Sunday lockdown: ಭಾನುವಾರ ಸಂಪೂರ್ಣ ಲಾಕ್​ಡೌನ್​; ಏನಿರುತ್ತೆ, ಏನಿರಲ್ಲ?; ಇಲ್ಲಿದೆ ಸಂಪೂರ್ಣ ಮಾಹಿತಿ

Sunday Lockdown: 138 ಹೊಸಾ ಕೋವಿಡ್ ಸೋಂಕಿತರ ಪ್ರಕರಣಳು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ಇನ್ನು, ಭಾನುವಾರ ಸಂಪೂರ್ಣವಾಗಿ ಕರ್ಫ್ಯೂ​ ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಮೇ 23): ದೇಶದಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ ನಿಯಮ ಜಾರಿಯಲ್ಲಿದ್ದು ಕೆಲವೊಂದು ಚಟುವಟಿಕೆಗಳಿಗೆ ನಿರ್ಬಂಧವಿರುವುದು ಬಿಟ್ಟರೆ ಬಹುತೇಕ ಇತರೆ ಕಾರ್ಯಗಳು ಪ್ರಾರಂಭವಾಗಿವೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಅನುವು ಮಾಡಿ ಕೊಡಲಾಗಿದೆ. ಈ ನಡುವೆ ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ಬಳಿಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನ ಕಳೆದಂತೆ ಏರಿಕೆಯಾಗುತ್ತಲೇ ಇದೆ.

  ಸರಾಸರಿಯಾಗಿ ಪ್ರತಿದಿನ ನೂರಕ್ಕೂ ಹೆಚ್ಚು ಜನರಲ್ಲಿ ಮಾರಣಾಂತಿಕ ಸೋಂಕು ಕಂಡು ಬರುತ್ತಿದೆ. 138 ಹೊಸಾ ಕೋವಿಡ್ ಸೋಂಕಿತರ ಪ್ರಕರಣಳು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ಇನ್ನು, ಭಾನುವಾರ ಸಂಪೂರ್ಣವಾಗಿ ಕರ್ಫ್ಯೂ​ ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ.

  ಭಾರತದಲ್ಲಿ ಕೋವಿಡ್​​-19 ಪ್ರಕರಣ: ಹೀಗಿದೆ ರಾಜ್ಯವಾರು ದಾಖಲಾದ ಸೋಂಕಿತರ ವಿವರ

  ಹೀಗಾಗಿ, ಭಾನುವಾರ ಏನಿರುತ್ತೆ? ಏನು ಇರಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಏನು ಇರುತ್ತೆ ಏನು ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

  ಏನಿರುತ್ತೆ?

  • ಹಣ್ಣು ತರಕಾರಿ ,ಮೊಟ್ಟೆ ಮಾಂಸ,ದಿನಸಿ ಪದಾರ್ಥ ಅಂಗಡಿ

  • ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ

  • ಮಾಧ್ಯಮ

  • ಡಾಕ್ಟರ್ಸ್, ನರ್ಸ್​​, ಆಂಬುಲೆನ್ಸ್  ಓಡಾಟಕ್ಕೆ ಅವಕಾಶ

  • ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ

  • ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ


  ಏನಿರಲ್ಲ?

  • ಸಾರ್ವಜನಿಕರ ಸಂಚಾರ ನಿರ್ಬಂಧ

  • ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಗಟ್ಟು ಬಂದ್

  • ನಗರದ ಎಲ್ಲಾ ಪ್ರಮುಖ ರಸ್ತೆ ಕ್ಲೋಸ್

  • ಬಾರ್, ಸೆಲ್ಯೂನ್, ಪ್ಯಾನ್ಸಿ ಸ್ಟೋರ್ ಬಂದ್

  • ಎಲ್ಲಾ ಗಾರ್ಮೆಂಟ್ಸ್  ಪ್ಯಾಕ್ಟರಿ, ಎಲ್ಲಾ ಕಾರ್ಖಾನೆಗಳು, ಕಂಪನಿಗಳು ಕ್ಲೋಸ್

  • ಎಲ್ಲಾ ಪಾರ್ಕ್​ಗಳಿಗೂ ಬೀಗ. ಜಾಗಿಂಗ್,ವಾಕಿಂಗ್​ಗೆ ಇಲ್ಲ ಅವಕಾಸ

  • ಆಟೋ ಟ್ಯಾಕ್ಸಿ ,ಕ್ಯಾಬ್ ಸೇವೆ ಬಂದ್

  • ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ


  First published: