ಕೋವಿಡ್​ ವಿರುದ್ಧ ಹೋರಾಟ: ವೈದ್ಯರಿಗೆ 30, ದಾದಿಯರಿಗೆ 20 ಸಾವಿರ ಪ್ರೋತ್ಸಾಹ ಧನ ಘೋಷಿಸಿದ ತಮಿಳುನಾಡು ಸರ್ಕಾರ

ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮತ್ತಷ್ಟು ಉತ್ತೇಜನ ಗೊಳಿಸಲು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಡಿಎಂಕೆ ಸರ್ಕಾರ ತಿಳಿಸಿದೆ.

ಎಂ.ಕೆ. ಸ್ಟಾಲಿನ್.

ಎಂ.ಕೆ. ಸ್ಟಾಲಿನ್.

 • Share this:
  ಚೆನ್ನೈ (ಮೇ. 12) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರದ ಮರು ದಿನವೇ ಎಂಕೆ ಸ್ಟಾಲಿನ್​ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಭರ್ಜರಿ ಕೊಡಗೆ ನೀಡಿ ಘೋಷಿಸಿದ್ದಾರೆ. ಕೋವಿಡ್​ ಎರಡನೇ ಅಲೆ ವಿರುದ್ಧ ಸೋಂಕಿತರ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ಅವರು ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಸರ್ಕಾರದ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಇತರೆ ವೈದ್ಯಕೀಯ ಸಿಬ್ಬಂದಿಗಳಿಗೆ ಅವರು ಮೂರು ತಿಂಗಳ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದಾರೆ. ಈ ಮೂಲಕ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಏಪ್ರಿಲ್​ ನಿಂದ ಜೂನ್​ವರೆಗಿನ ಮೂರು ತಿಂಗಳ ಅವಧಿಗೆ ಅವರು ಪ್ರೋತ್ಸಾಹ ಧನವನ್ನು ನೀಡಿದ್ದಾರೆ.

  ಕೋವಿಡ್​ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಸರ್ಕಾರಿ ವೈದ್ಯರಿಗೆ ತಿಂಗಳಿಗೆ 10 ಸಾವಿರದಂತೆ 30 ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ನರ್ಸ್​ಗಳಿಗೆ ಮೂರು ತಿಂಗಳಿಗೆ 20 ಸಾವಿರ, ಕೋವಿಡ್​ ವಾರ್ಡ್​ನಲ್ಲಿ ಕರ್ತವ್ಯ ನಿರ್ವಹಿಸುವ ಇತರೆ ಸಿಬ್ಬಂದಿಗಳಿಗೆ ತಲಾ 15 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಟ್ರೈನಿ ವೈದ್ಯರು ಮತ್ತು ಪಿ ಜಿ ವಿದ್ಯಾರ್ಥಿಗಳಿಗೂ ಅವರನ್ನು ಪ್ರೋತ್ಸಾಹಿಸಲು 20 ಸಾವಿರ ಹಣವನ್ನು ಘೋಷಣೆ ಮಾಡಿದ್ದಾರೆ. ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮತ್ತಷ್ಟು ಉತ್ತೇಜನ ಗೊಳಿಸಲು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಡಿಎಂಕೆ ಸರ್ಕಾರ ತಿಳಿಸಿದೆ.

  ತಮಿಳುನಾಡಿನಲ್ಲಿ ಕೋವಿಡ್​ ಹೋರಾಟದಲ್ಲಿ ತಮ್ಮ ಜೀವ ಕಳೆದು ಕೊಂಡ 43 ಜನ ವೈದ್ಯರಿಗೆ ತಲಾ 25 ಲಕ್ಷ ಹಣವನ್ನು ಪರಿಹಾರವಾಗಿ ನೀಡುವುದಾಗಿ ತಿಳಿಸಿದ್ದಾರೆ.
  ಕಳೆದ ಆಗಸ್ಟ್​ನಲ್ಲಿ ಕೋವಿಡ್​ ವಿರುದ್ಧ ಹೋರಾಟದ ವೇಳೆ ತಮಿಳುನಾಡಿನ 43 ಮಂದಿ ವೈದ್ಯರು ಪ್ರಾಣ ಕಳೆದುಕೊಂಡಿದ್ದಾಗಿ ಭಾರತೀಯ ವೈದ್ಯಕೀಯ ಮಂಡಳಿ ತಿಳಿಸಿತ್ತು. ಆದರೆ, ಆಗಿನ ಎಐಎಇಎಂಕೆ ಸರ್ಕಾರ ಇದನ್ನು ತಳ್ಳಿ ಹಾಕಿತ್ತು.

  ಇದನ್ನು ಓದಿ: ಸೋಂಕಿನ ವಿರುದ್ಧವೂ ಹೋರಾಡಿ ಗೆದ್ದ ಹಿರಿಯ ಸ್ವಾತಂತ್ರ ಹೋರಾಟಗಾರ; ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಎಚ್​ ಎಸ್​​ ದೊರೆಸ್ವಾಮಿ

  ರಾಜ್ಯದಲ್ಲಿ ಆಕ್ಸಿಜನ್​ ಪೂರೈಕೆ ಹೆಚ್ಚಿಸಲು ಮುಂದಾಗಿರುವ ಸರ್ಕಾರ ಚೀನಾ ಮತ್ತು ಸಿಂಗಾಪೂರದಿಂದ ಆಕ್ಸಿಜನ್​ ಕಂನ್ಸಟ್ರೆಟರ್​ಗಳನ್ನು ತರಿಸಿದೆ. ಚೆನ್ನೈನಲ್ಲಿ ಕಾರ್ಪೋರೇಷನ್​ ವತಿಯಿಂದ 100 ಬೆಡ್​ಗಳ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಉಸಿರಾಟದ ಸಮಸ್ಯೆಗೆ ಒಳಗಾದ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  ರಾಜ್ಯದಲ್ಲಿಯೂ ಸೋಂಕು ಹೆಚ್ಚಳಗೊಂಡಿರುವ ಹಿನ್ನಲೆ ಈಗಾಗಲೇ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ.  ಮೇ 10ರಿಂದ 24ರವರೆಗೆ ತಮಿಳುನಾಡಿನಲ್ಲಿ ತರಕಾರಿ ಅಂಗಡಿ, ಮಾಂಸದಂಗಡಿ, ಮೀನಿನ ಅಂಗಡಿ, ದಿನಸಿ ಅಂಗಡಿಗಳು ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರುತ್ತವೆ. ಉಳಿದಂತೆ ಎಲ್ಲ ಅಂಗಡಿಗಳು ಬಂದ್ ಆಗಿರಲಿವೆ. ತಮಿಳುನಾಡಿನಲ್ಲಿ ಬಾರ್, ಲಿಕ್ಕರ್ ಶಾಪ್​ಗಳು ಕೂಡ 14 ದಿನಗಳ ಕಾಲ ಬಂದ್ ಆಗಲಿವೆ. ರೆಸ್ಟೋರೆಂಟ್​ಗಳಲ್ಲಿ ಪಾರ್ಸಲ್​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 14 ದಿನಗಳ ಲಾಕ್​ಡೌನ್​ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ.
  Published by:Seema R
  First published: