Vaccine: ದಿನದ 24 ಗಂಟೆ ಕೊರೋನಾ ಲಸಿಕೆ ನೀಡುವ ಕೇಂದ್ರಗಳನ್ನು ತೆರೆದ ತಮಿಳುನಾಡು ಸರ್ಕಾರ

ಆಗಸ್ಟ್ 21 ರ ವೇಳೆಗೆ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಸುಮಾರು 19.36 ಲಕ್ಷ ಜನರು ಖಾಸಗಿ ಕೇಂದ್ರಗಳಿಂದ ಲಸಿಕೆ ಪಡೆದಿದ್ದಾರೆ. ಉಳಿದ ಅರ್ಹ ಜನಸಂಖ್ಯೆಗೆ ಲಸಿಕೆ ಹಾಕಲು ತಮಿಳುನಾಡಿಗೆ ಇನ್ನೂ ಒಂಬತ್ತು ಕೋಟಿ ಡೋಸ್ ಅಗತ್ಯವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನೈ (ತಮಿಳುನಾಡು): ಕೋವಿಡ್ (Covid-19) ನಿಯಂತ್ರಣಕ್ಕಾಗಿ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಇದೀಗ ಲಸಿಕೆ ನೀಡುವಿಕೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರ (Tamil Nadu government) ಒಂದು ಹೆಜ್ಜೆ ಮುಂದೆ ಇಟ್ಟಿದೆ. ರಾಜ್ಯದ ಎಲ್ಲ ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ಕೋವಿಡ್ ಲಸಿಕೆ ಕೇಂದ್ರ (vaccination centres) ತೆರೆದಿದೆ. ಇದರಿಂದ ಲಸಿಕೆ ಅಭಿಯಾನಕ್ಕೆ ರಾಜ್ಯದಲ್ಲಿ ಮತ್ತಷ್ಟು ವೇಗ ದೊರಕಲಿದೆ.

    ರಾಜ್ಯದ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಸ್ಟ್ 23ರಿಂದಲೇ ದಿನದ 24 ತಾಸು ಲಸಿಕೆ ಕೇಂದ್ರ ತೆರೆಯಲಾಗಿದೆ. ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಚೆನ್ನೈನ ಡೈರೆಕ್ಟರೆಟ್ ಆಫ್ ಪಬ್ಲಿಕ್ ಹೆಲ್ತ್ ಕ್ಯಾಂಪಸ್​ನಲ್ಲಿ ಆಗಸ್ಟ್ 22ರಂದು ಈ ಕಾರ್ಯಕ್ರಮವನ್ನು ಮೊದಲಿಗೆ ಉದ್ಘಾಟಿಸಿದ್ದರು.

    ಚೆನ್ನೈನ ಆರ್​ಜಿಜಿಜಿಎಚ್, ಒಮಂದೂರ್, ಸ್ಟ್ಯಾನ್ಲೆ, ರಾಯಪೆಟ್ಟ ಮತ್ತು ಕಿಲ್ಪೌಕ್ ಈ ಐದು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜ್ ಇಲ್ಲವೋ ಅಲ್ಲಿ ಆಯಾ ಜಿಲ್ಲಾಸ್ಪತ್ರೆಯಲ್ಲಿ ದಿನದ 24 ಗಂಟೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.

    "ಸೋಮವಾರದಿಂದ ಎಲ್ಲಾ ಲಸಿಕೆ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಈ ಕ್ರಮವು ತಡರಾತ್ರಿಯವರೆಗೆ ಪ್ರಯಾಣಿಸುವ ಮತ್ತು ಕೆಲಸ ಮಾಡುವ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ. ಜನರಿಗೆ ಲಸಿಕೆ ನೀಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಕೋರಲಾಗಿದೆ. ಯಾರು ಯಾವಾಗ ಬೇಕಾದರೂ ಬಂದು ಲಸಿಕೆ ಪಡೆಯಬಹುದು," ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಹೇಳಿದರು.

    "ಶಿಬಿರಗಳನ್ನು ನಡೆಸಲು ಒಂದು ವಿಶೇಷ ತಂಡವನ್ನು ರಚಿಸಲಾಗುವುದು ಮತ್ತು ಅವರಿಗೆ ವೇಳಾಪಟ್ಟಿಯನ್ನು ನೀಡಲಾಗುವುದು. ಚೆನ್ನೈನಲ್ಲಿ, ಎಲ್ಲಾ ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಈ ಲಸಿಕೆ ಕೇಂದ್ರಗಳನ್ನು ಹೊಂದಿರುತ್ತವೆ. ಮತ್ತು ಸೋಮವಾರದಿಂದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು ಕೂಡ ಹೊಂದಿರುತ್ತವೆ" ಎಂದು ಅವರು ಹೇಳಿದರು.

    ಆಗಸ್ಟ್ 21 ರ ವೇಳೆಗೆ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಸುಮಾರು 19.36 ಲಕ್ಷ ಜನರು ಖಾಸಗಿ ಕೇಂದ್ರಗಳಿಂದ ಲಸಿಕೆ ಪಡೆದಿದ್ದಾರೆ. ಉಳಿದ ಅರ್ಹ ಜನಸಂಖ್ಯೆಗೆ ಲಸಿಕೆ ಹಾಕಲು ತಮಿಳುನಾಡಿಗೆ ಇನ್ನೂ ಒಂಬತ್ತು ಕೋಟಿ ಡೋಸ್ ಅಗತ್ಯವಿದೆ.

    ರಾಜ್ಯ ಸರ್ಕಾರವು 80 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಅವರವರ ಮನೆಗಳಲ್ಲಿ ಲಸಿಕೆ ಹಾಕುವ ಉಪಕ್ರಮವನ್ನು ಆರಂಭಿಸಿದೆ. ವೃದ್ಧರಿಗೆ ಲಸಿಕೆ ಹಾಕಲು ಬಳಸಲಾಗುವ ಹದಿನೈದು ವಾಹನಗಳಿಗೆ ಪೌರಾಡಳಿತ ಸಚಿವ ಕೆ ಎನ್ ನೆಹರು ಮತ್ತು ಜಿಸಿಸಿ ಆಯುಕ್ತ ಗಗನ್ ದೀಪ್ ಸಿಂಗ್ ಬೇಡಿ ಚಾಲನೆ ನೀಡಿದರು.

    ಇದನ್ನು ಓದಿ: ಎಚ್ಡಿಕೆ ಸತ್ಯ ಹರಿಶ್ಚಂದ್ರನ 2ನೆ ಕುಡಿ, ಇಂಥ ಪ್ರಾಮಾಣಿಕರನ್ನು ನಾನು ನೋಡಿಯೇ ಇಲ್ಲ!; ಸಚಿವ ಬಿಸಿ ಪಾಟೀಲ್ ವ್ಯಂಗ್ಯ

    ಅದರಂತೆ ಸೋಮವಾರದ ತಮಿಳುನಾಡಿನ ಎಲ್ಲ ಪ್ರಮುಖ ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ಲಸಿಕೆ ಲಭ್ಯವಾಗಲಿದೆ. ಜನರು ಯಾವಾಗ ಬೇಕಾದರೂ ಹೋಗಿ ಲಸಿಕೆ ಪಡೆಯಬಹುದು. ಯಾವ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳು ಇಲ್ಲವೋ ಅಂತಹ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಕೇಂದ್ರ ಆರಂಭಿಸಲಾಗಿದೆ. ಹೀಗಾಗಿ ರಾಜ್ಯದ ಎಲ್ಲೆಡೆ ಲಸಿಕೆ ಅಭಿಯಾನಕ್ಕೆ ವೇಗ ದೊರತಂತಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: