ಅಮೆರಿಕ, ಜಪಾನ್ ಬಿಟ್ಟರೆ ನರೇಂದ್ರ ಮೋದಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅತಿದೊಡ್ಡದು

ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಪ್ಯಾಕೇಜ್ ಘೋಷಿಸಿದ ದೇಶಗಳು ವಿರಳ. ಜಿಡಿಪಿಯ ಭಾಗದ ಆಧಾರದಲ್ಲಿ ಭಾರತ ಘೋಷಿಸಿದ ಪ್ಯಾಕೇಜ್ ವಿಶ್ವದಲ್ಲಿ 3ನೇ ಗರಿಷ್ಠ ಮೊತ್ತ ಎನಿಸಿದೆ.

ಕಟ್ಟಡ ನಿರ್ಮಾಣ

ಕಟ್ಟಡ ನಿರ್ಮಾಣ

  • News18
  • Last Updated :
  • Share this:
    ನವದೆಹಲಿ(ಮೇ 13): ಕೊರೋನಾ ವೈರಸ್ ಸೋಂಕಿನಿಂದ ಸೃಷ್ಟಿಯಾಗಿರುವ ಮಹಾ ಬಿಕ್ಕಟ್ಟಿಗೆ ಸಿಕ್ಕು ಬಹುತೇಕ ರಾಷ್ಟ್ರಗಳು ಅತೀವ ಸಂಕಷ್ಟಕ್ಕೆ ಸಿಲುಕಿವೆ. ಸೋಂಕು ನಿಗ್ರಹಿಸುವುದರ ಜೊತೆಗೆ ಆರ್ಥಿಕತೆಯನ್ನು ಮೇಲೆತ್ತುವುದೇ ಎಲ್ಲಾ ದೇಶಗಳ ಚಿಂತೆಯಾಗಿದೆ. ಹಲವು ದೇಶಗಳು ಆರ್ಥಿಕ ಪುನಶ್ಚೇತನಕ್ಕಾಗಿ ವಿವಿಧ ಕ ್ರಮಗಳನ್ನು ಕೈಗೊಂಡಿವೆ. ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸಿದ್ಧಾರೆ. ನಿನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ ಮೊತ್ತದ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ತಿಳಿಸಿದ್ದಾರೆ.

    ಇದು ಕಡಿಮೆ ಮೊತ್ತವಲ್ಲ. ನಮ್ಮ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 10 ಭಾಗ ಇದಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತೇಜಕ ಪ್ಯಾಕೇಜ್ ಘೋಷಿಸಿದ ದೇಶಗಳು ವಿರಳ. ಜಿಡಿಪಿಯ ಭಾಗದ ಆಧಾರದಲ್ಲಿ ಭಾರತ ಘೋಷಿಸಿದ ಪ್ಯಾಕೇಜ್ ವಿಶ್ವದಲ್ಲಿ 3ನೇ ಗರಿಷ್ಠ ಮೊತ್ತ ಎನಿಸಿದೆ. ಮೊದಲೆರಡು ಸ್ಥಾನ ಜಪಾನ್ ಮತ್ತು ಅಮೆರಿಕಕ್ಕೆ ಹೋಗುತ್ತದೆ.

    ಜಪಾನ್ ಸರ್ಕಾರ ತನ್ನ ಜಿಡಿಪಿಯ ಶೇ. 21 ಭಾಗದ ಮೊತ್ತವನ್ನು ಸ್ಟಿಮುಲಸ್ ಪ್ಯಾಕೇಜ್ ಆಗಿ ಘೋಷಿಸಿದೆ. ಅಮೆರಿಕ ಸರ್ಕಾರ ಕೂಡ ಜಿಡಿಪಿಯ ಶೇ. 13ರಷ್ಟು ಇರುವ ಹಣವನ್ನು ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಕಟಿಸಿದೆ. ಇದು ಬಿಟ್ಟರೆ ಬೇರೆ ಯಾವ ದೇಶಗಳೂ ಕೂಡ ಭಾರತದಕ್ಕಿಂತ ಹೆಚ್ಚು ಮೊತ್ತದ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸಿಲ್ಲ.

    ಆದರೆ, ನಿನ್ನೆ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ರೂ ಉತ್ತೇಜಕ ಪ್ಯಾಕೇಜ್​ನಲ್ಲಿ ಕೊರೋನಾ ಬಿಕ್ಕಟ್ಟು ಉದ್ಭವಿಸಿದ ನಂತರ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಪ್ರಕಟಿಸಿದ ಕೆಲ ಪ್ಯಾಕೇಜ್​ಗಳೂ ಅಡಕವಾಗಿವೆ. ಇವೆಲ್ಲವೂ 6.5 ಲಕ್ಷ ಕೋಟಿ, ಅಂದರೆ ಜಿಡಿಪಿಯ ಶೇ 3.2 ಭಾಗದ ಹಣ ಈಗಾಗಲೇ ಪ್ರಕಟವಾಗಿದೆ. ಇನ್ನುಳಿದ ಹಣದ ವಿನಿಯೋಗ ಹೇಗೆಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ದಿನಗಳಲ್ಲಿ ತಿಳಿಸುತ್ತಾರೆ.

    ಇದನ್ನೂ ಓದಿ: Air India: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಸಿಲುಕಿದವರಿಗೆ ಸಿಹಿಸುದ್ದಿ; ಮೇ 19ರಿಂದ ಏರ್​ ಇಂಡಿಯಾ ವಿಮಾನ ಸಂಚಾರ

    ಕೊರೋನಾ ಬಿಕ್ಕಟ್ಟು ಉದ್ಭವಿಸಿದ ಬಳಿಕ ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್​ಗಳಲ್ಲಿ ಬಡವರು, ಮಹಿಳೆಯರು, ವೃದ್ಧರಿಗೆ ಸಹಾಯವಾಗಿ ನೀಡಲಾದ 1.7 ಲಕ್ಷ ಕೋಟಿ ಪ್ಯಾಕೇಜ್ ಕೂಡ ಸೇರಿದೆ. ಆರ್​ಬಿಐ ಬಡ್ಡಿ ದರ ಕಡಿಮೆ ಮಾಡಿದ್ದು, ಲಿಕ್ವಿಡಿಟಿಗೆ ಕ್ರಮ ತೆಗೆದುಕೊಂಡಿದ್ದೂ ಸೇರಿದೆ. ಹಾಗೆಯೇ, ಮಾರ್ಚ್ ತಿಂಗಳಲ್ಲಿ ಘೋಷಿಸಿದ ಉತ್ತೇಜಕ ಪ್ಯಾಕೇಜ್ ಕೂಡ ಇದೆ. ಇವೆಲ್ಲವೂ ಸೇರಿ 6.5 ಲಕ್ಷ ಕೋಟು ರೂ ಮೊತ್ತವಾಗುತ್ತದೆ.

    ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವುದರ ಜೊತೆಗೆ ಭೂಸುಧಾರಣೆ, ಕಾರ್ಮಿಕ ಸಮಸ್ಯೆ, ಕಾನೂನು, ಲಿಕ್ವಿಡಿಟಿ ಇತ್ಯಾದಿ ಸುಧಾರಣೆಗೆ ಈ ಪ್ಯಾಕೇಜ್ ವಿನಿಯೋಗವಾಗಲಿದೆ. ಗುಡಿಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರು, ಮಧ್ಯಮವರ್ಗ ಮತ್ತು ಉದ್ಯಮಗಳಿಗೆ ಈ ಪ್ಯಾಕೇಜ್ ನೆರವಾಗಲಿದೆ.

    First published: