• Home
  • »
  • News
  • »
  • coronavirus-latest-news
  • »
  • ಕೊರೋನಾ ಎಫೆಕ್ಟ್: ಸಮ್ಮರ್ ಕ್ಯಾಂಪ್ ಕ್ಯಾನ್ಸಲ್; ಅಜ್ಜ-ಅಜ್ಜಿ ಮನೆ​ಗೆ ಮಕ್ಕಳು ಶಿಫ್ಟ್

ಕೊರೋನಾ ಎಫೆಕ್ಟ್: ಸಮ್ಮರ್ ಕ್ಯಾಂಪ್ ಕ್ಯಾನ್ಸಲ್; ಅಜ್ಜ-ಅಜ್ಜಿ ಮನೆ​ಗೆ ಮಕ್ಕಳು ಶಿಫ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ರಜೆ ಸಿಕ್ಕರೂ ಪಾಲಕರ ಕೆಲಸದ ಒತ್ತಡದಿಂದ ಮಕ್ಕಳು ತಮ್ಮೂರಿಗೆ ಹೋಗುತ್ತಿರಲಿಲ್ಲ. ಹೋದರೂ ಒಂದು ವಾರಕ್ಕೆ ಸೀಮಿತವಾಗಿ ಅಲ್ಲಿ-ಇಲ್ಲಿ ಪ್ರವಾಸ ಮಾಡೋದೆ ಆಗುತ್ತಿತ್ತು.

  • Share this:

ಬೆಂಗಳೂರು (ಮೇ 18): ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ವಿಧಿಸಿದ ಲಾಕ್​ಡೌನ್​ನಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಆದರೆ, ಮಕ್ಕಳ ಪಾಲಿಗೆ ಅಜ್ಜ ಅಜ್ಜಿ ಪ್ರೀತಿ ಸಿಗುತ್ತಿದೆ. ಪ್ರತಿ ವರುಷ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಸಮ್ಮರ್ ಕ್ಯಾಂಪ್‌ ಹೆಸರಿನಲ್ಲಿ ಹಣ ಪೀಕುತ್ತಿದ್ದವರು ಈ ಬಾರಿ ಬೇಸರದಲ್ಲಿ ಕೂತಿದ್ದರೆ, ಮಕ್ಕಳು ಅಜ್ಜ ಅಜ್ಜಿ ಊರಿನಲ್ಲಿ ತಮ್ಮದೇ ಸಮ್ಮರ್ ಕ್ಯಾಂಪ್​ನಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.


ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ರಜೆ ಸಿಕ್ಕರೂ ಪಾಲಕರ ಕೆಲಸದ ಒತ್ತಡದಿಂದ ಮಕ್ಕಳು ತಮ್ಮೂರಿಗೆ ಹೋಗುತ್ತಿರಲಿಲ್ಲ. ಹೋದರೂ ಒಂದು ವಾರಕ್ಕೆ ಸೀಮಿತವಾಗಿ ಅಲ್ಲಿ-ಇಲ್ಲಿ ಪ್ರವಾಸ ಮಾಡೋದೆ ಆಗುತ್ತಿತ್ತು. ಬೇಸಿಗೆ ಬಂತಂದ್ರೆ ಸಾಕು ಇಡೀ ವರುಷ ಶಾಲೆಗೆ ಹೋಗಿರುತ್ತಿದ್ದ ಮಕ್ಕಳು ಸಮ್ಮರ್ ನಲ್ಲಿ ಸ್ಪೆಷೆಲ್ ಕೋಚಿಂಗ್‌, ಸ್ವಿಮ್ಮಿಂಗ್, ಸಿಂಗಿಂಗ್, ಡ್ಯಾನ್ಸ್ ಹೀಗೆ ಬೇಸಿಗೆ ಶಿಬಿರಗಳಲ್ಲಿ ಎರಡು ತಿಂಗಳು ಕಾಲ ಕಳೆದುಬಿಡುತ್ತಿದ್ದರು. ಇದಕ್ಕಾಗಿ ಬರೋಬ್ಬರಿ ಫೀಸು ಹಾಕಿ ಪೋಷಕರಿಂದ ಪೀಕುತ್ತಿದ್ದರು.


ಇದನ್ನೂ ಓದಿ: ಕರ್ನಾಟಕದಲ್ಲಿ ಜೂನ್ 18ಕ್ಕೆ ಪಿಯುಸಿ, ಜೂನ್ 25ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ


ಬೆಂಗಳೂರು ಮಹಾನಗರಿಯಲ್ಲಿ ಸಮ್ಮರ್​ ಕ್ಯಾಂಪ್​ ನಡೆಸುವವರು ಏನಿಲ್ಲವೆಂದರೂ 20 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಬೇಸಿಗೆ ಶಿಬಿರಗಳು ಇದೀಗ ಮುಂದಿನ‌ ವರುಷಕ್ಕೆ, ಇಲ್ಲವೇ ಬರುವ ಕ್ರಿಸ್ ಮಸ್ ರಜೆಗೆ ಈಗಿನಿಂದಲೇ ಪ್ಲಾನ್ ಆಗಿದೆ.


