ಬೆಂಗಳೂರಿಗೆ ಬರೋಕೆ ಮೊದಲು ಎಚ್ಚರ; ಆಧಾರ್ ಇಲ್ಲದಿದ್ದರೆ ಕ್ವಾರಂಟೈನ್

ಆಧಾರ್ ಕಾರ್ಡ್ ಇದ್ದವರಿಗೆ ಮಾತ್ರ ಬೆಂಗಳೂರು ಪ್ರದೇಶಕ್ಕೆ ಅನುಮತಿ ನೀಡಲಾಗಿದೆ. ಚೆಕ್  ಪೋಸ್ಟ್ ನಲ್ಲಿ  ಸಿಸಿಟಿವಿ  ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಸ್ಥಳದಲ್ಲಿ  ಕಂದಾಯ ಇಲಾಖೆ, ಪೊಲೀಸ್, ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

news18-kannada
Updated:May 25, 2020, 8:35 AM IST
ಬೆಂಗಳೂರಿಗೆ ಬರೋಕೆ ಮೊದಲು ಎಚ್ಚರ; ಆಧಾರ್ ಇಲ್ಲದಿದ್ದರೆ ಕ್ವಾರಂಟೈನ್
ಯಲಹಂಕ ತಾಲೂಕಿನ ಚೆಕ್ ಪೋಸ್ಟ್
  • Share this:
ದೇವನಹಳ್ಳಿ: ರಾಜಧಾನಿ ಬೆಂಗಳೂರಿಗೆ ಹೊರ ರಾಜ್ಯಗಳಿಂದ ಜನ ಲಗ್ಗೆ ಇಡುತ್ತಿದ್ದಾರೆ. ಇದರಿಂದ ಕೊರೊನಾ ಆತಂಕ ಹೆಚ್ಚಾಗಿದ್ದು ಬೆಂಗಳೂರು ಪ್ರವೇಶಿಸುವ ಮುನ್ನ ರಾಷ್ಟ್ರೀಯ  ಹೆದ್ದಾರಿ  7 ರ ಸಾದಹಳ್ಳಿ ಟೋಲ್ ಗೇಟ್ ಬಳಿಯ  ಚೆಕ್​ಪೋಸ್ಟ್​ನಲ್ಲಿ ತೀವ್ರ ತಪಾಸಣೆ  ಮಾಡಲಾಗುತ್ತಿದೆ. ಆಧಾರ್ ಕಾರ್ಡ್ ಇದ್ದರೆ ಮಾತ್ರ ಬೆಂಗಳೂರಿಗೆ ಎಂಟ್ರಿ ಕೊಡಲಾಗುತ್ತಿದೆ. 

ಸಾದಹಳ್ಳಿಯ ಟೋಲ್ ಮೂಲಕ ಆಂಧ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು  ಪ್ರವೇಶ ಮಾಡುತ್ತಿದ್ದಾರೆ. ಸ್ಥಳೀಯರು ತಮ್ಮ ವಾಹನಗಳಲ್ಲಿ ಆಂಧ್ರದಿಂದ ಜನರನ್ನ ಕರೆದುಕೊಂಡು ಬರುತ್ತಿದ್ದಾರೆ ಅನ್ನುವ ದೂರು ಸಹ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಚೆಕ್  ಪೋಸ್ಟ್ ನಲ್ಲಿ ತೀವ್ರ ತಪಾಸಣೆ  ಮಾಡುವಂತೆ  ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಆಧಾರ್ ಕಾರ್ಡ್ ಇದ್ದವರಿಗೆ ಮಾತ್ರ ಬೆಂಗಳೂರು ಪ್ರದೇಶಕ್ಕೆ ಅನುಮತಿ ನೀಡಲಾಗಿದೆ. ಚೆಕ್  ಪೋಸ್ಟ್ ನಲ್ಲಿ  ಸಿಸಿಟಿವಿ  ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಸ್ಥಳದಲ್ಲಿ  ಕಂದಾಯ ಇಲಾಖೆ, ಪೊಲೀಸ್, ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೊರ ರಾಜ್ಯದಿಂದ ಬಂದವರನ್ನು  ಪ್ರಾಥಮಿಕ  ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೂಕ್ತ ಉತ್ತರ, ದಾಖಲೆ ನೀಡದವರನ್ನ ಕ್ವಾರೆಂಟೈನ್​ಗೆ ಒಳಪಡಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿಗೆ ಹಲವು ವಿಮಾನಗಳ ಹಾರಾಟ ರದ್ದು; ರಾಜ್ಯದಲ್ಲಿ ಎಲ್ಲೆಲ್ಲಿ ವಿಮಾನ ಸಂಚಾರ?

ಹಣವಂತವರಿಗೆ ಅವರದ್ದೇ ಖರ್ಚಿನಲ್ಲಿ 5 ಸ್ಟಾರ್, 3ಸ್ಟಾರ್  ಹೋಟೆಲ್​ಗಳಲ್ಲಿ ಕ್ವಾರೆಂಟೇನ್ ಮಾಡಲಾಗುತ್ತಿದೆ. ಬಡವರು, ನಿರ್ಗತಿಕರಿಗಾಗಿ ಹಾಸ್ಟೆಲ್, ಛತ್ರದಲ್ಲಿ ಉಚಿತವಾಗಿ  ಕ್ವಾರೆಂಟೇನ್ ಮಾಡಲಾಗುತ್ತಿದೆ . ಚೆಕ್ ಪೋಸ್ಟ್ ನಲ್ಲಿ ವಿಎ, ಆರ್.ಐ, ಪಿ.ಡಿ.ಓ, ಅಸಿಸ್ಟೆಂಟ್ ಪ್ರೊಫೆಸರ್ ಸೇರಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಸೂಕ್ತ ದಾಖಲೆ ಇಲ್ಲವಾದಲ್ಲಿ ಅಂತಹವರನ್ನ ಕ್ವಾರೆಂಟೈನ್​ಗೆ ರವಾನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಖುದ್ದು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ತಹಶಿಲ್ದಾರ್ ರಘುಮೂರ್ತಿ, ಡಾ. ಗೋವಿಂದರಾಜು, ಡಾ. ರಾಜು ನಾಯಕ್ ಕಟ್ಟುನಿಟ್ಟಿನ ನಿಯಮಗಳ ಮೂಲಕ ಬೆಂಗಳೂರಿಗೆ ಬರುವವರ ತಪಾಸಣೆ ಕೈಗೊಡಿದ್ದಾರೆ.

First published: May 25, 2020, 8:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading