HOME » NEWS » Coronavirus-latest-news » STUDY IN LONDON PROVES DOGS SNIFF CORONA POSITIVE CASES FASTER THAN RTPCR TEST MAY BE USED IN COVID DETECTION SKTV

Corona Testing: ನಾಯಿಗಳು ಆರ್ಟಿಪಿಸಿಆರ್ ಟೆಸ್ಟ್​​ಗಿಂತಲೂ ವೇಗವಾಗಿ ಕೋವಿಡ್ ಸೋಂಕನ್ನು ಪತ್ತೆ ಮಾಡಬಲ್ಲವು !

ಹೊಸಾ ಸಂಶೋಧನೆಯೊಂದು ಈ ಅದ್ಭುತ ವಿಚಾರವನ್ನು ಬಹಿರಂಗಪಡಿಸಿದೆ. 6 ನಾಯಿಗಳನ್ನು ಬಳಸಿಕೊಂಡು ಈ ಸಂಶೋಧನೆ ಮಾಡಲಾಗಿದ್ದು ನಾಯಿಗಳು ಕೆಲವೇ ಸೆಕೆಂಡುಗಳಲ್ಲಿ ವ್ಯಕ್ತಿಯಲ್ಲಿ ಸೋಂಕು ಇದೆಯೋ ಇಲ್ಲವೂ ಎಂದು ಪತ್ತೆ ಹಚ್ಚಬಲ್ಲವು ಎನ್ನುವುದು ನಿರೂಪಿಸಲಾಗಿದೆ. 

news18-kannada
Updated:May 25, 2021, 3:40 PM IST
Corona Testing: ನಾಯಿಗಳು ಆರ್ಟಿಪಿಸಿಆರ್ ಟೆಸ್ಟ್​​ಗಿಂತಲೂ ವೇಗವಾಗಿ ಕೋವಿಡ್ ಸೋಂಕನ್ನು ಪತ್ತೆ ಮಾಡಬಲ್ಲವು !
ತರಬೇತಿ ಪಡೆದ ನಾಯಿ
  • Share this:
ಲಂಡನ್: ಏರ್ಪೋರ್ಟ್​ಗಳಲ್ಲಿ ತಪಾಸಣೆಗೆ ಇನ್ಮುಂದೆ ಹೆಚ್ಚು ನಾಯಿಗಳನ್ನು ಕಂಡರೆ ಅಚ್ಚರಿ ಪಡಬೇಡಿ. ಯಾಕೆಂದರೆ ಕೋವಿಡ್ ಸೋಂಕನ್ನು ಪತ್ತೆ ಹಚ್ಚುವಲ್ಲಿ ನಾಯಿಗಳ ಬಳಕೆ ಹೆಚ್ಚುವ ಸಾಧ್ಯತೆ ಇದೆ. ಲಂಡನ್ನಿನಲ್ಲಿ ನಡೆದ ಸಂಶೋಧನೆಯೊಂದರಲ್ಲಿ ವೈದ್ಯಕೀಯ ವಿಚಾರಕ್ಕೆ ತರಬೇತಿ ಪಡೆದ 6 ನಾಯಿಗಳು ಈ ಸಂಶೋಧನೆಯಲ್ಲಿ ಭಾಗವಹಿಸಿವೆ. ಕೋವಿಡ್ ಸೊಂಕಿತರು ಬಳಸಿದ ಮಾಸ್ಕ್, ಸಾಕ್ಸ್ ಮುಂತಾದ ಕೆಲ ವಸ್ತುಗಳ ಸ್ಯಾಂಪಲ್​ಗಳನ್ನು ಇಟ್ಟಾಗ ಈ ನಾಯಿಗಳು ಕರಾರುವಾಕ್ಕಾಗಿ ಸೋಂಕಿತರ ವಸ್ತುಗಳನ್ನು ಬೇರೆ ವಸ್ತುಗಳ ನಡುವೆ ಗುರುತಿಸಿವೆ. ಲ್ಯಾಬ್ರಡಾರ್, ರಿಟ್ರೀವರ್ ಮತ್ತು ಸ್ಪೇನಿಯಲ್ ಗುಂಪಿಗೆ ಸೇರಿದ ನಾಯಿಗಳನ್ನು ಈ ಸಂಶೋಧನೆಯಲ್ಲಿ ಬಳಸಲಾಗಿದೆ.

ನಾಯಿಗಳು ಖಾಯಿಲೆ ಗುರುತಿಸುವುದು ಇದೇ ಮೊದಲೇನಲ್ಲ. ವಿಶ್ವದ ನಾನಾ ಮೂಲೆಗಳಲ್ಲಿ ಮನೆಗಳಲ್ಲಿ ಸಾಕಿದ ನಾಯಿಗಳೇ ಅನೇಕ ಬಾರಿ ಮನೆಯ ಸದಸ್ಯರ ಅನಾರೋಗ್ಯದ ಸುಳಿವು ನೀಡಿ ಅನೇಕ ಜೀವಗಳನ್ನು ಉಳಿಸಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈಗ ಕೋವಿಡ್ ಪರೀಕ್ಷೆಯ ಅತಿ ದೊಡ್ಡ ಸವಾಲನ್ನು ಸುಲಭವಾಗಿ ನಿವಾರಿಸಲು ನಾಯಿಗಳನ್ನು ಬಳಸುವ ಸಮಯ ಬಂದಂತಿದೆ.

ಇದನ್ನೂ ಓದಿ: Corona Vaccine: ಇಂಜೆಕ್ಷನ್ ಭಯಕ್ಕೆ ಲಸಿಕೆಯಿಂದ ದೂರ ಇದ್ದೀರಾ? ಕೋವಿಡ್ ವ್ಯಾಕ್ಸಿನ್ ಇನ್ಮುಂದೆ ಡ್ರಾಪ್ಸ್ ರೀತಿಯಲ್ಲಿ ಇರಲಿದೆ !

ನಾಯಿಗಳ ಮೂಗಿನ ತುದಿಯಲ್ಲಿ ತೇವಾಂಶದಂಥಾ ವಸ್ತುವಿರುತ್ತದೆ. ಇದು ಗಾಳಿಯಲ್ಲಿರುವ ವಾಸನೆಯ ಕಣಗಳನ್ನು ಕರಗಿಸಿ ಅವುಗಳ ಮೂಗಿನ ಮೇಲ್ಪದರಕ್ಕೆ ಸಂದೇಶ ಕಳಿಸುತ್ತವೆ. ಮನುಷ್ಯರಲ್ಲಿ 5 ಮಿಲಿಯನ್ ಗಳಷ್ಟು ವಾಸನೆಯ ರಿಸೆಪ್ಟರ್​ಗಳಿದ್ದರೆ ನಾಯಿಗಳಲ್ಲಿ ಬರೋಬ್ಬರಿ 300 ಮಿಲಿಯನ್​ನಷ್ಟು ರಿಸೆಪ್ಟರ್​​ಗಳಿರುತ್ತವೆ.

ಲಂಡನ್ ಸ್ಕೂಲ್ ಆಫ್ ಹೈಜಿನ್ & ಟ್ರಾಪಿಕಲ್ ಮೆಡಿಸಿನ್ ಈ ಸಂಶೋಧನೆಯನ್ನು ಮಾಡಿದೆ. ನಾಯಿಗಳು ಸೋಂಕನ್ನು ಗುರುತಿಸುವಲ್ಲಿ ಶೇಕಡಾ 94.3ಯಷ್ಟು ಯಶಸ್ಸು ಕಂಡಿವೆ. 100ರಲ್ಲಿ 94 ಜನರನ್ನು ಅವು ಕರಾರುವಾಕ್ಕಾಗಿ ಗುರುತಿಸಿವೆ, ಅಲ್ಲದೇ ಇದು ಕ್ಷಣಮಾತ್ರದಲ್ಲಿ ನಡೆಯುತ್ತದೆ. ಆರ್ಟಿಪಿಸಿಆರ್ ಪರೀಕ್ಷೆಗಳಂತೆ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ಕಾಯಬೇಕಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಯಾವುದೇ ರೋಗಲಕ್ಷಣ ಇರದ ಅಥವಾ ಮೈಲ್ಡ್ ಸಿಂಪ್ಟಮ್ಸ್ ಇರುವ ಸೋಂಕಿರನ್ನೂ ಇವು ಗುರುತಿಸಿವೆ.
Youtube Video

ಒಂದು ನಾಯಿಯನ್ನು ಕೋವಿಡ್ ಗುರುತಿಸುವಿಕೆಗೆ ತರಬೇತಿ ನೀಡಲು 8 ರಿಂದ 10 ವಾರಗಳು ಬೇಕಾಗುತ್ತದೆ. ಹಾಗಂತ ಆರ್ಟಿಪಿಸಿಆರ್​​ ಟೆ್ಸ್ಟ್​ಗೆ ಬದಲಾಗಿ ನಾಯಿಗಳ ಬಳಕೆ ಕೂಡಲೇ ಆಗುವುದಿಲ್ಲ. ಹೆಚ್ಚು ಪ್ರಯಾಣಿಕರಿರುವ ಏರ್ಪೊರ್ಟ್​ಗಳಲ್ಲಿ ಅಥವಾ ಕ್ವಾರಂಟೈನ್ ಮುಗಿಸಿ ಪರೀಕ್ಷೆಯ ರಿಸಲ್ಟ್​ಗೆ ಕಾಯುತ್ತಿರುವವರಿಗೆ ಇವುಗಳಿಂದ ಸಹಾಯವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈಗಾಗಲೇ ಫಿನ್​ಲ್ಯಾಂಡ್, ಫ್ರಾನ್ಸ್ ಮತ್ತು ಲೆಬನಾನ್ ದೇಶಗಳಲ್ಲಿ ಈ ಪ್ರಯೋಗವನ್ನು ಮಾಡಲಾಗುತ್ತಿದೆ.
Published by: Soumya KN
First published: May 25, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories