HOME » NEWS » Coronavirus-latest-news » SUPREME COURT SAYS TO UNION GOVERNMENT TO CONSIDER LOCK DOWN OPTION AMID CORONA CASES INCREASE DBDEL LG

Lockdown 2021: ಕೊರೋನಾ ‌ನಿಯಂತ್ರಿಸಲು ಮತ್ತೆ ಲಾಕ್​ಡೌನ್​ ಮಾಡಲೇಬೇಕಾಗುತ್ತಾ?; ಕೇಂದ್ರಕ್ಕೆ ಸುಪ್ರೀಂ ಹೇಳಿದ್ದೇನು?

ಆರೋಗ್ಯ ಕ್ಷೇತ್ರದ ತಜ್ಞರು ದೇಶದಲ್ಲಿ ಕೊರೋನಾದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ತಜ್ಞರು ಕೊರೋನಾದ 3ನೇ ಅಲೆಗೆ ಸಿದ್ದರಾಗಿ ಎಂದು ಎಚ್ಚರಿಸಿದ್ದಾರೆ. ವಿದೇಶಿ ಅಧ್ಯಯನಗಳು ಕೂಡ ಇಂಥದೇ ಆತಂಕವನ್ನು ಹೊರಹಾಕಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್​ ಮಾಡಬೇಕಾಗುತ್ತಾ? ಎಂಬ ಚರ್ಚೆ ಶುರುವಾಗಿದೆ.

news18-kannada
Updated:May 3, 2021, 10:55 AM IST
Lockdown 2021: ಕೊರೋನಾ ‌ನಿಯಂತ್ರಿಸಲು ಮತ್ತೆ ಲಾಕ್​ಡೌನ್​ ಮಾಡಲೇಬೇಕಾಗುತ್ತಾ?; ಕೇಂದ್ರಕ್ಕೆ ಸುಪ್ರೀಂ ಹೇಳಿದ್ದೇನು?
ಸುಪ್ರೀಂ ಕೋರ್ಟ್​.
  • Share this:
ನವದೆಹಲಿ(ಮೇ 3): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಹಲವು ನಿರ್ಬಂಧಗಳ ನಡುವೆಯೂ ಪ್ರತಿ ದಿನ‌ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೋನಾದ ಹುಟ್ಡಡಗಿಸಲು ಮತ್ತೆ ಲಾಕ್​ಡೌನ್​​ ಮಾಡಲೇಬೇಕಾಗುತ್ತಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದಾಗಿ 'ಲಾಕ್​​​ಡೌನ್​ ಎನ್ನುವುದು ಕಡೆಯ ಆಯ್ಕೆ' ಎಂದ ಮೇಲೂ ಮತ್ತೆ ಲಾಕ್​​ಡೌನ್​​ ಮಾಡಲೇಬೇಕಾಗುತ್ತಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶ. ಕೊರೋನಾ ‌ನಿಯಂತ್ರಣಕ್ಕೆ ಲಾಕ್​ಡೌನ್​ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ರಜಾದಿನವಾದರೂ ಭಾನುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ದೇಶದಲ್ಲಿ ಪ್ರತಿ ದಿನ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿರುವ ಮತ್ತು ಪ್ರತಿ ದಿನ 3 ಸಾವಿರಕ್ಕೂ ಹೆಚ್ಚು ಜನ ಕೊರೋನಾಗೆ ಬಲಿ ಆಗುತ್ತಿರುವ ಹಿನ್ನೆಲೆಯಲ್ಲಿ, ಆಮ್ಲಜನಕ, ಕೊರೋನಾ ಲಸಿಕೆ, ವೆಂಟಿಲೇಟರ್, ಐಸಿಯು, ಬೆಡ್ ಮತ್ತಿತರ ಕೊರತೆಗಳು ತಲೆದೂರಿರುವ ಹಿನ್ನಲೆಯಲ್ಲಿ, ಕೊರೋನಾ ವಿಷಯದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಾಕ್​ಡೌನ್​ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚನೆ ನೀಡಿದೆ.

ಕ್ಯಾಲಿಫೋರ್ನಿಯಾ ಮನೆಯ ಚಿಮಣಿಯಲ್ಲಿ ಸಿಲುಕಿಕೊಂಡ ವಲಸೆ ಹಕ್ಕಿಗಳ ಹಿಂಡನ್ನು ಬಿಡುಗಡೆ ಮಾಡಿದ ಅಗ್ನಿಶಾಮಕ ದಳ

ಇದಲ್ಲದೆ ಆರೋಗ್ಯ ಕ್ಷೇತ್ರದ ತಜ್ಞರು ದೇಶದಲ್ಲಿ ಕೊರೋನಾದಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ತಜ್ಞರು ಕೊರೋನಾದ 3ನೇ ಅಲೆಗೆ ಸಿದ್ದರಾಗಿ ಎಂದು ಎಚ್ಚರಿಸಿದ್ದಾರೆ. ವಿದೇಶಿ ಅಧ್ಯಯನಗಳು ಕೂಡ ಇಂಥದೇ ಆತಂಕವನ್ನು ಹೊರಹಾಕಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್​ ಮಾಡಬೇಕಾಗುತ್ತಾ? ಎಂಬ ಚರ್ಚೆ ಶುರುವಾಗಿದೆ.

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಲಾಕ್​ಡೌನ್​ ಮಾಡದೆ ಇದ್ದರೆ ಕೊರೋನಾ ನಿಯಂತ್ರಣ ಮಾಡದ ತನ್ನ ವೈಫಲ್ಯವನ್ನು ಕೇಂದ್ರ ಸರ್ಕಾರ ಮುಂದೆ ಸುಪ್ರೀಂ ಕೋರ್ಟಿನಲ್ಲಿ ಹೇಗೆ ಸಮರ್ಥಿಸಿಕೊಳ್ಳಲಿದೆ ಎಂಬ ವಾದವೂ ಕೇಳಿಬರುತ್ತಿದೆ. ಇದರಿಂದಾಗಿ ಮತ್ತೆ ದೇಶದ ಜನ ಲಾಕ್​ಡೌನ್​ ಎದುರಿಸಬೇಕಾಗಬಹುದು ಎಂಬ ಆತಂಕ ಶುರುವಾಗಿದೆ.
ಭಾನುವಾರ (ಮೇ 2) 3,68,147 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,00,732 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,99,25,604ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಭಾನುವಾರ 3,417 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,18,959ಕ್ಕೆ ಏರಿಕೆ ಆಗಿದೆ.
Published by: Latha CG
First published: May 3, 2021, 10:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories