Booster Dose: ರಹಸ್ಯವಾಗಿ ಕೊರೋನಾ ಬೂಸ್ಟರ್​ ಡೋಸ್​​ ತೆಗೆದುಕೊಳ್ಳುತ್ತಿರುವ ತಮಿಳುನಾಡಿನ ವೈದ್ಯರು

ಅನೇಕ ವೈದ್ಯರು Covaxin ಅನ್ನು ಮೊದಲೇ ತೆಗೆದುಕೊಂಡಿದ್ದರೆ, ಈಗ ಅದಕ್ಕೆ ಪ್ರತಿಯಾಗಿ ಕೋವಿಶೀಲ್ಡ್ ಅನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳುತ್ತಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೆನ್ನೈ(ಡಿ.25): ತಮಿಳುನಾಡಿನ(Tamil Nadu) ಕೆಲವು ವೈದ್ಯರು(Doctors) ಕೊರೋನಾ ವೈರಸ್​ನ ಬೂಸ್ಟರ್​(Booster Dose) ಲಸಿಕೆಗಳನ್ನು ರಹಸ್ಯವಾಗಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆರೋಗ್ಯ ಇಲಾಖೆ(Health Department)ಯ ಮೂಲಗಳ ಪ್ರಕಾರ, ಅನೇಕ ವೈದ್ಯರು ಖಾಸಗಿ ಆಸ್ಪತ್ರೆಗಳಿಂದ ಬೂಸ್ಟರ್​ ಡೋಸ್​ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರಲ್ಲಿ ಕೆಲವರು ಸರ್ಕಾರಿ ಆಸ್ಪತ್ರೆ(Government Hospital)ಗಳಲ್ಲಿ ಬೂಸ್ಟರ್​​ಗಳನ್ನು ಬಳಸದೆ ಉಳಿದಿರುವ ವಯಲ್ಸ್​​ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಡೋಸ್​ ಲಸಿಕೆ ತೆಗೆದುಕೊಂಡರೂ ಸಾಕಾಗಲ್ಲ

ಚೆನ್ನೈನ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಮಾತನಾಡಿ, ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ, ಎರಡನೇ ಡೋಸ್​​​ ಲಸಿಕೆಯನ್ನು ತೆಗೆದುಕೊಂಡರೂ ಸಹ ಪ್ರತಿಕಾಯ ಮಟ್ಟಗಳು ತುಂಬಾ ಕಡಿಮೆಯಾಗಿವೆ. ಹೀಗಾಗಿ ಬೂಸ್ಟರ್​ ಡೋಸ್​​ನ ಅಗತ್ಯ ತುಂಬಾ ಇದೆ ಎಂದು ಹೇಳಿದರು.

ಲಸಿಕೆಯ ಮೊದಲ ಡೋಸ್​ನ್ನು ವೈದ್ಯರ ಸಮುದಾಯವೇ ತೆಗೆದುಕೊಂಡಿದೆ ಮತ್ತು ಕೋವಿಶೀಲ್ಡ್ ಲಸಿಕೆಗಳ ಅವಧಿಯು ‘ಕಡಿಮೆ‘ ಎಂದು ಕೆಲವು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Morning Digest: 6 ರಾಜ್ಯಗಳಲ್ಲಿ ಕರ್ಫ್ಯೂ ಜಾರಿ, ಚಿನ್ನದ ಬೆಲೆ ಸ್ಥಿರ, ಪೆಟ್ರೋಲ್​ ದರ ಏರಿಕೆ; ಬೆಳಗಿನ ಟಾಪ್​ ನ್ಯೂಸ್​​ಗಳು

ನಿಯಮ ಉಲ್ಲಂಘನೆ

ಆದರೆ, ಕೇಂದ್ರ ಸರ್ಕಾರ ಕೇವಲ ಎರಡು ಡೋಸ್ ಲಸಿಕೆಗೆ ಅನುಮೋದನೆ ನೀಡಿದ್ದು, ‘ಹೆಚ್ಚು ಡೋಸ್ ತೆಗೆದುಕೊಳ್ಳುವುದು ಭಾರತ ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ’ ಎಂದು ರಾಜ್ಯದ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಟಿ.ಎಸ್.ಸೆಲ್ವವಿನಾಯಗಂ ಹೇಳಿದ್ದಾರೆ.

ಮತ್ತೊಂದೆಡೆ, ವೈದ್ಯರು ಸಹ ರೋಗ ಲಕ್ಷಣಗಳನ್ನು ಹೊಂದಿದ್ದಾರೆ ಮತ್ತು ಅವರು ಸರ್ಕಾರದ ಅನುಮೋದನೆಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ ಎಂದು ಹೇಳುತ್ತಾರೆ.

ಬೂಸ್ಟರ್​ ಡೋಸರ್​​ಗಳ ಅನುಮತಿಗೆ ಕಾಯುತ್ತಿರುವ ವೈದ್ಯರು

"ನಾವು ಬೂಸ್ಟರ್ ಡೋಸ್‌ಗಳಿಗೆ ಸರ್ಕಾರದ ಅನುಮೋದನೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ. ಇದು ನಮ್ಮ ಕೆಲಸವನ್ನು ಮೊಟಕುಗೊಳಿಸುವುದಕ್ಕೆ ಕಾರಣವಾಗುತ್ತದೆ. ಏಕೆಂದರೆ ನಮಗೆ ಹಲವಾರು ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಬೂಸ್ಟರ್ ಡೋಸ್​​ನ ಅಗತ್ಯವಿರುತ್ತದೆ" ಎಂದು ಪ್ರಮುಖ ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಭಾಗದ ಮಾಜಿ ಮುಖ್ಯಸ್ಥರಾಗಿರುವ ಹಿರಿಯ ವೈದ್ಯರು IANS ಗೆ ಹೇಳಿದರು.

ಇದನ್ನೂ ಓದಿ: Omicron: ಹೆಚ್ಚುತ್ತಿರುವ ಓಮೈಕ್ರಾನ್ ಪ್ರಕರಣಗಳ ಹಿನ್ನೆಲೆ ದೇಶದ 6 ರಾಜ್ಯಗಳಲ್ಲಿ ಕರ್ಫ್ಯೂ -ಕೆಲವೆಡೆ ಸೆಕ್ಷನ್ 144 ಜಾರಿ

ಮಿಶ್ರ ಲಸಿಕೆ ಪರಿಣಾಮಕಾರಿ

ಅನೇಕ ವೈದ್ಯರು Covaxin ಅನ್ನು ಮೊದಲೇ ತೆಗೆದುಕೊಂಡಿದ್ದರೆ, ಈಗ ಅದಕ್ಕೆ ಪ್ರತಿಯಾಗಿ ಕೋವಿಶೀಲ್ಡ್ ಅನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಎರಡು ವಿಭಿನ್ನ ಲಸಿಕೆಗಳನ್ನು ಮಿಶ್ರಣ ಮಾಡುವುದರಿಂದ ವ್ಯಕ್ತಿಯ ಪ್ರತಿಕಾಯ ಮಟ್ಟವನ್ನು ಹೆಚ್ಚಿಸುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ರೋಗನಿರೋಧಕ ಅಧ್ಯಯನಗಳಲ್ಲಿ, ಮಿಶ್ರ ಲಸಿಕೆಗಳು ಉತ್ತಮ ಪರಿಣಾಮವನ್ನು ಬೀರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
Published by:Latha CG
First published: