Affordable Housing - ನಗರದ ಬಡವರಿಗೆ ಮತ್ತು ವಲಸಿಗ ಕಾರ್ಮಿಕರಿಗೆ ಅಗ್ಗದ ವಸತಿ ವ್ಯವಸ್ಥೆ

Nirmala Sitharaman Speech - ಖಾಸಗಿ ಜಾಗದಲ್ಲಿ ಅಗ್ಗದ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಸಂಸ್ಥೆಗಳಿಗೆ ಸರಕಾರ ಸಹಾಯ ಒದಗಿಸಲಿದೆ ಎಂದು ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
    ನವದೆಹಲಿ(ಮೇ 14): ನಗರದಲ್ಲಿರುವ ಸ್ಲಮ್ ನಿವಾಸಿಗಳಿಗೆ ಮತ್ತು ವಲಸಿಗ ಕಾರ್ಮಿಕರಿಗೆ ಅಗ್ಗದ ಮನೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಪ್ರಧಾನಿ ಆವಾಸ್ ಯೋಜನೆ ಅಡಿಯಲ್ಲಿ ಸರ್ಕಾರಿ ಬೆಂಬಲಿತ ಅಗ್ಗದ ಗೃಹ ನಿರ್ಮಾಣ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ನಿರ್ಧರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಬಡವರಿಗೆ ಇರುವ ವಸತಿ ಸಮಸ್ಯೆ ನೀಗಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಈ ಯೋಜನೆ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.

    ಖಾಸಗಿ ಜಾಗದಲ್ಲಿ ಅಗ್ಗದ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಸಂಸ್ಥೆಗಳಿಗೆ ಸರಕಾರ ಸಹಾಯ ಒದಗಿಸಲಿದೆ ಎಂದು ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಇದನ್ನೂ ಓದಿ: Nirmala Sitharaman Speech - ರೈತರಿಗೆ 2 ಲಕ್ಷ ಕೋಟಿ ಸಾಲ; ಸಣ್ಣ ರೈತರಿಗೆ 30 ಸಾವಿರ ಕೋಟಿ ತುರ್ತು ಸಹಾಯ

    ಇದನ್ನೂ ಓದಿ: Nirmala Sitharaman Speech - ವೇತನ ತಾರತಮ್ಯಕ್ಕೆ ಅಂತ್ಯ? ನ್ಯಾಷನಲ್ ಫ್ಲೋರ್ ವೇಜ್ ಯೋಜನೆ ಜಾರಿ ಸಾಧ್ಯತೆ

    ಸಿಎಲ್​ಎಸ್​ಎಸ್ ಸ್ಕೀಮ್ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಯೋಜನೆಯಡಿ ವಸತಿ ಕ್ಷೇತ್ರಕ್ಕೆ ಮತ್ತು ಮಧ್ಯಮ ಆದಾಯದ ಮಂದಿಗೆ 70 ಸಾವಿರ ಕೋಟಿ ರೂ ಹೂಡಿಕೆಯ ಪುಷ್ಟಿ ಸಿಗಲಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಲ ಸಿಗಲಿದೆ. ಉಕ್ಕು, ಸಿಮೆಂಟ್, ಸಾರಿಗೆ ಹಾಗೂ ಇತರ ನಿರ್ಮಾಣ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುತ್ತದೆ. ಸಾಕಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. 2021ರವರೆಗೂ ಇರುವ ಈ ಯೋಜನೆಯಿಂದ 2.4 ಲಕ್ಷ ಮಧ್ಯಮ ಆದಾಯದ ಕುಟುಂಬಗಳಿಗೆ ಲಾಭವಾಗುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದ್ದಾರೆ.

    First published: