HOME » NEWS » Coronavirus-latest-news » SUMALATHA URGES TO GOVERNMENT TO GIVE RELIEF PACKAGE TO POORS SESR

ಇಂತಹ ಸಮಯದಲ್ಲಿ ಬಡವರ ನೆರವಿಗೆ ಸರ್ಕಾರ ಬರಲೇಬೇಕು; ಸಂಸದೆ ಸುಮಲತಾ

ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೆ, ಇಂತಹ ಸಮಯದಲ್ಲಿ ಪ್ಯಾಕೇಜ್​ ನೀಡಲು ಸಾಧ್ಯವೇ ಇಲ್ಲ ಎನ್ನುವ ಧೋರಣೆ ಬೇಡ. ಎಷ್ಟಾಗುತ್ತದೆ ಅಷ್ಟು ಸರ್ಕಾರ ಸಹಾಯ ಮಾಡಬೇಕು

news18-kannada
Updated:May 11, 2021, 6:50 PM IST
ಇಂತಹ ಸಮಯದಲ್ಲಿ ಬಡವರ ನೆರವಿಗೆ ಸರ್ಕಾರ ಬರಲೇಬೇಕು; ಸಂಸದೆ ಸುಮಲತಾ
file photo
  • Share this:
ಬೆಂಗಳೂರು (ಮೇ. 11):  ಲಾಕ್​ಡೌನ್​ನಿಂದಾಗಿ ಬಡವರು ಸಾಕಷ್ಟ ಸಮಸ್ಯೆಗೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ಆಗಮಿಸಲೇ ಬೇಕು ಎಂದು ಸಂಸದೆ ಸುಮಲತಾ ಅಂಬರೀಷ್​ ಒತ್ತಾಯಿಸಿದ್ದಾರೆ. ಇಂದು ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್​​, ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ರೈತ ಪ್ರಾಧಾನ್ಯತೆ ಇರುವ ಜಿಲ್ಲೆಯಾಗಿದ್ದು, ಇಲ್ಲಿ ಆಹಾರ ಸಮಸ್ಯೆ ಇಲ್ಲ. ಮಂಡ್ಯ ನಗರ ಹೊರತುಪಡಿಸಿದ ಜಿಲ್ಲೆಗಳಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೆ, ಇಂತಹ ಸಮಯದಲ್ಲಿ ಪ್ಯಾಕೇಜ್​ ನೀಡಲು ಸಾಧ್ಯವೇ ಇಲ್ಲ ಎನ್ನುವ ಧೋರಣೆ ಬೇಡ. ಎಷ್ಟಾಗುತ್ತದೆ ಅಷ್ಟು ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಸಚಿವರ ಭೇಟಿ ಮಾಡಿ ಮಂಡ್ಯ ಜಿಲ್ಲೆ ಕೋವಿಡ್ ವಿಷಯವಾಗಿ ಚರ್ಚೆ ಮಾಡಿದ್ದೇವೆ. ಜಿಲ್ಲೆಗೆ ಆಕ್ಸಿಜನ್​ ಪೂರೈಕೆ ಕುರಿತು ಮನವಿ ಮಾಡಿದ್ದು, ಇನ್ನಷ್ಟು ಸೋಂಕಿರತರಿಗೆ ಬೆಡ್​ ಮತ್ತು ಆಕ್ಸಿಜನ್​ ಅಗತ್ಯ ಇದ್ದು, ಅವುಗಳ ಕುರಿತು ಕೇಳಿದ್ದೇವೆ. ಜೊತೆಗೆ ಜಿಲ್ಲೆಯಲ್ಲಿ ಆಕ್ಸಿಜನ್​ ಘಟಕ ನಿರ್ಮಾಣ ಕುರಿತು ಕೋರಲಾಗಿದೆ, ಈ ಕುರಿತು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ನಾಲ್ಕು ವಾರಗಳಲ್ಲಿ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಮಂಡ್ಯ ಮತ್ತು ಮಳವಳ್ಳಿಯಲ್ಲಿ ಆಕ್ಸಿಜನ್ ಜನರೇಟರ್ಡ್​ ಮಾಡುವ ಕುರಿತು ತಿಳಿಸಿದ್ದಾರೆ ಎಂದರು.

ಲಸಿಕೆ ಸಮಸ್ಯೆ ಸದ್ಯ ಇಡೀ ದೇಶದಲ್ಲೇ ಇದ್ದುಮ ಕ್ಷೇತ್ರದಲ್ಲಿ ಲಸಿಕೆ ಕೊರತೆ ಇದೆ. ಸದ್ಯಕ್ಕೆ ಎರಡನೇ ಡೋಸ್​​ನವರಿಗೆ ಮಾತ್ರ ನೀಡಲಾಗುತ್ತಿದ್ದು, ಲಸಿಕೆ ಬಂದ ಬಳಿಕ ಮೊದಲ ಡೋಸ್ ಕೂಡ ಕೊಡುತ್ತೇವೆ.

ಇದನ್ನು ಓದಿ: ಗೋವಾ ಮೆಡಿಕಲ್​ ಕಾಲೇಜಿನಲ್ಲಿ 26 ಸೋಂಕಿತರ ಸಾವು; ಹೈ ಕೋರ್ಟ್​ ತನಿಖೆಗೆ ಆಗ್ರಹ

ದೇಶದಲ್ಲಿಯೇ ರಾಜ್ಯದಲ್ಲಿ ಸೋಂಕಿನ ಪ್ರಕರಣ ಹೆಚ್ಚಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ಕುರಿತು ನಾನು ಪ್ರಧಾನಿ ಕಾರ್ಯಲಯಕ್ಕೆ ಕೇಂದ್ರ ಆರೋಗ್ಯ ಇಲಾಖೆಗೂ ಪತ್ರ ಸಹ ಬರೆದಿದ್ದೇನೆ. ಆದಷ್ಟು ಬೇಗ ಆಕ್ಸಿಜನ್​ ಪೂರೈಕೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದು, ಕರ್ನಾಟಕಕ್ಕೆ ಆದ್ಯತೆ ಮೇಲೆ ಕೊಡುವಂತೆ ಕೇಳಿದ್ದೇನೆ ಎಂದರು.

ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಮೀರಲು ಜನರು ಸ್ವಲ್ಪ ಮೆರೆತಿತ್ತು ಕಾರಣವಾಗಿದೆ. ಮೊದಲ ಅಲೆಯಲ್ಲೇ ಲಾಕ್​ಡೌನ್ ಚೆನ್ನಾಗಿ ಆಗಿತ್ತು. ಆದರೆ ಈ ಬಾರಿ ಜನ ಕೊಂಚ ನಿರ್ಲಕ್ಷ್ಯವಹಿಸಿದರು. ಇದರಿಂದ ಸೋಂಕು ನಿಯಂತ್ರಣ ಕಷ್ಟವಾಗಿದೆ. ಈ ಬಗ್ಗೆ ಜನರು ಕೂಡ ಜವಾಬ್ದಾರಿ ಅರಿತು ಮನೆಯಲ್ಲಿಯೇ ಇದ್ದು, ಸುರಕ್ಷತೆ ಕಾಯ್ದುಕೊಳ್ಳಬೇಕು. ಸರ್ಕಾರ ಕೂಡ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ ಎಂದರು
Published by: Seema R
First published: May 11, 2021, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories