• Home
 • »
 • News
 • »
 • coronavirus-latest-news
 • »
 • ಏ.14ರ ನಂತರ ಲಾಕ್​​ಡೌನ್​​​ ಮುಂದುವರಿಸಿ: ರಾಜ್ಯ ಸರ್ಕಾರಕ್ಕೆ ಟಾಸ್ಕ್​ಪೋರ್ಸ್ ಶಿಫಾರಸು ಮಾಡಿದ ಪ್ರಮುಖ ಅಂಶಗಳು

ಏ.14ರ ನಂತರ ಲಾಕ್​​ಡೌನ್​​​ ಮುಂದುವರಿಸಿ: ರಾಜ್ಯ ಸರ್ಕಾರಕ್ಕೆ ಟಾಸ್ಕ್​ಪೋರ್ಸ್ ಶಿಫಾರಸು ಮಾಡಿದ ಪ್ರಮುಖ ಅಂಶಗಳು

ಲಾಕ್​ಡೌನ್​ ದೃಶ್ಯ

ಲಾಕ್​ಡೌನ್​ ದೃಶ್ಯ

ಇನ್ನು ಸಮಿತಿಯೂ ಮೇಲಿನ ಶಿಫಾರಸುಗಳನ್ನು ಮುಂದಿನ 15 ದಿನಗಳ ಅವಧಿಗೆ ಮಾಡಿದೆ. ಹಾಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

 • Share this:

ಬೆಂಗಳೂರು(ಏ.08): ಕೊರೋನಾ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಇಡೀ ದೇಶಾದ್ಯಂತ ಜಾರಿ ಮಾಡಲಾಗಿರುವ ಲಾಕ್​​ಡೌನ್​​ ಮುಕ್ತಾವಾಗಲು ಇನ್ನೇನು ಆರೇ ದಿನ ಬಾಕಿ. ಹಾಗಾಗಿ ಏಪ್ರಿಲ್​​​​ 14ನೇ ತಾರೀಕಿನ ಬಳಿಕ ಲಾಕ್​​ಡೌನ್​​​​​ ಅಂತ್ಯವಾಗುತ್ತಾ? ವಿಸ್ತರಣೆಯಾಗುತ್ತಾ? ಎಂಬ ಕುತೂಹಲ ಜನರಲ್ಲಿ ಇದೆ. ಈ ಮಧ್ಯೆಯೇ ರಾಜ್ಯ ಸರ್ಕಾರಕ್ಕೆ ಲಾಕ್​ಡೌನ್ ಮುಂದುವರಿಕೆಗೆ ಕೋವಿಡ್-19 ಟಾಸ್ಕ್​ಪೋರ್ಸ್ ಶಿಫಾರಸು ಮಾಡಿದೆ. ಏಪ್ರಿಲ್ ಕೊನಯವರೆಗೂ ಲಾಕ್​​ಡೌನ್ ಮುಂದುವರೆಸುವುದು ಅತ್ಯಗತ್ಯ. ಆದರೆ, ಇದು ಇಡೀ ರಾಜ್ಯಕ್ಕೆ ಅನ್ವಯಿಸಬೇಕಿಲ್ಲ. ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಜಿಲ್ಲೆಗಳಲ್ಲಿ ಮಾತ್ರ ಲಾಕ್​​​ಡೌನ್ ಮುಂದುವರೆಸಬೇಕು ಎಂದು ಕೋವಿಡ್​​​-19 ಟಾಸ್ಕ ಫೋರ್ಸ್​ ವರದಿ ಸಲ್ಲಿಸಿದೆ. 


ಇಂದು ಜಯದೇವ ಹೃದ್ರೋಗ ಸಂಸ್ಥೆಯ ಡಾ. ಮಂಜುನಾಥ್, ನಾರಾಯಣ ಹೆಲ್ತ್ ನ ಡಾ.ದೇವಿ ಶೆಟ್ಟಿ, ರಾಜೀವ್ ಗಾಂಧಿ ವಿವಿ ಉಪಕುಲಪತಿ ಡಾ. ಸಚ್ಚಿದಾನಂದ ಮುಂತಾದ ಹಿರಿಯ ವೈದ್ಯರ ತಂಡ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ಡಾ. ದೇವಿ ಶೆಟ್ಟಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯು ಲಾಕ್ ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಲ್ಲಿಸಿದ ವರದಿಯಲ್ಲಿ ಒಂದಷ್ಟು ಪ್ರಮುಖ ಅಂಶಗಳು ಶಿಫಾರಸು ಮಾಡಿದೆ.


ಸಮಿತಿಯೂ ಲಾಕ್​​ಡೌನ್ ಅನ್ನು ಹಂತ ಹಂತವಾಗಿ ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ವರದಿ ಸಲ್ಲಿಸಿದೆ. ಇವರ ಕಾರ್ಯಕ್ಕೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಕೃತಜ್ಞತೆಗಳನ್ನು ಸಲ್ಲಿಸಿದರು.


ಸಮಿತಿ ಶಿಫಾರಸು ಮಾಡಿದ ಕೆಲವು ಮುಖ್ಯಾಂಶಗಳು ಹೀಗಿವೆ...


 • ಮುಂದಿನ ಆರು ತಿಂಗಳವರೆಗೂ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ

 • ಕೊರೋನಾ ಹಾಟ್​​ಸ್ಪಾಟ್ ಕೇಂದ್ರಗಳಲ್ಲಿ ಲಾಕ್​​ಡೌನ್​​ ಮುಂದುವರೆಸಬೇಕು

 • ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್​​ಡೌನ್​​ ಮಾಡಬೇಕು

 • ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು

 • ಶಾಲೆ ಕಾಲೇಜುಗಳನ್ನು ಮೇ 31ರವರೆಗೆ ಮುಚ್ಚಬೇಕು

 • ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು

 • ಐಟಿ, ಬಿಟಿ ಉದ್ಯಮಗಳು, ಅತ್ಯವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು,

 • ಕಾರ್ಖಾನೆಗಳಲ್ಲಿ ಶೇ. 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು

 • ಅಂತರರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು

 • ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು

 • ಅಂತರರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು

 • ಕೋವಿಡ್ ಪ್ರಕರಣಗಳು ವರದಿಯಾದಾಗ ಚಿಕಿತ್ಸೆಗೆ ವೈದ್ಯರು, ದಾದಿಯರು, ಇತರ ಅರೆ ವೈದ್ಯಕೀಯ ಸಿಬ್ಬಂದಿ ಸಹಾಯ ಮಾಡಬೇಕು

 • ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು

 • ಏಪ್ರಿಲ್ 30ರವರೆಗೆ ಎಸಿ ಬಸ್/ಮೆಟ್ರೋ ಸೇವೆ ಬೇಡ

 • ಖಾಸಗಿ ವಾಹನಗಳ ಓಡಾಟಕ್ಕೆ ಸರಿ-ಬೆಸ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು

 • ಸೂಪರ್ ಮಾರ್ಕೆಟ್ 24 ಗಂಟೆ ಓಪನ್ ಮಾಡಿಸಿ

 • 15 ದಿನದಲ್ಲಿ 50 ಸಾವಿರ ಕೋವಿಡ್ ಟೆಸ್ಟ್ ಮಾಡಿಸಿ


ಇನ್ನು ಸಮಿತಿಯೂ ಮೇಲಿನ ಶಿಫಾರಸುಗಳನ್ನು ಮುಂದಿನ 15 ದಿನಗಳ ಅವಧಿಗೆ ಮಾಡಿದೆ. ಹಾಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಸಿ; ಕೋವಿಡ್-19 ಟಾಸ್ಕ್​ಫೋರ್ಸ್ ವೈದ್ಯರಿಂದ ಸರ್ಕಾರಕ್ಕೆ ಶಿಫಾರಸು

Published by:Ganesh Nachikethu
First published: