ವಿದ್ಯಾರ್ಥಿಗಳ ಗಮನ ಸೆಳೆದ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆ: ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು 

ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಲಾಗುವುದು. ಗ್ರಾಮದ ದೇವಸ್ಥಾನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ.

ವಿದ್ಯಾಗಮ ಯೋಜನೆ

ವಿದ್ಯಾಗಮ ಯೋಜನೆ

  • Share this:
ಬೆಂಗಳೂರು ಗ್ರಾಮಾಂತರ(ಆ.30): ಈಗಾಗಲೇ ಶಾಲೆ ಶುರುವಾಗಿ ಮೂರು ತಿಂಗಳಾಗಬೇಕಿತ್ತು. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ  ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವ ಪರಿಣಾಮ ಶಾಲೆಗಳ ಬಾಗಿಲು ತೆಗೆಯಲು  ಸಾಧ್ಯವಾಗಿಲ್ಲ. ಶಾಲೆಗಳು ಶುರುವಾಗದೆ  ಪಾಠ ಪ್ರವಚನ ಇಲ್ಲದೆ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗುತ್ತಿದ್ದಾರೆ.  ಶಾಲೆಯ ಬಾಗಿಲು ತೆಗೆಯದೆ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಕೆಯ ಯೋಜನೆ ಜಾರಿಗೆ ತಂದಿದೆ. ಅದುವೇ  ವಿದ್ಯಾಗಮ ಯೋಜನೆ.

ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬರುವ ಶಿಕ್ಷಕರು ಪಾಠ ಪ್ರವಚನ ಮಕ್ಕಳಿಗೆ ಮಾಡುತ್ತಿದ್ದಾರೆ. ಮಕ್ಕಳು ವಿದ್ಯೆಯಿಂದ ದೂರವಾಗದಂತೆ ಸೇತುವೆಯಾಗಿ ಈ ಯೋಜನೆ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನ ಸೆಳೆದಿದೆ. ಇದರಿಂದ ಪೋಷಕರ ಗಮನ ಸರ್ಕಾರಿ ಶಾಲೆಗಳತ್ತ ಸೆಳೆಯುವಲ್ಲಿ ಇಲಾಖೆ ಯಶಸ್ವಿಯಾಗಿದೆ.

ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗಬಾರದೆನ್ನುವ ಕಾರಣಕ್ಕೆ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ಜಾರಿ ಮಾಡಿದೆ. ಸಾಮಾಜಿಕ  ಅಂತರ ಕಾಯ್ದುಕೊಳ್ಳಬೇಕೆನ್ನುವ ಕಾರಣಕ್ಕೆ ವಿದ್ಯಾರ್ಥಿಗಳನ್ನ  ಒಂದು ಸ್ಥಳದಿಂದ ಮತ್ತೊಂದು  ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ  ಶಿಕ್ಷಕರು ಪಾಠ ಮಾಡಲಿದ್ದಾರೆ.

ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಲಾಗುವುದು. ಗ್ರಾಮದ ದೇವಸ್ಥಾನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ.

ವಿಧ್ಯಾರ್ಥಿಗಳ ಬಳಿ ಇರುವ  ಮೊಬೈಲ್ ಸೌಲಭ್ಯದ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ಮಾಡಿಲಾಗಿದೆ. ಟೈಪ್ 1ನಲ್ಲಿ ಯಾವುದೇ ಮೊಬೈಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು, ಟೈಪ್ 2 ಬೇಸಿಕ್ ಸೆಟ್ ಮೊಬೈಲ್ ಸೌಲಭ್ಯ ಇರುವ ವಿದ್ಯಾರ್ಥಿಗಳು, ಟೈಪ್  3 ಸ್ಮಾರ್ಟ್ ಪೋನ್ ಹೊಂದಿರುವ  ವಿದ್ಯಾರ್ಥಿಗಳು ಎಂದು ಮಾಡಲಾಗಿದೆ. ಯಾವುದೇ ರೀತಿಯ ಮೊಬೈಲ್ ಸೌಲಭ್ಯ ಇಲ್ಲದ ಟೈಪ್ 1 ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರೇ ಮನೆಗೆ ಬಂದು ಪಾಠ ಮಾಡಲಿದ್ದಾರೆ.

ಟೈಪ್  2ನಲ್ಲಿ ಬೇಸಿಕ್ ಸೆಟ್ ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿಗೆ ಪೋನ್ ಕರೆ ಮಾಡಿ ವಿದ್ಯಾರ್ಥಿಗೆ ವಿದ್ಯೆ ಕಲಿಕೆಯ ಮಾರ್ಗದರ್ಶನ ಮಾಡಲಾಗುತ್ತೆ. ಸ್ಮಾರ್ಟ್ ಪೋನ್​ ಹೊಂದಿರುವ ಟೈಪ್ 3 ವಿದ್ಯಾರ್ಥಿಗಳಿಗೆ ಆನ್​​ಲೈನ್ ಮೂಲಕ ಪಾಠ ಪ್ರವಚನ ಮಾಡಲಾಗುತ್ತಿದೆ. ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಇಲ್ಲಿ ಶಿಕ್ಷಕರು ತರಗತಿಗಳು ತೆಗೆದುಕೊಳ್ಳುತ್ತಿದ್ದಾರೆ. ಸೇತುಬಂಧ ಕಾರ್ಯಕ್ರಮದಲ್ಲಿನ ತರಗತಿಗಳ ಬಗ್ಗೆ ಗೊಂದಲ ಇದೆ. ವಿದ್ಯಾರ್ಥಿಗಳ ಮನೆಗೆ ಬರುವ ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಹರಿಸುತ್ತಿದ್ದಾರೆ.

ವಿದ್ಯಾಗಮ ಯೋಜನೆ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನ ಸೆಳೆಯುತ್ತಿದೆ. ಕಳೆದ ಐದು ತಿಂಗಳಿಂದ  ಶಾಲೆಯ ತೆರೆಯದೆ ವಿದ್ಯಾ ಕಲಿಕೆಯನ್ನ ಮರೆತು ಬಿಟ್ಟಿದ್ದರು. ಮಕ್ಕಳು, ಮನೆಯಲ್ಲಿದ್ದ ಮಕ್ಕಳನ್ನ ನಿಭಾಯಿಸೋದು ಪೋಷಕರಿಗೆ ದೊಡ್ಡ ತಲೆನೋವಾಗಿತ್ತು. ಈಗ ಶಿಕ್ಷಕರೇ ಮನೆಗೆ ಬಂದು ಪಾಠ ಮಾಡುತ್ತಿರುವುದರಿಂದ ಶಿಸ್ತಿನಿಂದ ಕಲಿಯುತ್ತಿದ್ದಾರೆಂದು ಪೋಷಕರು ಖುಷಿಗೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಹ ವಿದ್ಯಾಗಮ ಯೋಜನೆ ಯಶಸ್ವಿಯಾಗಿ  ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಡಿಪಿಐ ಗಂಗಮಾರೇಗೌಡ,  ದೊಡ್ಡಬಳ್ಳಾಪುರ ತಾಲೂಕು ಬಿಇಓ ಬಯ್ಯಾಪ್ಪ ರೆಡ್ಡಿ ವಿದ್ಯಾಗಮ ಯೋಜನೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: Unlock 4.0: ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್?; ನಾಳೆ ಅಧಿಕೃತ ಆದೇಶ

ಇದೇ ವೇಳೆ  ಮಾತನಾಡಿದ  ಡಿಡಿಪಿಐ ಗಂಗಮಾರೇಗೌಡ ಈಗಾಗಲೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಬಿಸಿಯೂಟದ ರೇಷನ್, ಕ್ಷೀರಭಾಗ್ಯದ ಹಾಲಿನ ಪುಡಿ ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನ ನಿರಂತರ ವಿದ್ಯಾ ಕಲಿಕೆಯಲ್ಲಿ ತೊಡಗುವಂತೆ ಮಾಡಲು ಈ ಯೋಜನೆ ಜಾರಿ ಮಾಡಲಾಗಿದೆ. ಶಿಕ್ಷಕರು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ಸರ್ಕಾರಿ ಶಾಲೆಯಲ್ಲಿ ದಾಖಲಾತಿಯಲ್ಲಿ ಏರಿಕೆಯಾಗಿದೆ. ಇನ್ನೂ ದಾಖಲಾತಿ ಪ್ರಕ್ರಿಯೆ  ನಡೆಯುತ್ತಿದ್ದು, ಜಿಲ್ಲೆಯ ಕಳೆದ ವರ್ಷಕ್ಕಿಂತ ಈ ವರ್ಷ 8 ಸಾವಿರಕ್ಕೂ ವಿದ್ಯಾರ್ಥಿಗಳು  ಸರ್ಕಾರಿ ಶಾಲೆಗೆ ಸೇರಲಿದ್ದಾರೆ ಎಂದರು.
Published by:Ganesh Nachikethu
First published: