ಸ್ಯಾಂಪಲ್ ಕೊಟ್ಟು ದಿನಗಳಾದರೂ ರಿಸಲ್ಟ್ ಬರದೆ ಪರದಾಡ್ತಿದ್ದೀರಾ? ಯಾಕೆ ಹೀಗಾಗ್ತಿದೆ? ಇಲ್ಲಿದೆ ಫುಲ್ ಡೀಟೆಲ್ಸ್

ಒಂದು ಸಾಧಾರಣ ಲ್ಯಾಬ್ ದಿನಕ್ಕೆ 20 ಜನರ ಪರೀಕ್ಷೆ ಮಾಡಬಲ್ಲದು. ದೊಡ್ಡ ಲ್ಯಾಬ್ ಗಳು ಹೆಚ್ಚು ಸ್ಯಾಂಪಲ್ ಗಳ ಪರೀಕ್ಷೆ ನಡೆಸುತ್ತವೆ. ರಾಜ್ಯದಲ್ಲಿ ಸದ್ಯ 70 ಲ್ಯಾಬ್ ಗಳಲ್ಲಿ ಮಾತ್ರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಪರೀಕ್ಷೆಗೆ ಒಳಗಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

news18-kannada
Updated:July 8, 2020, 2:15 PM IST
ಸ್ಯಾಂಪಲ್ ಕೊಟ್ಟು ದಿನಗಳಾದರೂ ರಿಸಲ್ಟ್ ಬರದೆ ಪರದಾಡ್ತಿದ್ದೀರಾ? ಯಾಕೆ ಹೀಗಾಗ್ತಿದೆ? ಇಲ್ಲಿದೆ ಫುಲ್ ಡೀಟೆಲ್ಸ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜುಲೈ 08); ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರ ಜೊತೆಗೆ ಕೋವಿಡ್‌19 ಪರೀಕ್ಷೆಗೆ ಒಳಗಾಗುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ, ಈ ಪೈಕಿ ಯಾರನ್ನೇ ಕೇಳಿದರೂ ಕೋವಿಡ್ ರಿಸಲ್ಟ್ ಮಾತ್ರ ಇನ್ನೂ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಮೊದಲೆಲ್ಲಾ ಒಂದೆರಡು ದಿನಗಳಲ್ಲಿ ಬರುತ್ತಿದ್ದ ರಿಪೋರ್ಟ್ ಈಗೀಗ ಅನೇಕ ಬಾರಿ 8-10 ದಿನಗಳಷ್ಟು ತಡವಾಗುವುದೂ ಇದೆ. ಇದರಿಂದ ಸ್ಯಾಂಪಲ್ ಲ್ಯಾಬ್ ಗೆ ಕೊಟ್ಟ ವ್ಯಕ್ತಿ ದೀರ್ಘಕಾಲದವರಗೆ ಆತಂಕದಿಂದ ಕಾಯುವಂತಾಗಿದೆ. ಈ ಹೊಸಾ ಸಮಸ್ಯೆಗೆ ಕಾರಣವೇನು? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 

ಅನೇಕರು ಅನಾರೋಗ್ಯ ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ತಜ್ಞರು. ಇತ್ತೀಚೆಗೆ ಜನ ಭಯಭೀತರಾಗಿ ಸ್ವತಃ ಹಣ ತೆತ್ತು ಪರೀಕ್ಷೆ ಮಾಡಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಮುಂಗಡ ಟೋಕನ್ ಬುಕ್ ಮಾಡಿಕೊಂಡು ಸ್ವಾಬ್, ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವವರು ಜಾಸ್ತಿಯಾಗಿದ್ದಾರೆ.

ಒಂದು ಸಾಧಾರಣ ಲ್ಯಾಬ್ ದಿನಕ್ಕೆ 20 ಜನರ ಪರೀಕ್ಷೆ ಮಾಡಬಲ್ಲದು. ದೊಡ್ಡ ಲ್ಯಾಬ್ ಗಳು ಹೆಚ್ಚು ಸ್ಯಾಂಪಲ್ ಗಳ ಪರೀಕ್ಷೆ ನಡೆಸುತ್ತವೆ. ರಾಜ್ಯದಲ್ಲಿ ಸದ್ಯ 70 ಲ್ಯಾಬ್ ಗಳಲ್ಲಿ ಮಾತ್ರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಪರೀಕ್ಷೆಗೆ ಒಳಗಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಇನ್ನು ದೇಶದ ಅನೇಕ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಲ್ಯಾಬ್ ಗಳಿವೆ ನಿಜ. ಆದರೆ ಸ್ಯಾಂಪಲ್ ಗಳ ಸಂಖ್ಯೆಯೂ ಹೆಚ್ಚಿರುವುದರಿಂದ ರಿಸಲ್ಟ್ ತಡವಾಗುತ್ತಿದೆ.

ಎಲ್ಲದಕ್ಕೂ ಪರಿಹಾರ ಎಂದುಕೊಂಡಿದ್ದ ಆಂಟಿಜನ್ ಟೆಸ್ಟ್, ರ್ಯಾಪಿಡ್ ಆಂಟಿಬಾಡಿ ಟೆಸ್ಟ್ ಇವೆಲ್ಲವೂ ಸರ್ವೆ ನಡೆಸಲು ಮಾತ್ರ ಉಪಯುಕ್ತವಾಗಲಿದೆ. ಈ ಕಿಟ್ ಗಳ ಪರೀಕ್ಷೆಯಲ್ಲಿ ಪಾಸಿಟಿವ್ ಆದರೂ ಮತ್ತೊಮ್ಮೆ ದೃಢಪಡಿಸಿಕೊಳ್ಳಲು ಆರ್‌ಟಿಪಿಸಿಆರ್‌ ಮಾಡಲೇಬೇಕು. ಹಾಗಾಗಿ ಈ ಟೆಸ್ಟಿಂಗ್ ಕಿಟ್ ಗಳು ಬಂದರೂ ಲ್ಯಾಬ್ ಗಳ‌ ಮೇಲಿನ ಹೊರೆ ಕಡಿಮೆಯಾಗಲ್ಲ.

ಇನ್ನು ನಿಯಮಗಳ ಪ್ರಕಾರ ಖಾಸಗಿ ಲ್ಯಾಬ್ ಗೆ ಹೋಗಿ ತಾನೇ ಪರೀಕ್ಷೆ ಮಾಡಿಸಿಕೊಳ್ಳಲು ಅನುಮತಿ ಇಲ್ಲ. ಆಧಾರ್ ಕಾರ್ಡ್ ಮತ್ತು ವೈದ್ಯರ ಚೀಟಿ ಇದ್ದವರು ಮಾತ್ರ  ಪರೀಕ್ಷಿಸಿಕೊಳ್ಳಬಹುದು. ಅಗತ್ಯವಿರುವ ಸೋಂಕಿತರು, ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳ ಪರೀಕ್ಷೆಗೇ ಪ್ರಥಮ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ : ‘ಒಂದು ತಿಂಗಳಿನಲ್ಲಿ ಎಲ್ಲಾ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವಂತೆ ನಾಳೆಯೇ ಆದೇಶ‘ - ಸಚಿವ ಶ್ರೀರಾಮುಲು ಭರವಸೆ

ಇರುವ ಸೌಕರ್ಯಗಳನ್ನು ಆದ್ಯತೆಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲು ಈ ಕ್ರಮಗಳು ಕೈಗೊಳ್ಳಲಾಗುತ್ತಿದೆ. ಆದರೂ ಅನೇಕ ಖಾಸಗಿ ಲ್ಯಾಬ್ ಗಳು ವೈದ್ಯರ ಚೀಟಿ ಇಲ್ಲದಿದ್ದರೂ ಪರೀಕ್ಷೆ ಮಾಡುತ್ತಿವೆ. ಈ ಎಲ್ಲಾ ಕಾರಣಗಳಿಂದ ಕೋವಿಡ್ ರಿಪೋರ್ಟ್ ತಡವಾಗುತ್ತಿದೆ ಎನ್ನಲಾಗಿದೆ. ಲ್ಯಾಬ್ ಗಳ ಸಂಖ್ಯೆ ಜಾಸ್ತಿ ಮಾಡೋದೊಂದೇ ಸದ್ಯಕ್ಕೆ ಇದಕ್ಕಿರುವ ಪರಿಹಾರ ಮಾರ್ಗ ಎನ್ನಲಾಗಿದೆ.
Published by: MAshok Kumar
First published: July 8, 2020, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading