• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾ ಲಾಕ್​ಡೌನ್ ಸಡಿಲ​: ಸೆಪ್ಟೆಂಬರ್​ 1ರಿಂದ ಶಾಲಾ- ಕಾಲೇಜು ಆರಂಭಿಸಿದ ತಮಿಳುನಾಡು ಸರ್ಕಾರ

ಕೊರೋನಾ ಲಾಕ್​ಡೌನ್ ಸಡಿಲ​: ಸೆಪ್ಟೆಂಬರ್​ 1ರಿಂದ ಶಾಲಾ- ಕಾಲೇಜು ಆರಂಭಿಸಿದ ತಮಿಳುನಾಡು ಸರ್ಕಾರ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

• ಶಾಲೆಗಳು 9 ರಿಂದ 12 ನೇ ತರಗತಿಗಳಿಗೆ ಸೆಪ್ಟೆಂಬರ್ 1 ರಿಂದ ಶೇ .50 ಸಾಮರ್ಥ್ಯದೊಂದಿಗೆ ಸರದಿ ಆಧಾರದ ಮೇಲೆ ಮತ್ತೆ ತೆರೆಯಲ್ಪಡುತ್ತವೆ. 1 ರಿಂದ 8 ನೇ ತರಗತಿಗಳಿಗೆ ಶಾಲೆಯನ್ನು ಪುನಃ ತೆರೆಯುವ ನಿರ್ಧಾರವನ್ನು ಸೆಪ್ಟೆಂಬರ್ 15 ರ ನಂತರ ನಿರ್ಧರಿಸಲಾಗುವುದು.

  • Share this:

ತಮಿಳುನಾಡು ಸರ್ಕಾರವು ಶನಿವಾರ ಕೋವಿಡ್  ಲಾಕ್‌ಡೌನ್ ನಿರ್ಬಂಧಗಳನ್ನು ಸೆಪ್ಟೆಂಬರ್ 6 ರವರೆಗೆ ವಿಸ್ತರಿಸಿದೆ. ಚಿತ್ರಮಂದಿರಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದು,  ಶಾಲೆಗಳನ್ನು ಮತ್ತೆ ತೆರೆಯಬಹುದು ಎಂದು ತಿಳಿಸಿದೆ 9 ರಿಂದ 12 ನೇ ತರಗತಿವರೆಗೆ ಸೆಪ್ಟೆಂಬರ್ 1 ರಿಂದ ಆರಂಭಿಸಬಹುದು ಎಂದು ಸರ್ಕಾರ ಹೇಳಿದೆ.


ಈ ತಿಂಗಳ ಆರಂಭದಲ್ಲಿ ಸರ್ಕಾರವು ಆಗಸ್ಟ್ 23 ರವರೆಗೆ ನಿರ್ಬಂಧಗಳನ್ನು ವಿಸ್ತರಿಸಿತ್ತು. 9, 10, 11 ಮತ್ತು 12 ರ ಶಾಲೆಗಳನ್ನು ಸೆಪ್ಟೆಂಬರ್ 1 ರಿಂದ 50 ಪ್ರತಿಶತ ವಿದ್ಯಾರ್ಥಿಗಳೊಂದಿಗೆ ತೆರೆಯಬಹುದು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಿಸಿದರು.


"ವಿವಿಧ ವಿಭಾಗಗಳ ಪರಿಣಿತರ  ಅಭಿಪ್ರಾಯವನ್ನು ಪರಿಗಣಿಸಿ, ಕೋವಿಡ್ -19 ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಕ್ಕೆ ಅನುಸಾರವಾಗಿ 9, 10, 11, ಮತ್ತು 12 ನೇ ತರಗತಿಗಳಿಗೆ ಸೆಪ್ಟೆಂಬರ್ 1 ರಿಂದ 50 ಪ್ರತಿಶತ ವಿದ್ಯಾರ್ಥಿಗಳೊಂದಿಗೆ ಶಾಲೆಗಳನ್ನು ಮರು ಆರಂಭಿಸಲು ಪ್ರಸ್ತಾಪಿಸಲಾಗಿದೆ" ಎಂದು ಅವರು ಹೇಳಿದರು.


"ಸಾರ್ವಜನಿಕರು ಸರ್ಕಾರವು ವಿಸ್ತರಿಸಿರುವ ಸಡಿಲಿಕೆಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯವನ್ನು ಹೊರತುಪಡಿಸಿ ಜನರ ಜೀವನೋಪಾಯವನ್ನು ಪರಿಗಣಿಸಿ ನಿರ್ಧಾರಗಳನ್ನು ಕೈಗೊಂಡಿರುವುದರಿಂದ ಸಡಿಲಿಕೆಗಳನ್ನು ಸರಿಯಾಗಿ ಬಳಸಿಕೊಳ್ಳುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.


ಏನಿದೆ ಮತ್ತು ಏನಿಲ್ಲ ಇಲ್ಲಿದೆ ಪಟ್ಟಿ

• ಶಾಲೆಗಳು 9 ರಿಂದ 12 ನೇ ತರಗತಿಗಳಿಗೆ ಸೆಪ್ಟೆಂಬರ್ 1 ರಿಂದ ಶೇ .50 ಸಾಮರ್ಥ್ಯದೊಂದಿಗೆ ಸರದಿ ಆಧಾರದ ಮೇಲೆ ಮತ್ತೆ ತೆರೆಯಲ್ಪಡುತ್ತವೆ. 1 ರಿಂದ 8 ನೇ ತರಗತಿಗಳಿಗೆ ಶಾಲೆಯನ್ನು ಪುನಃ ತೆರೆಯುವ ನಿರ್ಧಾರವನ್ನು ಸೆಪ್ಟೆಂಬರ್ 15 ರ ನಂತರ ನಿರ್ಧರಿಸಲಾಗುವುದು.


ಪಾಲಿಟೆಕ್ನಿಕ್‌ ಮತ್ತು ಇತರೇ ಕಾಲೇಜುಗಳನ್ನು ಸೆಪ್ಟೆಂಬರ್ 1 ರಿಂದ ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ.


ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಗಳನ್ನು ಸಂಬಂಧಪಟ್ಟ ಎರಡು ಇಲಾಖೆಗಳ ಕಾರ್ಯದರ್ಶಿಗಳು ಬಿಡುಗಡೆ ಮಾಡುತ್ತಾರೆ ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸಿರಬೇಕು ಎಂದು ಹೇಳಲಾಗಿದೆ.


ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಐಟಿ-ಸಕ್ರಿಯಗೊಳಿಸಿದ ಸೇವಾ ಘಟಕಗಳು ಶೇಕಡಾ 100 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು, ನಿಗದಿತ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಎಂದು ಸೂಚಿಸಲಾಗಿದೆ.


ಬೀಚ್​, ಮೃಗಾಲಯಗಳು, ಉದ್ಯಾನವನಗಳು ಮತ್ತು ಬೋಟ್‌ಹೌಸ್‌ಗಳನ್ನು ಸಾರ್ವಜನಿಕರ ಬಳಕೆಗೆ ಮತ್ತೆ ತೆರೆಯಲು ಅನುಮತಿಸಲಾಗುವುದು ಮತ್ತು ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳನ್ನು ಮತ್ತೆ ತೆರೆಯಬಹುದು.


• ಚಿತ್ರಮಂದಿರಗಳನ್ನು ಆಗಸ್ಟ್ 23 ರಿಂದ ಶೇಕಡಾ 50 ರಷ್ಟು ತೆರೆಯಬಹುದು.


ಮಾರ್ಗಸೂಚಿಗಳನ್ನು ಅನುಸರಿಸಿ ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಸಾರ್ವಜನಿಕ ಸಾರಿಗೆ ಸೇವೆಯನ್ನು ಅನುಮತಿಸಲಾಗುವುದು.


ಸೆಪ್ಟೆಂಬರ್ 1 ರಿಂದ ಮಧ್ಯಾಹ್ನದ ಊಟ ನೀಡಲು ಅಂಗನವಾಡಿಗಳನ್ನು ತೆರೆಯಲಾಗುವುದು.


ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕ, ಯುಪಿ ಮಾಜಿ ಸಿಎಂ ಕಲ್ಯಾಣ್​ ಸಿಂಗ್​ ಅನಾರೋಗ್ಯದಿಂದ ನಿಧನ

• ಸೋಮವಾರದಿಂದ ಎಲ್ಲಾ ಅಂಗಡಿಗಳನ್ನು ತೆರೆಯಲು ಒಂದು ಗಂಟೆ ವಿಸ್ತರಣೆ ನೀಡಲಾಗಿದೆ. ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: