದ ಹೈದ್ರಾಬಾದ್‌ಗೆ ಪ್ರಯಾಣಿಸಿದ ಓರ್ವ ವ್ಯಕ್ತಿಗೆ ಎಸಿಪಿ ಕಾರ್ ಪಾಸ್ ನೀಡಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ರೆಫ್ರೆಜರೇಟರ್ ಅನ್ನು ಲಂಚವಾಗಿ ಸ್ವೀಕರಿಸಿದ್ದಾರೆ. ಈ ಆರೋಪದ ಮೇಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೈದರಾಬಾದ್: ನಿಯಮಗಳನ್ನು ಉಲ್ಲಂಘಿಸಿ ಟ್ರಾವೆಲ್ ಪಾಸ್ ನೀಡಿದ ಆರೋಪದ ಮೇಲೆ ಪೊಲೀಸ್ ಮಹಾನಿರ್ದೇಶಕ ಮಹೇಂದರ್ ರೆಡ್ಡಿ ತೆಲಂಗಾಣದ ಮಂಚೈರಿಯಲ್ ಭಾಗದ ಎಸಿಪಿಯನ್ನು ಹೈದ್ರಾಬಾದ್‌ನ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಿರುವ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ.

ಮಂಚೈರಿಯನ್‌ನಿಂದ ಹೈದ್ರಾಬಾದ್‌ಗೆ ಪ್ರಯಾಣಿಸಿದ ಓರ್ವ ವ್ಯಕ್ತಿಗೆ ಎಸಿಪಿ ಕಾರ್ ಪಾಸ್ ನೀಡಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ರೆಫ್ರೆಜರೇಟರ್ ಅನ್ನು ಲಂಚವಾಗಿ ಸ್ವೀಕರಿಸಿದ್ದಾರೆ. ಈ ಆರೋಪದ ಮೇಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ಹೈದ್ರಾಬಾದ್‌ಗೆ ತಪಿದ ನಂತರ ಆ ವ್ಯಕ್ತಿ ತನಗೆ ಕಾರ್ ಪಾಸ್ ಸಿಕ್ಕಿದ್ದು ಹೇಗೆ ಎಂದು ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಆತನ ಸ್ನೇಹಿತರು ರಾಚಕೊಂಡ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ತಮಗೂ ಪಾಸ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಟ್ರಾವೆಲ್ ಪಾಸ್ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಆದರೆ, ಪೊಲೀಸ್ ಅಧಿಕಾರಿಗಳನ್ನು ಮತ್ತೆ ಮತ್ತೆ ಒತ್ತಾಯಿಸಿರುವ ಅವರು, “ನನ್ನ ಸ್ನೇಹಿತರೊಬ್ಬರು ಟ್ರಾವೆಲ್ ಪಾಸ್ ಪಡೆಯಲು ರೆಫ್ರಿಜರೇಟರ್ ಅನ್ನು ಲಂಚವಾಗಿ ನೀಡಿದ್ದಾರೆ. ನಾನು ಸಹ ಲಂಚ ನೀಡಲು ಸಿದ್ದವಾಗಿದ್ದೇವೆ ನಮಗೂ ಪಾಸ್ ನೀಡಿ” ಎಂದು ದುಂಬಾಲು ಬಿದ್ದಿದ್ದಾರೆ.

ಈ ಘಟನೆ ರಾಚಕೊಂಡ ಆಯುಕ್ತ ಮಹೇಶ್ ಎಂ ಭಗವತ್ ಅವರ ಗಮನಕ್ಕೆ ಬಂದಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಆಯುಕ್ತರ ವಿಚಾರಣೆಯಲ್ಲಿ ಎಸಿಪಿ ವ್ಯಕ್ತಿಯಿಂದ ರೆಫ್ರಿಜರೇಟರ್ ಅನ್ನು ಲಂಚವಾಗಿ ಸ್ವೀಕರಿಸಿ ಪಾಸ್ ನೀಡಿರುವುದು ದೃಢಪಟ್ಟಿದೆ.

ಲಂಚ ನೀಡಿ ನಕಲಿ ಪಾಸ್ ಪಡೆದು ಪ್ರಯಾಣ ಬೆಳೆಸಿದ ಕಾರನ್ನು ವಶಕ್ಕೆ ಪಡೆಯಲಾಗಿದ್ದು ವರದಿಯನ್ನು ಡಿಜಿಪಿ ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಲಂಚ ಸ್ವೀಕರಿಸಿದ ಅಧಿಕಾರಿಯನ್ನು ಹೈದ್ರಾಬಾದ್ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

(ವರದಿ - ಪಿ.ವಿ. ರಮಣಕುಮಾರ್‌)

ಇದನ್ನೂ ಓದಿ : Bangloe Rains: ಬೆಂಗಳೂರಿನಲ್ಲಿ ಭಾರೀ ಮಳೆ- ಭೂ ಕುಸಿತ; ನಾಮಾವಶೇಷವಾದ ರಸ್ತೆ, ಭೂಗರ್ಭ ಸೇರಿದ ವಾಹನಗಳು
First published: