Coronavirus: ಕೊರೊನಾ ಸೋಂಕಿಗೆ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಸಿಬಿಎಸ್​ಇ ಶುಲ್ಕ ವಿನಾಯಿತಿ..

CBSE Board: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡಿರುವ ಅನಾಥ ವಿದ್ಯಾರ್ಥಿಗಳು ಇ ಭಾರಿಯ ಶಾಲೆಯ ಶುಲ್ಕವನ್ನು ಕಟ್ಟುವುದು ಬೇಡ ಎಂದು ಸಿಬಿಎಸ್​ಇ ಮಂಡಳಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಸೋಂಕಿನ ಕಾರಣದಿಂದ ತಮ್ಮ ಪೋಷಕರು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪರೀಕ್ಷಾ ಶುಲ್ಕದಿಂದ ವಿನಾಯಿತಿ  ನೀಡಲಾಗಿದ್ದು, ಅವರು ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ ಎಂದು ಮಂಡಳಿ ತಿಳಿಸಿದೆ. ಮುಂಬರುವ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಶುಲ್ಕ ಸಂಗ್ರಹಿಸುವ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪ್ರಸ್ತುತ ದೇಶಾದ್ಯಂತ ಸಿಬಿಎಸ್‌ಇ ಅಂಗೀಕೃತ ಶಾಲೆಗಳಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಯನ್ನು ಪಟ್ಟಿಯಲ್ಲಿ ಸೇರಿಸಬೇಕಾದರೆ, ಅವರು ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಈ ಪ್ರಕ್ರಿಯೆಯು ಸೆಪ್ಟೆಂಬರ್ 17 ರಂದು ಆರಂಭವಾಗಿದ್ದು,ಸೆಪ್ಟೆಂಬರ್ 30 ರೊಳಗೆ ಪೂರ್ಣಗೊಳ್ಳಬೇಕಿದೆ.

ಶಾಲೆಯ ಐದು  ಸಬ್ಜೆಕ್ಟ್​ ಗಳಿಗೆ ಮೂಲ ಶುಲ್ಕ 10 ಮತ್ತು 12 ನೇ ತರಗತಿಗಳಿಗೆ ರೂ 1500 ಮತ್ತು ದೆಹಲಿ ಸರ್ಕಾರಿ ಶಾಲೆಗಳ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ರೂ 1,200. ಪ್ರತಿ ಪ್ರಾಯೋಗಿಕ ಮತ್ತು ಹೆಚ್ಚುವರಿ ಅಥವಾ  ಆಯ್ಕೆ  ಮಾಡಿಕೊಳ್ಳುವ ವಿಷಯಕ್ಕೆ ಹೆಚ್ಚುವರಿ ಮೊತ್ತದೊಂದಿಗೆ, ಶುಲ್ಕವು 12 ವಿದ್ಯಾರ್ಥಿಗಳಿಗೆ ಸುಮಾರು 2,500 ರೂ ಆಗುತ್ತದೆ.

ಇನ್ನು ದೆಹಲಿಯಲ್ಲಿ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 25 ವರ್ಷದವರೆಗೂ ಮಾಸಿಕ 2,500 ರೂ. ಮಾಶಾಸನ ನೀಡುವುದಾಗಿ ಸಿಎಂ ಅರವಿಂದ್  ಕೇಜ್ರಿವಾಲ್  ಹೇಳಿದ್ದರು, . ಅಲ್ಲದೆ ಉಚಿತ ಶಿಕ್ಷಣ ಹಾಗೂ ಉಚಿತವಾಗಿ ಹತ್ತು ಕೆ.ಜಿ. ಪಡಿತರ ವಿತರಣೆ ಮಾಡುವುದಾಗಿ  ಸಹ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅಧಿಕೃತ ಲಸಿಕೆ ಪಡೆದವರು ಮಾತ್ರ ಅಮೆರಿಕಗೆ ಹೋಗಬಹುದು; ಭಾರತದಲ್ಲಿ ಯಾವ ವ್ಯಾಕ್ಸಿನ್ ಅನುಮೋದನೆ ಪಡೆದಿದೆ?

ಕೊರೊನಾ ಕಾರಣದಿಂದ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಸಹ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ, ಅವರ ಬದುಕಿಗೆ ಆಸರೆಯಾಗಿದ್ದ ತಂದೆ ತಾಯಿ ಇಲ್ಲದೆ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಮಧ್ಯಮ ವರ್ಗದ, ಬಡವರ ಮಕ್ಕಳು ಅನಾಥವಾಗಿದ್ದಾರೆ. ಕೆಲ ಮಾಹಿತಿ ಪ್ರಕಾರ ಅನೇಕ ಮಕ್ಕಳು ಸಂಬಂಧಿಕರ ಪೋಷಣೆಯಲ್ಲಿದ್ದಾರೆ. ಯಾರು ಇಲ್ಲದವರಿಗೆ ಸರ್ಕಾರ ಸಹಾಯ ಮಾಡಲು ನಿರ್ಧರಿಸಿದೆ.

ರಾಜ್ಯದಲ್ಲಿ ಸಹ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ರಕ್ಷಣೆಗೆ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ಜಿಲ್ಲೆಯಲ್ಲೂ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ದತ್ತು ಕೋವಿಡ್ ಕೇರ್ ಸ್ಥಾಪನೆ ಮಾಡಲಾಗಿದೆ. ಅನಾಥ ಮಕ್ಕಳನ್ನು ದತ್ತು ನಿಯಮಾವಳಿ ಪ್ರಕಾರ ದತ್ತು ನೀಡಲು ಸಹ ಅನುಮತಿ ನೀಡಲಾಗಿದೆ.. ಅಲ್ಲಿಯವರೆಗೂ ಮಕ್ಕಳ ಆರೈಕೆ, ಪೋಷಣೆ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.

ಕೊರೊನಾ ಜನರ ಬದುಕನ್ನು ಬದಲಾಯಿಸಿದೆ. ಹಲವಾರು ಜನರು ಬೀದಿಗೆ ಬಂದಿದ್ದಾರೆ,  ತಮ್ಮವರನ್ನು ಕಳೆದುಕೊಂಡವರ ನೋವು ನಿಜಕ್ಕೂ ಹೇಳಲು ಅಸಾಧ್ಯವಾದದ್ದು. ನವಜಾತ ಶಿಶುವಿನಿಂದ ಹಿಡಿದು ವಯಸ್ಕರವರೆಗೆ ಹೆಚ್ಚಿನ ಜನರು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: