HOME » NEWS » Coronavirus-latest-news » TAMIL NADU CM ASSURES STATE READY TO BATTLE COVID 19 RH

2 ಲಕ್ಷ ಜನರ ಸ್ಕ್ರೀನಿಂಗ್, 43 ಸಾವಿರ ಮಂದಿ ಹೋಂ ಕ್ವಾರಂಟೈನ್; ಕೋವಿಡ್ -19 ವಿರುದ್ಧ ಹೋರಾಡಲು ಸಿದ್ಧ ಎಂದ ತಮಿಳುನಾಡು ಸಿಎಂ

ಮಾರಕ ವೈರಸ್ ವಿರುದ್ಧ ಹೋರಾಡಲು ಪ್ರಸ್ತುತ ವೈದ್ಯರು, ದಾದಿಯರು ಮತ್ತು ಪ್ಯಾರಾ-ವೈದ್ಯಕೀಯ ಸಿಬ್ಬಂದಿ ತಂಡವನ್ನು ಹೆಚ್ಚಿಸಲು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. ಅಲ್ಲದೇ ಸರ್ಕಾರವು 530 ವೈದ್ಯರು, 1,000 ದಾದಿಯರು ಮತ್ತು 1,508 ಲ್ಯಾಬ್ ತಂತ್ರಜ್ಞರನ್ನು ನೇಮಕ ಮಾಡಲು ನಿರ್ಧರಿಸಿದೆ.

news18-kannada
Updated:April 1, 2020, 4:48 PM IST
2 ಲಕ್ಷ ಜನರ ಸ್ಕ್ರೀನಿಂಗ್, 43 ಸಾವಿರ ಮಂದಿ ಹೋಂ ಕ್ವಾರಂಟೈನ್; ಕೋವಿಡ್ -19 ವಿರುದ್ಧ ಹೋರಾಡಲು ಸಿದ್ಧ ಎಂದ ತಮಿಳುನಾಡು ಸಿಎಂ
ತಮಿಳುನಾಡು ಸಿಎಂ ಪಳನಿಸ್ವಾಮಿ
  • Share this:
ಚೆನ್ನೈ: ನಿಜಾಮುದ್ದೀನ್ ಧಾರ್ಮಿಕ ಸಭೆಯಿಂದ ತಮಿಳುನಾಡಿಗೆ ಮರಳುವ ಜನರಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.

ವೈರಸ್ ಹರಡುವುದನ್ನು ನಿಯಂತ್ರಿಸಲು ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪಳನಿಸ್ವಾಮಿ ದಿ ಹಿಂದೂ ಪತ್ರಿಕೆಯ ಅಭಿಪ್ರಾಯ ಅಂಕಣದಲ್ಲಿ ಹೀಗೆ ಬರೆದಿದ್ದಾರೆ.

ಈ ವೈರಸ್‌ನ ಸ್ವರೂಪವನ್ನು ಮೊದಲೇ ಅರಿತುಕೊಂಡು, ಈ ಭೀಕರ ಸೋಂಕು ಕೇವಲ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿದ್ದಾಗ ಸಹ, 2020ರ ಜನವರಿಯಲ್ಲಿ, ರಾಜ್ಯಕ್ಕೆ ಆಗಮಿಸಿದ ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷಿಸಲು ನಾನು ರಾಜ್ಯ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದೆ. ರೋಗ ಹರಡುವುದನ್ನು ತಪ್ಪಿಸಲು, ಮಾರ್ಚ್ 15 ರಂದು ಅಮ್ಮನ [ಜಯಲಲಿತಾ] ಸರ್ಕಾರವು ಶಿಕ್ಷಣ ಸಂಸ್ಥೆಗಳು ಮತ್ತು ದೊಡ್ಡ ವಾಣಿಜ್ಯ ಸಂಕೀರ್ಣಗಳು, ಮಾಲ್‌ಗಳು, ಚಿತ್ರಮಂದಿರಗಳು, ಪೂಜಾ ಸ್ಥಳಗಳು ಮತ್ತು ಮುಂತಾದ ಹೆಚ್ಚಿನ ಅಪಾಯಕಾರಿ ಪ್ರದೇಶಗಳನ್ನು ಮುಚ್ಚಿದೆ. ಪ್ರಕರಣಗಳು ವರದಿಯಾಗಲು ಪ್ರಾರಂಭಿಸಿದಾಗ ರಾಜ್ಯದ ಗಡಿಗಳನ್ನು ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ.

ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡುವ ಮೂಲಕ ತಮಿಳುನಾಡು ಸರ್ಕಾರ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿತು ಮತ್ತು ಮಾರ್ಚ್ 31 ರವರೆಗೆ ರಾಜ್ಯದಾದ್ಯಂತ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಪಾಸಣೆ ಮಾಡಿದ ಪರಿಣಾಮವಾಗಿ ಸುಮಾರು 43,537 ಜನರನ್ನು ಐಸೋಲೇಶನ್​ನಲ್ಲಿ ಇಡಲಾಗಿತ್ತು ಎಂದು ಸಿಎಂ ಹೇಳಿದ್ದಾರೆ.

ಪಳನಿಸ್ವಾಮಿ ತಮ್ಮ ಸರ್ಕಾರವು ಮಂಡಿಸಿರುವ 'ಧಾರಕ ಯೋಜನೆ'ಯನ್ನೂ ಶ್ಲಾಘಿಸಿದರು.

ಈ ನಿಟ್ಟಿನಲ್ಲಿ ಕೇಂದ್ರವು ರಾಜ್ಯಗಳಿಗೆ ನಿರಂತರವಾಗಿ ಸಹಾಯ ಮಾಡಬೇಕು. ಈ ಬಿಕ್ಕಟ್ಟನ್ನು ನಿವಾರಿಸಲು ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ. ತಮಿಳುನಾಡಿಗೆ, 9,000 ಕೋಟಿ ಸೇರಿದಂತೆ ಎಲ್ಲಾ ರಾಜ್ಯಗಳಿಗೆ 1 ಲಕ್ಷ ಕೋಟಿ ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರವನ್ನು ಕೋರಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಕೊರೋನಾ ಚಿಕಿತ್ಸೆ ವೇಳೆ ಮಡಿಯುವ ವೈದ್ಯಕೀಯ ಸಿಬ್ಬಂದಿಗೆ 1 ಕೋಟಿ ರೂ. ಪರಿಹಾರ; ಸಿಎಂ ಕೇಜ್ರಿವಾಲ್​​ಇದೀಗ, ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸುವುದು ಅವರ ಸರ್ಕಾರದ ಆದ್ಯತೆಯಾಗಿದೆ ಮತ್ತು ಇದು ಮುಗಿದ ನಂತರ, ಒಟ್ಟಾರೆಯಾಗಿ ದೇಶವು ಆರ್ಥಿಕತೆಯನ್ನು ಅಭಿವೃದ್ಡಿಪಡಿಸಲು ಕೈ ಜೋಡಿಸಬೇಕು ಎಂದು ತಮ್ಮ ಅಂಕಣವನ್ನು ಮುಗಿಸಿದ್ದಾರೆ.

  • ವರದಿ: ಸಂಧ್ಯಾ ಎಂ


First published: April 1, 2020, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories