HOME » NEWS » Coronavirus-latest-news » SUPPLY 700 MT OXYGEN TO DELHI DAILY DONT MAKE US TO GO FIRM SC TELLS CENTRE MAK

Oxygen Crisis: ದೆಹಲಿಗೆ ಪ್ರತಿದಿನ 700 ಮೆ.ಟನ್ ಆಕ್ಸಿಜನ್ ಸರಬರಾಜು ಮಾಡಿ; ಕೇಂದ್ರಕ್ಕೆ ಸುಪ್ರೀಂ ತಾಕೀತು!

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ನ್ಯಾಯಪೀಠವು ರಾಷ್ಟ್ರೀಯ ರಾಜಧಾನಿಗೆ ಪ್ರತಿದಿನ 700 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಪೂರೈಸುವುದನ್ನು ಕೇಂದ್ರವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

news18-kannada
Updated:May 7, 2021, 3:08 PM IST
Oxygen Crisis: ದೆಹಲಿಗೆ ಪ್ರತಿದಿನ 700 ಮೆ.ಟನ್ ಆಕ್ಸಿಜನ್ ಸರಬರಾಜು ಮಾಡಿ; ಕೇಂದ್ರಕ್ಕೆ ಸುಪ್ರೀಂ ತಾಕೀತು!
ಸುಪ್ರೀಂ ಕೋರ್ಟ್​.
  • Share this:
ನವ ದೆಹಲಿ (ಮೇ 07); ನ್ಯಾಯಾಲಯದ ಮುಂದಿನ ಆದೇಶ ಮಾರ್ಪಡಿಸುವವರೆಗೆ ಪ್ರತಿದಿನ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ದೆಹಲಿಗೆ ಸರಬರಾಜು ಮಾಡಬೇಕಾಗು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಕೊರೋನಾ ರೋಗಿಗಳ ಪರಿಸ್ಥಿತಿ ಹೇಳತೀರದಾಗಿದೆ. ಹೀಗಾಗಿ ತಮಗೆ ಆಕ್ಸಿಜನ್ ನೀಡುವಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಅಲ್ಲದೆ, ದೆಹಲಿ ಹೈಕೋರ್ಟ್​ ಎರಡು ದಿನಗಳ ಹಿಂದೆ ಕೋವಿಡ್ ರೋಗಿಗಳಿಗೆ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ದೆಹಲಿಗೆ ಪೂರೈಸುವಂತೆ ತಾಕೀತು ಮಾಡಿತ್ತು. ಆದರೆ, ಕೋರ್ಟ್​ ನಿರ್ದೇಶನವನ್ನು ಪಾಲಿಸದ ಕಾರಣಕ್ಕಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧ ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಆರಂಭಿಸಿತ್ತು. ಈ ವಿಚಾರಣೆಯನ್ನು ತಡೆಹಿಡಿದಿದ್ದ ಸುಪ್ರೀಂ ಕೋರ್ಟ್​, "ಅಧಿಕಾರಿಗಳನ್ನು ಜೈಲಿಗೆ ಹಾಕುವ ಪ್ರಯತ್ನಗಳಿಂದ ಆಮ್ಲಜನಕ ಸಿಗುವುದಿಲ್ಲ. ನಮ್ಮ ಪ್ರಯತ್ನ ಜೀವ ಉಳಿಸುವ ಕೆಲಸಕ್ಕೆ ಮೀಸಲಾಗಬೇಕು ಎಂದಿದೆ. ಅಲ್ಲದೆ ಕೇಂದ್ರ ಸರ್ಕಾರ ಕೂಡಲೆ ದೆಹಲಿಗೆ 700 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಬೇಕು" ಎಂಬ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ನ್ಯಾಯಪೀಠವು ರಾಷ್ಟ್ರೀಯ ರಾಜಧಾನಿಗೆ ಪ್ರತಿದಿನ 700 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಪೂರೈಸುವುದನ್ನು ಕೇಂದ್ರವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ, ನ್ಯಾಯವಾದಿ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರು ದೆಹಲಿ ಸರ್ಕಾರದ ಪರವಾಗಿ ಹಾಜರಾಗಿದ್ದು, ರಾಷ್ಟ್ರ ರಾಜಧಾನಿ ಇಂದು ಬೆಳಿಗ್ಗೆ 9 ಗಂಟೆಯವರೆಗೆ 86 ಮೆ.ಟನ್ ಪಡೆದಿದೆ ಮತ್ತು 16 ಮೆ.ಟನ್ ಸಾಗಣೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

"ಪ್ರತಿದಿನ 700 ಮೆಟ್ರಿಕ್ ಟನ್ ದೆಹಲಿಗೆ ಸರಬರಾಜು ಮಾಡಬೇಕೆಂದು ನಾವು ಬಯಸುತ್ತೇವೆ. ದಯವಿಟ್ಟು ನಾವು ದೃಢವಾಗಿರಬೇಕಾದ ಪರಿಸ್ಥಿತಿಯಲ್ಲಿರಲು ಒತ್ತಾಯಿಸಬೇಡಿ" ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಸರ್ಕಾರಿ ವಕೀಲರು, "ದೆಹಲಿಗೆ ಪ್ರತಿದಿನ ಅಂದು ಬೇಕಾದಷ್ಟು ಮಾತ್ರ ಆಕ್ಸಿಜನ್ ನೀಡುವುದಲ್ಲ, ಬದಲಾಗಿ ಒಟ್ಟಿಗೆ ಸಾಕಷ್ಟು ಆಕ್ಸಿಜನ್ ಪೂರೈಸುವ ಗುರಿ ನಮಗೂ ಇದೆ. ಆದರೆ, ಒಟ್ಟಿಗೆ ಸರಬರಾಜು ಮಾಡಲು ಆಗುತ್ತಿಲ್ಲ. ಆಕ್ಸಿಜನ್ ಸರಬರಾಜು ಮಾಡಲು ಕಂಟೈನರ್ ಹಾಗೂ ಅನೇಕ ಸಾರಿಗೆ ತೊಂದರೆಗಳು ಇವೆ" ಎಂದು ತಿಳಿಸಿದರು.

ಈ ವೇಳೆ ನ್ಯಾಯಪೀಠದ ಪರವಾಗಿ ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್, "ಶುಕ್ರವಾರ ವಿಚಾರಣೆಯ ಮೊದಲು ಅವರು ಈ ವಿಷಯದ ಬಗ್ಗೆ ನ್ಯಾಯಮೂರ್ತಿ ಷಾ ಅವರನ್ನು ಸಂಪರ್ಕಿಸಿದ್ದಾರೆ ಮತ್ತು ದೆಹಲಿಗೆ ಪ್ರತಿದಿನ 700 ಮೆ.ಟನ್ ಎಲ್ಎಂಒ ನೀಡಬೇಕಿದೆ ಎಂಬ ಅಭಿಪ್ರಾಯವು ಸಾಮೂಹಿಕವಾಗಿದೆ. ಹೀಗಾಗಿ ಸರ್ಕಾರ ಯಾವುದೇ ಮಾರ್ಗದಲ್ಲಾದರೂ ಆಕ್ಸಿಜನ್ ನೀಡಲೇಬೇಕು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: MK Stalin Swearing-in: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಪ್ರಮಾಣವಚನ ಸ್ವೀಕಾರ

ಏಪ್ರಿಲ್ 30 ರ ಆದೇಶವನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ಉನ್ನತ ನ್ಯಾಯಾಲಯವು ಮೇ 5 ರಂದು ತಿಳಿಸಿತ್ತು ಮತ್ತು ದೆಹಲಿಗೆ ಪ್ರತಿದಿನ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸುವತ್ತ ಕೇಂದ್ರ ಮುಂದಾಗಬೇಕಿದೆ ಮತ್ತು ಅದು ಹೇಗೆ ಎಂದು ಯೋಜನೆಯನ್ನು ಅದರ ಮುಂದೆ ಇಡಲು ಕೇಂದ್ರ ಸರ್ಕಾರವನ್ನು ಕೇಳಿದೆ. 700MT ಗೆ ಸರಬರಾಜನ್ನು ಪರಿಷ್ಕರಿಸಿ. ಮೇ 6 ರಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಆದೇಶವನ್ನು ಪಾಲಿಸುವುದಾಗಿ ತಿಳಿಸಿದೆ ಮತ್ತು 700 ಎಂಟಿ ಎಲ್‌ಎಂಒ ಬದಲಿಗೆ ದೆಹಲಿಗೆ 730 ಮೆ.ಟನ್ ಸರಬರಾಜು ಮಾಡುವುದನ್ನು ಖಚಿತಪಡಿಸಿದೆ.
Youtube Video

ಭಾರತದಲ್ಲಿ ಇದೀಗ ಕೊರೋನಾ ಕೇಕೆ ದಿನದಿಂದ ಅಧಿಕವಾಗುತ್ತಲೇ ಇದೆ. ಇದೀಗ ದಿನವೊಂದಕ್ಕೆ ದಾಖಲೆಯ 4.15 ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ, ಸಾವಿನ ಸಂಖ್ಯೆಯೂ ಅಧಿಕವಾಗುತ್ತಲೇ ಇದೆ. ಹೀಗಾಗಿ ಅಧಿಕ ಪ್ರಮಾಣದ ಆಕ್ಸಿಜನ್ ಅನ್ನು ಸ್ಟೋರ್​ ಮಾಡಿ ಇಟ್ಟುಕೊಳ್ಳುವಂತೆಯೂ ಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ.
Published by: MAshok Kumar
First published: May 7, 2021, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories