Seema.RSeema.R
|
news18-kannada Updated:February 4, 2020, 11:24 AM IST
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್.
ನವದೆಹಲಿ (ಫೆ.04): ಜಗತ್ತಿನೆಲ್ಲೆಡೆ ಭೀತಿ ಮೂಡಿಸಿರುವ ಕೊರೊನಾ ವೈರಸ್ಗೆ ಚೀನಾದಲ್ಲಿ ಈಗಾಗಲೇ 425 ಜನ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಡೆಡ್ಲಿ ವೈರಸ್ಗೆ ಹೆದರಿ ಈಗಾಗಲೇ ಇಲ್ಲಿ ನೆಲೆಸಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ತವರಿಗೆ ಹಿಂತಿರುಗುತ್ತಿದ್ದಾರೆ. ಭಾರತ ಕೂಡ ಇಲ್ಲಿ ನೆಲೆಸಿರುವ ಭಾರತೀಯರಿಗೆ ಸಹಾಯಹಸ್ತ ಚಾಚಿದ್ದು, ದೇಶಕ್ಕೆ ವಾಪಸ್ಸು ಕರೆಸಿಕೊಂಡಿದೆ. ಇನ್ನ ನೆರೆಯ ಪಾಕಿಸ್ತಾನ ವಿದ್ಯಾರ್ಥಿಗಳು ವುಹಾನ್ ಪ್ರಾಂತ್ಯದಲ್ಲಿ ಹರಡಿರುವ ವೈರಸ್ಗೆ ಹೆದರಿ ತಮ್ಮ ದೇಶಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ, ಆದರೆ, ಪಾಕ್ ಮಾತ್ರ ತಮ್ಮ ದೇಶದ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.
ಈ ಕುರಿತು ಮಾತನಾಡಿರುವ ಪಾಕಿಸ್ತಾನದ ಚೀನಾ ರಾಯಭಾರಿ, ವುಹಾನ್ನಲ್ಲಿರುವ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ. ಪಾಕಿಸ್ತಾನದಲ್ಲಿ ಈ
ವೈರಸ್ಗೆ ಚಿಕಿತ್ಸೆ ನೀಡುವಷ್ಟು ವೈದ್ಯಕೀಯ ವ್ಯವಸ್ಥೆ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಪಾಕ್ಗೆ ಮರಳುವುದು ಬೇಡ ಎಂದಿದ್ದಾರೆ. ಇದರಿಂದಾಗಿ ಪಾಕ್ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಜಿಯೋ ನ್ಯೂಸ್ನೊಂದಿಗೆ ಮಾತನಾಡಿದ ನಗ್ಮಾನ ಹಶ್ಮಿ, ಚೀನಾದಲ್ಲಿ ವೈದ್ಯಕೀಯ ವ್ಯವಸ್ಥೆ ಕೊರತೆ ಇದೆ. ಈ
ಸೋಂಕನ್ನು ಎದುರಿಸುವ ವೈದ್ಯಕೀಯ ವ್ಯವಸ್ಥೆ ಚೀನಾದಲ್ಲಿಯೇ ಉತ್ತಮವಾಗಿದೆ ಎಂದಿದ್ದಾರೆ.
ವುಹಾನ್ನಲ್ಲಿರುವ ವಿದ್ಯಾರ್ಥಿಗಳು ಆಹಾರ ಕೊರತೆ ಮತ್ತಿತ್ತರ ವಿಷಯದ ಬಗ್ಗೆ ಚಿಂತಿತರಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ಅರಿವಿದ್ದು, ಅವುಗಳನ್ನು ಪೂರ್ಣಗೊಳಿಸಲು ಚೀನಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.
ಇದನ್ನು ಓದಿ: Coronavirus: ಕೊರೊನಾ ವೈರಸ್ ಭೀತಿ: ಕೇರಳದಲ್ಲಿ ಮೂರನೇ ಪ್ರಕರಣ ಪತ್ತೆ
ಇನ್ನು ಚೀನಾದಲ್ಲಿರುವ ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರನ್ನು ಮರಳಿ ತರುವಂತೆ ಪಾಕ್ ನಾಗರೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಾದ ಬಳಿಕ ಈ ಪ್ರಕಟಣೆಯನ್ನು ಇಸ್ಲಾಮಾಬಾದ್ ಅಧಿಕಾರಿಗಳು ಪ್ರಕಟಿಸಿದ್ದಾರೆ.
First published:
February 4, 2020, 11:24 AM IST