ವಿದ್ಯಾಗಮ ಯೋಜನೆ; ಕಾರವಾರದಲ್ಲಿ ಮನೆಗೆ ಬಂದು ಮಕ್ಕಳಿಗೆ ಶಿಕ್ಷಕರು ಪಾಠ; ಪೋಷಕರು ಪುಲ್ ಖುಷ್

ಮಕ್ಕಳನ್ನು ಮತ್ತೆ ವಿದ್ಯಾಭ್ಯಾಸದ ಕಡೆಗೆ ಸೆಳೆದು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು "ವಿದ್ಯಾಗಮ" ಎಂಬ ಕಾರ್ಯಕ್ರಮ ಸಾರದವಜನಿಕ‌ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗ್ರಾಮೀಣ ಭಾಗದಲ್ಲಿ ಆರಂಭವಾಗಿದ್ದು, ಇಲ್ಲಿನ ಮಕ್ಕಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಮನೆಯಲ್ಲೇ ಮಕ್ಕಳಿಗೆ ಪಾಠ

ಮನೆಯಲ್ಲೇ ಮಕ್ಕಳಿಗೆ ಪಾಠ

  • Share this:
ಕಾರವಾರ(ಆ.25): ಮಹಾಮಾರಿ ಕೊರೋನಾದಿಂದಾಗಿ ಶಾಲೆಗಳು ಬಂದಾಗಿ ಐದಾರು ತಿಂಗಳುಗಳೆ ಕಳೆದಿದೆ. ನಿತ್ಯ ಶಾಲೆಗೆ ತೆರಳಿ ಪಾಠ ಕೇಳಿಬೇಕಿದ್ದ ಮಕ್ಕಳು ಮನೆಯಲ್ಲಿಯೇ ಆಟ ಆಡಿಕೊಂಡು ಕಾಲಾಹರಣ ಮಾಡುತ್ತಿದ್ದು, ಇದು ಪಾಲಕರ ಆತಂಕಕ್ಕೆ ಕಾರಣವಾಗಿತ್ತು. ಆದರೀಗ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮದಡಿ ಮನೆಬಾಗಿಲಿಗೆ ಶಿಕ್ಷಕರನ್ನು ಕಳುಹಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇದರ ಉಪಯೋಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುತ್ತಿದೆ. ಈ ಮೂಲಕ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸಲಾಗಿದೆ.

ಹೌದು, ಕೊರೋನಾ ವೈರಸ್ ಆತಂಕದಿಂದಾಗಿ ಇಡೀ ದೇಶವೇ ನಾಲ್ಕು ತಿಂಗಳುಗಳ ಕಾಲ ಸಂಪೂರ್ಣ ಲಾಕ್​​ಡೌನ್​​ ಒಳಗಾಗಿತ್ತು. ಆದರೆ ಇದೀಗ ಲಾಕ್​​ಡೌನ್ ತೆರವುಗೊಂಡಿದೆಯಾದರೂ ಕೊರೋನಾ ಆತಂಕದಿಂದಾಗಿ ಶಾಲೆಗಳು ಮಾತ್ರ ಓಪನ್ ಆಗಿಲ್ಲ. ಭೌಗೋಳಿಕವಾಗಿ ಬಹು ವಿಸ್ತಾರ ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲೆ ಆರಂಭವಾಗದೆ ಇರೋದು ಪಾಲಕರಲ್ಲಿ ತೀರಾ ತಲೆನೋವು ತಂದಿದೆ. ಅತಿ‌ಹೆಚ್ಚು ಕುಗ್ರಾಮ ಹೊಂದಿರುವ ಜಿಲ್ಲೆಯಲ್ಲಿ ಶಿಕ್ಷಣಕ್ಕಾಗಿ ಕಾಡು ಮೇಡು ಅಲೆದು ಶಾಲೆಗೆ ಹೋಗಬೇಕು ಇಂತ ವ್ಯವಸ್ಥೆಯಲ್ಲಿ ಶಾಲೆ ಆರಂಭವಾಗದೆ ಇರೋದು ಮಕ್ಕಳ ಆಸಕ್ತಿ ಎಲ್ಲಿ ಹಾಳಗೋತ್ತೊ ಎನ್ನುವ ಭಯ ಜಿಲ್ಲೆಯ ಗ್ರಾಮೀಣ ಭಾಗದ ಪಾಲಕರದ್ದಾಗಿದೆ.

ಹೀಗಿರುವಾಗಲೇ ಈಗೀಗ ಇವೆಲ್ಲ ಆತಂಕ ಕೊಂಚ ದೂರವಾಗುತ್ತಿದೆ. ಮಕ್ಕಳನ್ನು ಮತ್ತೆ ವಿದ್ಯಾಭ್ಯಾಸದ ಕಡೆಗೆ ಸೆಳೆದು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು  "ವಿದ್ಯಾಗಮ" ಎಂಬ ಕಾರ್ಯಕ್ರಮ ಸಾರದವಜನಿಕ‌ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗ್ರಾಮೀಣ ಭಾಗದಲ್ಲಿ ಆರಂಭವಾಗಿದ್ದು, ಇಲ್ಲಿನ ಮಕ್ಕಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಇದರಲ್ಲಿ ಆಯಾ ಶಾಲಾ ವ್ಯಾಪ್ತಿಯ ಒಂದು ಊರಿನ ಮಕ್ಕಳನ್ನು ಯಾವುದಾದರೂ ಒಂದು ಮನೆಯಲ್ಲಿ ಒಂದುಗೂಡಿಸಿ ಶಿಕ್ಷಕರೇ ತೆರಳಿ ಪಾಠ ಮಾಡುತ್ತಾರೆ. ಶಾಲೆ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಇಲಾಖೆ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದ್ದು, ಮಕ್ಕಳಿಗೆ ಪಾಠದ ಜೊತೆಗೆ ಹೋಂ ವರ್ಕ್ ಸೇರಿದಂತೆ ಇತ್ಯಾದಿ ಚಟುವಟಿಕೆ ಮಾಡಿಸಲಾಗುತ್ತಿದೆ. ಇದ್ರಿಂದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ತಾಲ್ಲೂಕಿನ ಗ್ರಾಮೀಣ ಭಾಗದ ಪಾಲಕರು ಕೊಂಚ ನಿಟ್ಟುಸಿರು ಬಿಟ್ಟು ಮಕ್ಕಳ ಶಿಕ್ಷಣದ ಬಗ್ಗೆ ಆಶಾದಾಯಕ ಭಾವನೆ ಉಂಟಾಗಿದೆ.

ಇನ್ನು ವಿದ್ಯಾಗಮ ಕಾರ್ಯಕ್ರಮದಡಿ  ಇಂಟಲಿಜೆಂಟ್, ಬ್ರಿಲಿಯಂಟ್ ಮತ್ತು ಜಿನೀಯಸ್ ಹೀಗೆ ಮೂರು ಮಾದರಿಯ ಕಲಿಕಾ ಕೋಣೆಗಳಿದ್ದು, ಯಾವುದಾದರೂ ಒಂದು ಮಾದರಿಯಲ್ಲಿ ಪಾಠ ಮಾಡಲಾಗುತ್ತದೆ. ಇಂಟರ್ನೆಟ್ ಅಥವಾ ಇನ್ನಾವುದೇ ಸೌಲಭ್ಯ ಅಷ್ಟಾಗಿ ಇಲ್ಲದೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಜಿನೀಯಸ್ ಕೋಣೆಯಲ್ಲಿ ಪಾಠ ಮಾಡಲಾಗುತ್ತದೆ. ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಪಂಚಾಯಿತಿ ವ್ಯಾಪ್ತಿಯ ಉಡಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಇದೇ ಮಾದರಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

ವಿದ್ಯಾಗಮ ಕಾರ್ಯಕ್ರಮ ಆರಂಭಕ್ಕೂ ಮೊದಲಿನಿಂದಲೂ ಇಲ್ಲಿನ ಶಾಲಾ ಶಿಕ್ಷಕರು ಮಕ್ಕಳ‌ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿದ್ದರು. ಕೊರೋನಾ ಲಾಕ್​​ಡೌನ್ ಬಳಿಕ ಮಕ್ಕಳು ನಿತ್ಯ ಆಟ ಆಡಿಕೊಂಡು ಕಾಲ ಕಳೆಯುತ್ತಿರುವುದನ್ನು ನೋಡಿದಾಗ ಆತಂಕವಾಗುತಿತ್ತು. ಆದರೆ ಈಗ ಮನೆ ಬಾಗಿಲಿಗೆ ಬಂದು ಪಾಠ ಮಾಡುತ್ತಿದ್ದಾರೆ. ಮಕ್ಕಳ‌ ಭವಿಷ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಕಾರ್ಯಕ್ರಮ ಎನ್ನುತ್ತಾರೆ ಪಾಲಕರು.

ಇದನ್ನೂ ಓದಿ: ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ; ಚೆಕ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

ಒಟ್ಟಾರೆ ಕೊರೋನಾ ಆತಂಕದಿಂದಾಗಿ ಶಾಲೆಗಳು ಪ್ರಾರಂಭವಾಗದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಪಾಲಕರಿಗೆ ಇದೀಗ ವಿದ್ಯಾಗಮ ಯೋಜನೆ ಸ್ವಲ್ಪ ನೆಮ್ಮದಿ ನೀಡಿದೆ. ಆದಷ್ಟು ಬೇಗ ಕೊರೋನಾ ಕೊನೆಗೊಂಡು ಶಾಲೆಗಳು ಪ್ರಾರಂಭವಾಗಲಿ ಎಂಬುದು ಪಾಲಕರ ಆಶಯವಾಗಿದೆ.
Published by:Ganesh Nachikethu
First published: