Coronavirus: ಕಳೆದ ಒಂದೂವರೆ ವರ್ಷದಿಂದ ಇಡೀ ಜಗತ್ತನ್ನೇ ಬೆಂಬಿಡದೇ ಕಾಡುತ್ತಿರುವ ಕೋವಿಡ್ -19ವೈರಸ್ ಮುಂಬರುವ ವರ್ಷಗಳಲ್ಲಿ ಇತರ ಸಾಮಾನ್ಯ ಶೀತ ವೈರಸ್‌ನಂತೆ ವರ್ತಿಸಬಹುದು ಮತ್ತು ಇದು ಕೇವಲ ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಗುರುವಾರ ಪ್ರಕಟವಾದ ಅಧ್ಯಯನವು ತಿಳಿಸಿದೆ.ಮುಂಬರುವ ವರ್ಷಗಳಲ್ಲಿ ಲಸಿಕೆ ಹಾಕಿಸಿಕೊಳ್ಳದೆ ಇರುವಂತಹ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವ ಮಕ್ಕಳ ಮೇಲೆ ಕೋವಿಡ್-19 ವೈರಸ್ ಪರಿಣಾಮ ಬೀರಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ.ಯುಎಸ್ ಮತ್ತು ನಾರ್ವೇ ತಂಡವು ಗಮನಿಸಿದ ಹಾಗೆ ಕೋವಿಡ್-19ವೈರಸ್ ತೀವ್ರತೆಯು ಸದ್ಯಕ್ಕೆ ಸಾಮಾನ್ಯವಾಗಿ ಮಕ್ಕಳಲ್ಲಿ ಕಡಿಮೆ ಇರುವುದರಿಂದ,ವಿಶ್ವದ ಜನಸಂಖ್ಯೆಯಲ್ಲಿ ಸಾರ್ಸ್-ಕೋವಿಡ್-2ವೈರಸ್ ಹೆಚ್ಚಾಗಿರುವುದರಿಂದ ರೋಗದ ಒಟ್ಟಾರೆ ತೀವ್ರತೆಯೂ ವಯಸ್ಕರಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ.
"ಸಾರ್ಸ್-ಕೋವಿಡ್-2ಸೋಂಕಿನ ಹೆಚ್ಚುತ್ತಿರುವ ಪ್ರಕರಣಗಳು ರೋಗಿಯ ವಯಸ್ಸಿನೊಂದಿಗೆ ತೀವ್ರತೆಯನ್ನು ಕಾಣಬಹುದಾಗಿದೆ" ಎಂದು ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದ ಒಟ್ಟಾರ್ ಜಾರ್ನ್‌ಸ್ಟಡ್ ಹೇಳಿದರು.
"ನಮ್ಮ ಅಧ್ಯಯನದ ಫಲಿತಾಂಶಗಳು ವಯಸ್ಕ ಸಮುದಾಯವು ಈಗಾಗಲೇ ಲಸಿಕೆಯನ್ನು ಪಡೆದದ್ದು ಮತ್ತು ವೈರಸ್‌ಗೆ ಸೆಡ್ಡು ಹೊಡೆಯುವಂತಹ ರೋಗ ನಿರೋಧಕ ಶಕ್ತಿ ಹೊಂದಿರುವುದರಿಂದ ಸೋಂಕಿನ ಅಪಾಯವು ಕಡಿಮೆ ಇದ್ದು,ಚಿಕ್ಕ ಮಕ್ಕಳಿಗೆ ಇದರ ಅಪಾಯವೂ ಮುಂಬರುವ ವರ್ಷಗಳಲ್ಲಿ ಇರುತ್ತದೆ” ಎಂದು ಹೇಳಿದರು.
‘ಸೈನ್ಸ್ ಅಡ್ವಾನ್ಸಸ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನವು ಇಂತಹ ಒಂದು ಬದಲಾವಣೆಗಳನ್ನು ಇತರೆ ಕೊರೊನಾ ವೈರಸ್‌ಗಳು ಮತ್ತು ಇನ್ನಿತರೆ ವೈರಸ್‌ಗಳಲ್ಲಿ ಕಾಣಿಸಿಕೊಂಡಿದ್ದು,ನಂತರ ಅವು ಸ್ಥಳೀಯವಾಗಿ ಹರಡಲು ಪ್ರಾರಂಭಿಸುತ್ತದೆ ಎಂದು ಗಮನಿಸಲಾಗಿದೆ.
"ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಇತಿಹಾಸವನ್ನು ನೋಡಿದರೆ ಹೇಗೆ ಈ ಸಾಂಕ್ರಾಮಿಕ ರೋಗಗಳು ತಮ್ಮ ತೀವ್ರತೆಯನ್ನು ಅನೇಕ ವರ್ಷಗಳ ನಂತರ ಕಡಿಮೆ ಮಾಡಿಕೊಂಡಿದ್ದು ಮತ್ತು ಸ್ಥಳೀಯವಾಗಿ ಹರಡಲು ಆರಂಭಿಸಿ ಹೇಗೆ ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸುತ್ತದೆ" ಎಂದು ಜಾರ್ನ್‌ಸ್ಟಡ್ ಹೇಳಿದರು.
"1889-1890ರಲ್ಲಿ ಇಡೀ ಜಗತ್ತನ್ನು ಕಾಡಿದಂತಹ ಏಷ್ಯಾದ ಅಥವಾ ರಷ್ಯಾದ ಫ್ಲೂ ಎಂದು ಕರೆಯಲಾದ ಒಂದು ಸಾಂಕ್ರಾಮಿಕ ರೋಗವು ಒಂದು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿತ್ತು. ಮೊದಲಿಗೆ70ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರು ಇದಕ್ಕೆ ಬಲಿಯಾದರು. ಆದರೆ ಇದು ಈಗ ಒಂದು ಸಾಮಾನ್ಯ ಸೋಂಕಿನ ವೈರಸ್ ಆಗಿದ್ದು, ಈಗ ಹೆಚ್ಚಾಗಿ7ರಿಂದ12ತಿಂಗಳ ವಯಸ್ಸಿನ ಮಕ್ಕಳಲ್ಲಿ ಕಂಡು ಬರುತ್ತದೆ. ಇದನ್ನು ಉದಾಹರಣೆಯಾಗಿ ಇಟ್ಟುಕೊಂಡು ಕೋವಿಡ್ ಸಹ ಮುಂಬರುವ ವರ್ಷಗಳಲ್ಲಿ ಕೇವಲ ಮಕ್ಕಳಿಗೆ ಮಾತ್ರ ಪರಿಣಾಮ ಬೀರಬಹುದು”,ಎಂದು ಹೇಳಿದರು.
ವಯಸ್ಕರಲ್ಲಿ ಸಾರ್ಸ್-ಕೋವಿಡ್-2ಸೋಂಕು ಮತ್ತೆ ತಗುಲಿದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದರೆ,ಆ ಗುಂಪಿನವರಲ್ಲಿ ರೋಗದ ತೀವ್ರತೆಯೂ ಅಧಿಕವಾಗಿ ಉಳಿಯಬಹುದು ಎಂದು ಜಾರ್ನ್‌ಸ್ಟಡ್ ಎಚ್ಚರಿಸಿದ್ದಾರೆ.
"ಕೋವಿಡ್-19ವೈರಸ್ ಕುರಿತಾದ ಸಂಶೋಧನೆಯು ತಿಳಿಸಿರುವ ಪ್ರಕಾರ ಲಸಿಕೆಯನ್ನು ಹಾಕಿಸಿಕೊಂಡರೆ ವೈರಸ್ ನಿಂದ ಬಲವಾದ ರಕ್ಷಣೆಯನ್ನು ಪಡೆಯಬಹುದಾಗಿದೆ ಎಂಬುದನ್ನು ತೋರಿಸಿದೆ,ಆದ್ದರಿಂದ ನಾವು ಎಲ್ಲರಿಗೂ ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿ ಕೊಳ್ಳುವಂತೆ ಪ್ರೋತ್ಸಾಹಿಸುತ್ತೇವೆ" ಎಂದು ಅವರು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