ಬೇಸಿಗೆ ಶಿಬಿರ ನಡೆಸುವುದು ಪಾರ್ಟ್ ಟೈಂ ಜಾಬ್ ಆಗಿತ್ತು. ಇದರಿಂದ ಆರ್ಥಿಕವಾಗಿ ಒಂದಷ್ಟು ಸಹಾಯವಾಗುತ್ತಿತ್ತು. ಶಿಬಿರಾರ್ಥಿಗಳಿಗೆ ತರಬೇತಿ ನೀಡುವವರಿಗೆ ಇದು ಸಾಕಷ್ಟು ಹೊಡೆತ ಕೊಟ್ಟಿದೆ. ಬರುವ ರಜೆ ದಿನಗಳಲ್ಲಿ ಕೊರೊನೋದಿಂದಾಗಿ ಅಂತರ ಕಾಯ್ದುಕೊಂಡು ಕ್ಯಾಂಪ್ ಮಾಡಲು ಮುಂದಾಗಿದ್ದೇವೆ ಎಂದು ಸಮ್ಮರ್ ಕ್ಯಾಂಪ್ ನಡೆಸುತ್ತಿದ್ದ ವಿದ್ಯಾರಣ್ಯಪುರದ ವಿನಯ್ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.


ಆದರೆ ಕೊರೊನೋ ಲಾಕ್ ಡೌನ್ ನಿಂದಾಗಿ ಮಕ್ಕಳು ತಮ್ಮ ಅಜ್ಜ ಅಜ್ಜಿ ಮನೆಯಲ್ಲಿ ಹಾಯಾಗಿ ಕಾಲ ಕಳೆದಿದ್ದಾರೆ‌. ಈ ವರುಷ ಸಮ್ಮರ್ ಕ್ಯಾಂಪ್ ತಲೆಬಿಸಿಯಿಲ್ಲದೆ ಅಜ್ಜ ಅಜ್ಜಿ ಊರಿನಲ್ಲಿ ಕೊರೊನೋ ಭಯದ ಮಧ್ಯೆಯೂ ಅಲ್ಲಿನ ತೋಟ, ಗದ್ದೆಗಳಲ್ಲಿ ಆಟವಾಡುತ್ತ ಕಾಲ ಕಳೆದಿದ್ದಾರೆ‌. ಪೋಷಕರ ಗುರುತಿಸಿದ ಆನ್‌ಲೈನ್‌ ಕ್ಲಾಸ್ ತುಸು ಕಿರಿಕಿರಿ ಮಧ್ಯೆ ಮಕ್ಕಳು ಅಜ್ಜ ಅಜ್ಜಿಯರ ಪ್ರೀತಿ, ಮಮಕಾರ, ರುಚಿರುಚಿಯಾದ ಅಡುಗೆ ತಿನಿಸು ತಿಂದು ಕಾಲ‌ ಕಳೆದಿದ್ದಾರೆ.ಪ್ರತಿ ವರುಷ ಹೆಚ್ಚು ಕಾಲ ನಮ್ಮೂರಿಗೆ ಹೋಗುತ್ತಿದ್ದಿಲ್ಲ. ಅಜ್ಜ ಅಜ್ಜಿ ಪ್ರೀತಿ, ಅಡುಗೆ ಸವಿರುಚಿ, ಆಟಪಾಠ ಮಕ್ಕಳಿಗೆ ಸಿಗುತ್ತಿದ್ದಿಲ್ಲ. ಆದರೆ ಈ ಬಾರಿ ಸಮ್ಮರ್ ಕ್ಯಾಂಪ್ ಬದಲಾಗಿ ಅಜ್ಜ ಅಜ್ಜಿ ಕ್ಯಾಂಪ್ ನಲ್ಲಿ ಮಕ್ಕಳು‌ ಕಾಲ ಕಳೆದಿದ್ದಾರೆ ಎಂದು ಖುಷಿಯಿಂದ ಹೇಳುತ್ತಾರೆ ಮಡಿವಾಳದಲ್ಲಿ ಖಾಸಗಿ ಐಟಿ ಉದ್ಯೋಗಿಯಾಗಿರುವ ಶಂಕರ್ ಹಾಗೂ ಗಾಯತ್ರಿ ದಂಪತಿ.

Published by:Rajesh Duggumane
First published: