ವರ್ಕೌಟ್ ಮಾಡುವ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾರೆ ದಿನೇಶ್ ಕಾರ್ತಿಕ್ ಹೆಂಡತಿ!

ಒಂದು ಗಂಟೆ ವರ್ಕೌಟ್​​ ಮಾಡಿದರೆ ಒಂದು ಡಾಲರ್​ (75.56)​ ದೇಣಿಗೆ ಸಂಗ್ರಹವಾಗುತ್ತದೆ. ಇದರಿಂದ ಕೊರೋನಾ ವಿರುದ್ಧ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತದೆ.

news18-kannada
Updated:June 7, 2020, 2:50 PM IST
ವರ್ಕೌಟ್ ಮಾಡುವ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾರೆ ದಿನೇಶ್ ಕಾರ್ತಿಕ್ ಹೆಂಡತಿ!
ದಿನೇಶ್​ ಕಾರ್ತಿಕ್​ - ದೀಪಿಕಾ ಪಲ್ಲಿಕಲ್
  • Share this:
ಕೊರೋನಾ ಸಂಕಷ್ಟವನ್ನು ಸರಿದೂಗಿಸಲು ಈಗಾಗಲೇ ಅನೇಕರು ದೇಣಿಗೆ ಅನ್ನು ಸಂಗ್ರಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅನೇಕ ಕ್ರೀಡಾಪಟುಗಳು ತಮ್ಮ ಕೈಯಲಾದಷ್ಟು ಹಣ ಸಂಗ್ರಹಿಸಿದ್ದಾರೆ. ಇದೀಗ ಟೀಂ ಇಂಡಿಯಾ ಆಟಗಾರ ದಿನೇಶ್​ ಕಾರ್ತಿಕ್​ ಮತ್ತು ಅವರ ಹೆಂಡತಿ ದೀಪಿಕಾ ಪಲ್ಲಿಕಲ್​​ ವರ್ಕೌಟ್​ ಮಾಡುತ್ತಾ, ವಿಡಿಯೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುವ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಆ ಮೂಲಕ ಕೋವಿಡ್​​ ವಿರುದ್ಧ ಹೋರಾಡುತ್ತಿರುವ ಫ್ರಂಟ್​ಲೈನ್​​ ವರ್ಕರ್ಸ್​​​ ​ಗಳಿಗೆ ನೆರವಾಗಲು ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ದೀಪಿಕಾ ಪಲ್ಲಿಕಲ್​​ ‘ಜನಪ್ರಿಯ ಬ್ರ್ಯಾಂಡ್​​​ ಅಡಿಡಾಸ್​​​​​​ ಹೋಂಟೀಮ್​ ಹಿರೋ ಚಾಲೆಂಜ್​​​ ಅಂಗವಾಗಿ ವರ್ಕೌಟ್​​ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ವರ್ಕೌಟ್​ ವಿಡಿಯೋಗಳನ್ನು ಮಾಡುತ್ತಾ ಇತರರಿಗೂ ವ್ಯಾಯಾಮ ಮಾಡಲು ಪ್ರೇರೆಪಿಸುತ್ತಿದ್ದೇನೆ. ಇದರಿಂದ ಸಂಗ್ರಹವಾದ ಹಣವನ್ನು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಟ್​-19 ಹೋರಾಟಕ್ಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಅವರು ‘ಒಂದು ಗಂಟೆ ವರ್ಕೌಟ್​​ ಮಾಡಿದರೆ ಒಂದು ಡಾಲರ್​ (75.56)​ ದೇಣಿಗೆ ಸಂಗ್ರಹವಾಗುತ್ತದೆ. ಇದರಿಂದ ಕೊರೋನಾ ವಿರುದ್ಧ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತದೆ. ಒಟ್ಟಾರೆ ಒಂದು ದಶಲಕ್ಷ ಗಂಟೆಗಳ ವರ್ಕೌಟ್​ ಮಾಡುವುದು ಈ ಅಭಿಯಾನದ ಗುರಿಯಾಗಿದೆ ಎಂದಿದ್ದಾರೆ ದೀಪಿಕಾ ಪಲ್ಲಿಕಲ್​.

ದೀಪಿಕಾ ಸ್ಕ್ವಾಷ್​​ ಆಟಗಾರ್ತಿ. 2014ರಲ್ಲಿ ಕಾಮನ್ವೆಲ್ತ್​​​​​ ಗೇಮ್ಸ್​​ನಲ್ಲಿ ಚಿನ್ನದ ಪದಕವನ್ನು ಮಡಿಗೇರಿಸಿಕೊಂಡಿದ್ದರು. 2018ರಲ್ಲಿ 2 ಬೆಳ್ಳಿ ಪದಕವನ್ನು ಗೆದ್ದಿದ್ದರು. ಅಂತೆಯೇ ಏಷ್ಯಾಡ್​​ನಲ್ಲೂ 4 ಪದಕವನ್ನು ಗೆದ್ದಿದ್ದಾರೆ. 2015ರಲ್ಲಿ ದೀಪಿಕಾ ಪಲ್ಲಿಕಲ್​​ ದಿನೇಶ್​ ಕಾರ್ತೀಕ್​ ಅವರನ್ನು ವಿವಾಹವಾದರು.

Video: ಭಾರತ ಪ್ರತಿಭೆಗಳ ನೃತ್ಯ ಕಂಡು ನಿಬ್ಬೆರಗಾದ ‘ಅಮೆರಿಕ ಗಾಟ್​​ ಟ್ಯಾಲೆಂಟ್​‘​ ತೀರ್ಪುಗಾರರು!

Atlas Cycles: ಸವಾರಿ ನಿಲ್ಲಿಸಿದ ಅಟ್ಲಾಸ್​ ಸೈಕಲ್​; ದೇಶದ ಹೆಮ್ಮೆಯ ಸಂಸ್ಥೆಗೆ ಬೀಗ!
First published: June 7, 2020, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading