Sunday lockdown: ಸಂಡೇ ಲಾಕ್‌ಡೌನ್, ನಿಯಮ ಮೀರಿ ವಾಹನಗಳು ರಸ್ತೆಗೆ ಇಳಿದರೆ ಮುಲಾಜಿಲ್ಲದೆ ಕೇಸ್‌; ಭಾಸ್ಕರ್‌ ರಾವ್

ಕೊರೋನಾ ಸೋಂಕನ್ನು ಸಾಮೂದಾಯಿಕವಾಗಿ ಹರಡದಂತೆ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ವಾರದ ಆರು ದಿನ ಎಂದಿನಂತೆ ವಾಣಿಜ್ಯ ವಹಿವಾಟು ನಡೆದರೂ ಸಹ ಪ್ರತಿ ಶನಿವಾರ ರಾತ್ರಿ 08 ಗಂಟೆಯಿಂದ ಸೋಮವಾರ ಬೆಳಗ್ಗೆ 05 ಗಂಟೆಯವರೆಗೆ ಕಂಪ್ಲೀಟ್‌ ಕರ್ಫ್ಯೂ ಘೋಷಿಸಿದೆ. ಅಲ್ಲದೆ, ಭಾನುವಾರ ಸಾರ್ವಜನಿಕರು ಯಾರೂ ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಭಾಸ್ಕರ್ ರಾವ್.

ಭಾಸ್ಕರ್ ರಾವ್.

  • Share this:
ಬೆಂಗಳೂರು (ಜುಲೈ 11); ಇಂದು ರಾತ್ರಿ 8 ಗಂಟೆಯಿಂದ‌ ಸೋಮವಾರ ಬೆಳಗ್ಗೆ 05 ಗಂಟೆಯ ವರೆಗೆ ಕಂಪ್ಲೀಟ್‌ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಮೀರಿ ವಾಹನಗಳು ರಸ್ತೆಗೆ ಇಳಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಮುಲಾಜಿಲ್ಲದೆ ಕೇಸ್ ಹಾಕಿ ವಾಹನ ಸೀಜ್ ಮಾಡಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರದಾದ್ಯಂತ ಕೊರೋನಾ ವ್ಯಾಪಿಸದಂತೆ ತಡೆಯುವ ಸಲುವಾಗಿ ಮಾರ್ಚ್‌.25 ರಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಯುವುದು ಸಾಧ್ಯವಾಗಿರಲಿಲ್ಲ. ಈ ನಡುವೆ ವಾಣಿಜ್ಯ ವಹಿವಾಟು ಇಲ್ಲದೆ ದೇಶದ ಆರ್ಥಿಕತೆ ಹಳ್ಳ ಹಿಡಿದಿತ್ತು. ಇದೇ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದ ಹಂತಹಂತವಾಗಿ ಲಾಕ್‌ಡೌನ್‌ ಅನ್ನು ಸಡಿಲಿಸಲಾಗುತ್ತಿದೆ.

ಆದರೂ, ಕೊರೋನಾ ಸೋಂಕನ್ನು ಸಾಮೂದಾಯಿಕವಾಗಿ ಹರಡದಂತೆ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ವಾರದ ಆರು ದಿನ ಎಂದಿನಂತೆ ವಾಣಿಜ್ಯ ವಹಿವಾಟು ನಡೆದರೂ ಸಹ ಪ್ರತಿ ಶನಿವಾರ ರಾತ್ರಿ 08 ಗಂಟೆಯಿಂದ ಸೋಮವಾರ ಬೆಳಗ್ಗೆ 05 ಗಂಟೆಯವರೆಗೆ ಕಂಪ್ಲೀಟ್‌ ಕರ್ಫ್ಯೂ ಘೋಷಿಸಿದೆ. ಅಲ್ಲದೆ, ಭಾನುವಾರ ಸಾರ್ವಜನಿಕರು ಯಾರೂ ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಹೀಗಾಗಿ ಇಂದು ಈ ಕುರಿತು ಎಚ್ಚರಿಕೆ ನೀಡಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, " ಇಂದು ರಾತ್ರಿ 8 ಗಂಟೆಯಿಂದ‌ ಸೋಮವಾರ ಬೆಳಗ್ಗೆ 05 ಗಂಟೆಯ ವರೆಗೆ ಕಂಪ್ಲೀಟ್‌ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಮೀರಿ ವಾಹನಗಳು ರಸ್ತೆಗೆ ಇಳಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ.

ಮುಲಾಜಿಲ್ಲದೆ ಕೇಸ್ ಹಾಕಿ ವಾಹನ ಸೀಜ್ ಮಾಡಲಾಗುತ್ತದೆ. ಲಾಕ್‌ಡೌನ್‌ ಇದ್ದರೂ ಸಹ ಅಗತ್ಯ ವಸ್ತುಗಳು ಮತ್ತು ಅಗತ್ಯ ಸೌಲಭ್ಯಕ್ಕಾಗಿ ಮಾತ್ರ ಅವಕಾಶ ನೀಡಲಾಗುವುದು. ಇಂದು ರಾತ್ರಿ 8 ಗಂಟೆಗೆ ನಗರದ ಎಲ್ಲಾ ಮೇಲ್ಸೇತುವೆಗಳು ಬಂದ್ ಆಗಲಿವೆ. ಹೀಗಾಗಿ ಹಿಂದಿನ ಭಾನುವಾರದಂತೆಯೇ ನಾಳೆಯೂ ಸಹ ಸಾರ್ವಜನಿಕರು ಸಹಕರಿಸಬೇಕು" ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿರುವ ಹೆಲ್ತ್​ ಬುಲೆಟಿನ್​ ಪ್ರಕಾರ, 2313 ಕೊರೋನಾ ಹೊಸ ಪ್ರಕರಣಗಳು ದಾಖಲಾಗಿದ್ದರೆ, ಮಾರಕ ಸೋಂಕಿನಿಂದ 57 ಮಂದಿ ನಿನ್ನೆ ಒಂದೇ ದಿನ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 543ಕ್ಕೆ ಏರಿಕೆಯಾದಂತಾಗಿದೆ.

ಇದನ್ನೂ ಓದಿ : PM Cares: ಪಿಎಂ ಕೇರ್ಸ್‌ ಪರಾಮರ್ಶೆಗೆ ಜಿಜೆಪಿ ವಿರೋಧ; ಲೆಕ್ಕಪತ್ರ ಸಮಿತಿಯ ತನಿಖೆಗೆ ವಿರೋಧ ಪಕ್ಷಗಳು ಪಟ್ಟುರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ 1447 ಪ್ರಕರಣಗಳು ದಾಖಲಾಗಿದ್ದು, 29 ಸಾವಿನ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟಾರೆ 33,418 ಕೊರೋನಾ ಪ್ರಕರಣಗಳು ಈವರೆಗೆ ದಾಖಲಾಗಿದ್ದು, ಇವರಲ್ಲಿ 13,836 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 19,035 ಸಕ್ರಿಯ ಪ್ರಕರಣಗಳಿವೆ.
Published by:MAshok Kumar
First published: