ಲಾಕ್​ಡೌನ್​ನಲ್ಲೇ ಕುಟುಂಬದೊಂದಿಗೆ ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನ್​..!

ಸನ್ನಿ ಲಿಯೋನ್​ ಸಾಮಾಜಿಕ ಜಾಲತಾಣದಲ್ಲಿ ಸದಾ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಕೊಂಚ ಬ್ಯುಸಿಯಾಗಿ ಇಡುತ್ತಿದ್ದರು. ಲಾಕ್​ಡೌನ್​ ಆರಂಭವಾದಲೂ ಮುಂಬೈನಲ್ಲೇ ಎಂಜಾಯ್​ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಸನ್ನಿ ಲಾಕ್​ಡೌನ್​ ನಡುವೆಯೇ ಅಮೆರಿಕಕ್ಕೆ ಹಾರಿದ್ದಾರೆ.

ಕುಟುಂಬದೊಂದಿಗೆ ಸನ್ನಿ ಲಿಯೋನ್​

ಕುಟುಂಬದೊಂದಿಗೆ ಸನ್ನಿ ಲಿಯೋನ್​

  • Share this:
ಲಾಕ್​ಡೌನ್​ನಲ್ಲಿ ಭಾರತದಲ್ಲೇ ಇದ್ದು ತಮ್ಮ ಕ್ವಾರಂಟೈನ್​ ಅಪ್ಡೇಟ್​ ಕೊಡುತ್ತಿದ್ದ ಸನ್ನಿ ಲಿಯೋನ್​​ ಈಗ ಅಮೆರಿಕದಲ್ಲಿದ್ದಾರೆ. ಹೌದು, ಗಂಡ ಹಾಗೂ ಮಕ್ಕಳೊಂದಿಗೆ ಅಮೆರಿಕಕ್ಕೆ ಹಾರಿದ್ದಾರೆ ಮಾಜಿ ನೀಲಿ ತಾರೆ. 

ಸನ್ನಿ ಲಿಯೋನ್​ ಸಾಮಾಜಿಕ ಜಾಲತಾಣದಲ್ಲಿ ಸದಾ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಕೊಂಚ ಬ್ಯುಸಿಯಾಗಿ ಇಡುತ್ತಿದ್ದರು. ಲಾಕ್​ಡೌನ್​ ಆರಂಭವಾದಾಗಲೂ ಮುಂಬೈನಲ್ಲೇ ಎಂಜಾಯ್​ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಸನ್ನಿ ಲಾಕ್​ಡೌನ್​ ನಡುವೆಯೇ ಅಮೆರಿಕಕ್ಕೆ ಹಾರಿದ್ದಾರೆ.
ವಿಮಾನಯಾನ ಸ್ಥಗಿತಗೊಳಿಸಿದ್ದರು ಸನ್ನಿ ಲಿಯೋನ್​ ಮಾತ್ರ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ಹಾರಿದ್ದು ಹೇಗೆ ಅನ್ನೋ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೂ ಈಗ ಸನ್ನಿ ಗಂಡ ಡೇನಿಯಲ್​ ಉತ್ತರ ಕೊಟ್ಟಿದ್ದಾರೆ. ಸರ್ಕಾರ ವ್ಯವಸ್ಥೆ ಮಾಡಿದ್ದ ವಿಮಾನದಲ್ಲೇ ಅವರು ಅಮೆರಿಕ ಸೇರಿದ್ದಾರೆ ಹೇಳಿಕೊಂಡಿದ್ದಾರೆ.

Sunny leone flies to america with kids in lock down
ಕ್ಯಾಲಿಫೋರ್ನಿಯಾದಿಂದ ಡೇನಿಯಲ್ ಪೋಸ್ಟ್ ಮಾಡಿರುವ ಚಿತ್ರ


ಇನ್ನು ಸನ್ನಿ ಲಿಯೋನ್​ ಮಕ್ಕಳು ಎಲ್ಲಿ ಕೊರೋನಾದಿಂದ ಸುರಕ್ಷಿತವಾಗಿರುತ್ತಾರೋ ಅಲ್ಲಿಗೆ ಕರೆದುಕೊಂಡು ಹೋಗಿದ್ದೇವೆ. ನಮಗೆ ಮಕ್ಕಳ ಸುರಕ್ಷತೆ ಮುಖ್ಯ ಎಂದು ಸನ್ನಿ ಅಮ್ಮಂದಿರ ದಿನದಂದು ಮಾಡಿರುವ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ ಜೊತೆಗೆ ವಿದೇಶದಲ್ಲಿ ತೆಗೆದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

Sunny leone flies to america with kids in lock down
ಮಕ್ಕಳೊಂದಿಗೆ ಸನ್ನಿ ಲಿಯೋನ್​


ಸ್ಥಳ ಬದಲಾದ ನಂತರ ಕೊಂಚ ಆರಾಮಾಗಿದೆ ಎಂದು ಡೇನಿಯಲ್​ ಬರೆದುಕೊಂಡಿದ್ದು, ಇದು ಕ್ವಾರಂಟೈನ್​ ಪಾರ್ಟ್​ 2 ನಾಟ್​ ಬ್ಯಾಡ್​ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sonam Kapoor: ಯಾವ ಅರಮನೆಗೂ ಕಡಿಮೆ ಇಲ್ಲ ಸೋನಮ್​ ಕಪೂರ್​ ಗಂಡನ ಮನೆ..!

ಭಾರತಕ್ಕೆ ಹೋಲಿಸಿದರೆ ಅಮೆರಿಕ ಕೊರೋನಾದ ಹಾಟ್​ ಸ್ಪಾಟ್​ ಎನ್ನಬಹುದು. ಹೀಗಿರುವಾಗ ಸನ್ನಿ ಇಂತಹ ಸಮಯದಲ್ಲಿ ಭಾರತ ಬಿಟ್ಟು ಅಮೆರಿಕಕ್ಕೆ ಹಾರಿರುವುದು ಟೀಕೆಗೆ ಗುರಿಯಾಗಿದೆ.

Kareena Kapoor: ಹಳೇ ದಿನಗಳನ್ನು ನೆನಪಿಸಿಕೊಳ್ಳುತ್ತಿರುವ ಕರೀನಾ ಕಪೂರ್​..!
Published by:Anitha E
First published: