India vs Australia: ಟೀಂ ಇಂಡಿಯಾ ಆಟಗಾರರಿಗೆ ಕ್ವಾರಂಟೈನ್ ಮಾಡಿದ್ರೆ ಭಾರತ-ಆಸೀಸ್ ಸರಣಿ; ಬಿಸಿಸಿಐ

BCCI: ನಮ್ಮ ತಂಡ 12 ದಿನಗಳ ಕಾಲ ಕ್ವಾರಂಟೈನ್​​​ನಲ್ಲಿರಲು ಸಿದ್ಧವಾಗಿದೆ. ಆದರೆ ಈ ವೇಳೆ ಪರಿಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂಬುದು ಗೊತ್ತಿಲ್ಲ. ಪ್ರತಿ ಪ್ರವಾಸಕ್ಕೂ ಮುಂಚಿತವಾಗಿ ಆಟಗಾರರಿಗೆ ಕ್ವಾರಂಟೈನ್​ ಮಾಡುವುದು ತುಂಬಾ ಕಷ್ಟ ಎಂದು ಧುಮಾಲ್‌ ಹೇಳಿದ್ದಾರೆ.

news18-kannada
Updated:May 9, 2020, 9:08 AM IST
India vs Australia: ಟೀಂ ಇಂಡಿಯಾ ಆಟಗಾರರಿಗೆ ಕ್ವಾರಂಟೈನ್ ಮಾಡಿದ್ರೆ ಭಾರತ-ಆಸೀಸ್ ಸರಣಿ; ಬಿಸಿಸಿಐ
ಟೆಸ್ಟ್ ತಂಡ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಆರ್.ಅಶ್ವಿನ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ, ಜಸ್‍ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
  • Share this:
ಮಾರಕ ಕೊರೋನಾ ವೈರಸ್​​ನಿಂದ ಇಡೀ ಕ್ರೀಡಾ ಜಗತ್ತು ಸ್ತಬ್ದವಾಗಿವೆ. ಎಲ್ಲ ಕ್ರಿಕೆಟ್ ಟೂರ್ನಿ ಕೂಡ ರದ್ದು ಮಾಡಲಾಗಿದ್ದು, ಕೊರೋನಾ ಭೀತಿ ಅಂತ್ಯವಾಗುವವರೆಗೂ ಕ್ರೀಡಾ ಚಟುವಟಿಕೆಗೆ ಬ್ರೇಕ್ ಬಿದ್ದಿದೆ. ಹೀಗಿರುವಾಗ ಆಸ್ಟ್ರೇಲಿಯಾ ಮತ್ತು ಭಾರತ ಕ್ರಿಕೆಟ್ ಮಂಡಳಿಗಳು ಈ ವರ್ಷದ ಕೊನೆಯಲ್ಲಿ ಉಭಯ ದೇಶಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯೊಂದಿಗೆ ಮುನ್ನಡೆಯಲು ನಿರ್ಧರಿಸಿವೆ.

ಈ ಪ್ರವಾಸ ಉಭಯ ತಂಡಗಳಿಗೆ ಮುಖ್ಯವಾಗಿದೆ. ಎಲ್ಲಾದರು ಈ ಸರಣಿ ನಡೆಯದೆ ಹೋದಲ್ಲಿ ತನಗೆ ಭಾರೀ ನಷ್ಟವಾಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಬಿಸಿಸಿಐ ಕೂಡ ಇದರಿಂದ ಹೊರತಾಗಿಲ್ಲ. ಅಕಸ್ಮಾತ್‌ ಟೀಂ ಇಂಡಿಯಾ ಈ ಪ್ರವಾಸ ಕೈಗೊಳ್ಳುವುದೇ ಆದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

ಹನುಮನ ಭಕ್ತನಿಗೆ ಒಲಿಯಲಿದೆಯಾ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ?

ಇದರಲ್ಲಿ ಕ್ವಾರಂಟೈನ್‌ ಪ್ರಕ್ರಿಯೆ ಕೂಡ ಸೇರಿದೆ. ಆಸ್ಟ್ರೇಲಿಯಕ್ಕೆ ಕಾಲಿಟ್ಟೊಡನೆ ಭಾರತ ತಂಡದ ಕ್ರಿಕೆಟಿಗರಿಗೆ ಎರಡು ವಾರಗಳ ಕಾಲ ಕ್ವಾರಂಟೈನ್‌ ಮಾಡಲಾಗುವುದು ಎಂದು ಧುಮಾಲ್‌ ಸ್ಪಷ್ಟಪಡಿಸಿದರು.

'ನಮ್ಮ ತಂಡ 12 ದಿನಗಳ ಕಾಲ ಕ್ವಾರಂಟೈನ್​​​ನಲ್ಲಿರಲು ಸಿದ್ಧವಾಗಿದೆ. ಆದರೆ ಈ ವೇಳೆ ಪರಿಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂಬುದು ಗೊತ್ತಿಲ್ಲ. ಪ್ರತಿ ಪ್ರವಾಸಕ್ಕೂ ಮುಂಚಿತವಾಗಿ ಆಟಗಾರರಿಗೆ ಕ್ವಾರಂಟೈನ್​ ಮಾಡುವುದು ತುಂಬಾ ಕಷ್ಟ' ಎಂದು ಧುಮಾಲ್‌ ಹೇಳಿದ್ದಾರೆ.

43 ರನ್​ಗಳ ರೋಚಕ ಹೋರಾಟದ ನಡುವೆ ಕೊಹ್ಲಿ ಯಾಕೆ ಬೌಲಿಂಗ್ ಮಾಡಿದ್ರೊ ಗೊತ್ತಿಲ್ಲ..!

ಇದೇವೇಳೆ ಇನ್ನೊಂದಿಷ್ಟು ಮಾಹಿತಿ ಹಂಚಿಕೊಂಡ ಧುಮಾಲ್ ಅವರು, 'ಉಭಯ ಕ್ರಿಕೆಟ್ ಮಂಡಳಿಗಳು ಮಾತುಕತೆ ನಡೆಸುತ್ತಿವೆ. ಟೆಸ್ಟ್ ಸರಣಿಯಲ್ಲಿ ಐದು ಪಂದ್ಯಗಳನ್ನು ನಡೆಸುವ ಕುರಿತು ಚಿಂತನೆ ನಡೆಯುತ್ತಿದೆ. ಆದರೆ, ಐದನೇ ಟೆಸ್ಟ್‌ ಬದಲು ಎರಡು ಏಕದಿನ ಅಥವಾ ಎರಡು ಟಿ-20 ಪಂದ್ಯಗಳನ್ನು ಆಯೋಜಿಸುವ ಕುರಿತೂ ಯೋಚನೆ ನಡೆದಿದೆ. ಲಾಕ್‌ಡೌನ್‌ ಕಾರಣದಿಂದ ಆಗಿರುವ ಆರ್ಥಿಕ ನಷ್ಟವನ್ನು ಸೀಮಿತ ಓವರ್‌ಗಳ ಪಂದ್ಯಗಳಿಂದ ಮರಳಿ ಗಳಿಸಿಕೊಳ್ಳುವ ಅವಕಾಶ ಹೆಚ್ಚಿದೆ' ಎಂಬುದು ಅವರ ಮಾತಾಗಿತ್ತು.
First published: May 9, 2020, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading