Prabhas: ಪ್ರಭಾಸ್ ಮಾಡಿದ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆ ಸುರಿಸಿದ ಟಿಡಿಪಿ ಹಿರಿಯ ನಾಯಕ ..!

Prabhas Donated Huge Amount: ಕೊರೋನಾ ವಿರುದ್ಧ ಹೋರಾಟಕ್ಕೆ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಧನ ಸಹಾಯ ಮಾಡುತ್ತಿದ್ದಾರೆ. ಪ್ರಭಾಸ್​ ಸಹ ಇದಕ್ಕೆ ಹೊರತಾಗಿಲ್ಲ. ಪ್ರಭಾಸ್​ ಕೇಂದ್ರ ಸರ್ಕಾರ, ಆಂಧ್ರ ಹಾಗೂ ತೆಲಂಗಾಣಕ್ಕೆ ಕೋಟಿ ಕೋಟಿ ಹಣ ನೀಡಿದ್ದಾರೆ.

Anitha E | news18-kannada
Updated:April 2, 2020, 9:51 AM IST
Prabhas: ಪ್ರಭಾಸ್ ಮಾಡಿದ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆ ಸುರಿಸಿದ ಟಿಡಿಪಿ ಹಿರಿಯ ನಾಯಕ ..!
ಪ್ರಭಾಸ್
  • Share this:
ನಟ ಪ್ರಭಾಸ್​ ಸದ್ಯ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಜಾರ್ಜಿಯಾದಲ್ಲಿ ನಡೆದಿತ್ತು. ಅಲ್ಲಿಂದ ಮನೆಗೆ ಹಿಂತಿರುಗಿದ ನಂತರ ಡಾರ್ಲಿಂಗ್​ ಹೋಂ ಕ್ವಾರಂಟೈನ್​ ಆಗಿದ್ದಾರೆ. 

ಕೊರೋನಾ ವಿರುದ್ಧ ಹೋರಾಟಕ್ಕೆ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಧನ ಸಹಾಯ ಮಾಡುತ್ತಿದ್ದಾರೆ. ಪ್ರಭಾಸ್​ ಸಹ ಇದಕ್ಕೆ ಹೊರತಾಗಿಲ್ಲ. ಪ್ರಭಾಸ್​ ಕೇಂದ್ರ ಸರ್ಕಾರ, ಆಂಧ್ರ ಹಾಗೂ ತೆಲಂಗಾಣಕ್ಕೆ ಕೋಟಿ ಕೋಟಿ ಹಣ ನೀಡಿದ್ದಾರೆ.

Prabhas beatean Pawan Kalyan and announced 4 crores Donation to fight against covid 19
ಮೋದಿ ಹಾಗೂ ಪ್ರಭಾಸ್​


ಸಹಾಯ ಹಸ್ತ ಚಾಚಿದ ವಿಷಯವನ್ನು ಅವರು ಯಾವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿಲ್ಲ. ಟಿಡಿಪಿಯ  ಹಿರಿಯ ನಾಯಕ ಸೋಮಿರೆಡ್ಡಿ  ಪ್ರಭಾಸ್​ ಎಷ್ಟು ಕೋಟಿ ನೀಡಿದ್ದಾರೆ ಅಂತ ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಪ್ರಭಾಸ್​ ಇಷ್ಟು ದೊಡ್ಡ ಮೊತ್ತದ ಹಣ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಪ್ರಭಾಸ್​ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 3 ಕೋಟಿ, ಆಂಧ್ರ ಮತ್ತು ತೆಲಂಗಾಣದ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ್ದಾರೆ. 4 ಕೋಟಿ ಹಣ ನೀಡಿರುವ ಪ್ರಭಾಸ್​ ಈ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ಈ ಹಿಂದೆ ಪವನ್ ಕಲ್ಯಾಣ್​ ಕೇಂದ್ರ ಹಾಗೂ ಆಂಧ್ರ-ತೆಲಂಗಾಣಕ್ಕೆ ಸೇರಿ 2 ಕೋಟಿ ನೀಡಿದ್ದರು

&nbspPrakash Rai: 500 ಕುಟುಂಬಗಳ ತುತ್ತಿನ ಬುತ್ತಿ ತುಂಬಿಸುತ್ತಿರುವ ಪ್ರಕಾಶ್​ ರೈ..!
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading