Contagion Movie: ಹಾಲಿವುಡ್​ನ ಈ ಸಿನಿಮಾಗೆ ಹೆಚ್ಚಿತು ಬೇಡಿಕೆ: 'ಕಂಟೇಜಿಯನ್'​ಗೂ ಕೊರೋನಾಗೂ ಇದೆಯಾ ಸಾಮ್ಯತೆ..!

Corona Effect: 2011ರಲ್ಲಿ ತೆರೆಕಂಡ ಹಾಲಿವುಡ್​ ಸಿನಿಮಾನೇ ಈ 'ಕಂಟೇಜಿಯನ್​'. ಈ ಸಿನಿಮಾ ನೋಡಿದರೆ ಸಾಕು ಪ್ರಸ್ತುತ ಕೊರೋನಾದಿಂದ ನಡೆಯುತ್ತಿರುವ ಅನಾಹುತಗಳ ಚಿತ್ರಣ ಕಣ್ಮುಂದೆ ಬರುತ್ತದೆ.

'ಕಂಟೇಜಿಯನ್​' ಸಿನಿಮಾದ ಪೋಸ್ಟರ್​

'ಕಂಟೇಜಿಯನ್​' ಸಿನಿಮಾದ ಪೋಸ್ಟರ್​

  • Share this:
ಈಗ ಎಲ್ಲಿ ನೋಡಿದರೂ ಕೊರೋನಾದ್ದೇ ಸದ್ದು ಗದ್ದಲ. ವೈರಸ್​ನಿಂದಾಗಿ ಹರಡುತ್ತಿರುವ ಸೋಂಕಿಗೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ವಿಶ್ವದೆಲ್ಲೆಡೆ ತನ್ನ ಕರಾಳ ರೂಪವನ್ನು ಪ್ರದರ್ಶಿಸುತ್ತಿರುವ ಈ ಕೊರೋನಾದಿಂದಾಗಿ ಈಗ ಹಾಲಿವುಡ್​ ಸಿನಿಮಾವೊಂದಕ್ಕೆ ಬೇಡಿಕೆ ಹೆಚ್ಚಾಗಿದೆ.

ಹೌದು, 2011ರಲ್ಲಿ ತೆರೆಕಂಡ ಹಾಲಿವುಡ್​ ಸಿನಿಮಾನೇ ಈ 'ಕಂಟೇಜಿಯನ್​'. ಈ ಸಿನಿಮಾ ನೋಡಿದರೆ ಸಾಕು ಪ್ರಸ್ತುತ ಕೊರೋನಾದಿಂದ ನಡೆಯುತ್ತಿರುವ ಅನಾಹುತಗಳ ಚಿತ್ರಣ ಕಣ್ಮುಂದೆ ಬರುತ್ತದೆ.

Steven Soderbergh's Contagion is Warner Bros' 2nd Most-watched Movie After Coronavirus Outbreak
'ಕಂಟೇಜಿಯನ್​' ಸಿನಿಮಾದ ಪೋಸ್ಟರ್​


ವಾರ್ನರ್​ ಬ್ರದರ್ಸ್​ ಅವರ ಈ ಸಿನಿಮಾವನ್ನು ಸ್ವೀವನ್​ ಸೋಡ್ರ್ಬರ್ಗ್​ ನಿರ್ದೇಶನ ಮಾಡಿದ್ದು, ಮ್ಯಾಟ್​ ಡ್ಯಾಮನ್​, ಜೂಡ್​ ಲಾ ಮುಂತಾದವರು ನಟಿಸಿದ್ದಾರೆ. ವೈರಸ್​ನಿಂದ ಹರಡುವ ಸಾಂಕ್ರಾಮಿಕ ರೋಗದ ಕುರಿತಾಗಿಯೇ ಇದೆ ಈ ಚಿತ್ರದ ಕತೆ. ಇದರಲ್ಲಿ ಮಹಿಳೆಯೊಬ್ಬರು ಕೆಲಸದ ವಿಷಯವಾಗಿ ಹಾಂಕ್ ​ಕಾಂಗ್​ಗೆ ಹೋಗಿ ಬಂದ ನಂತರ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾಳೆ. ಇಲ್ಲಿಂದ ಆರಂಭವಾಗುವ ಸಾವಿನ ಸರಣಿ 88 ದೇಶಗಳಲ್ಲಿ ಸಾವಿರಾರು ಮಂದಿಯನ್ನು ತಲುಪುತ್ತದೆ.

ಇದನ್ನೂ ಓದಿ: Arjun Reddy Part 2: ಅರ್ಜುನ್​ ರೆಡ್ಡಿ 2ಗೂ ಅಲ್ಲು ಅರ್ಜುನ್​ಗೂ ಸಂಬಂಧ ಇದೆ ಎನ್ನುತ್ತಿದೆ ಈ ವಿಡಿಯೋ..!

ಕಡೆಗೆ ಚೀನಾಗೆ ಹೋಗಿ ಬಂದವರಿಂದ ಹರಡಿದ ವಿಷಯವನ್ನೇ ಪ್ರಮುಖವನ್ನಾಗಿಟ್ಟುಕೊಂಡು ಇಡೀ ಪ್ರಕರಣವನ್ನು ಬೇಧಿಸಲು ವೈದ್ಯರ ತಂಡವೊಂದು ಮುಂದಾಗುತ್ತದೆ. ಇದೇ ಈ ಸಿನಿಮಾದ ಕಥಾವಸ್ತು.ಈ ಸಿನಿಮಾ ಐಟ್ಯೂನ್ಸ್​ನಲ್ಲಿ ನೋಡುಗರ ಲಿಸ್ಟ್​ನಲ್ಲಿ ಟಾಪ್​ 100ರ ಲಿಸ್ಟ್​ನಲ್ಲೂ ಇರಲಿಲ್ಲ. ಆದರೆ ಕಳೆದ ಶುಕ್ರವಾರ ಟಾಪ್​ 2 ಸ್ಥಾನಕ್ಕೆ ಬಂದಿದೆ. ಅಲ್ಲದೆ ಪೈರಸಿ ವೆಬ್​ಸೈಟ್​ಗಳಲ್ಲೂ ಈ ಚಿತ್ರಕ್ಕಾಗಿ ಹುಟುಕಾಟ ಮುಂದುವರೆದಿದೆ. ಅಮೆಜಾನ್​ ಪ್ರೈಂನಲ್ಲೂ ಈ ಸಿನಿಮಾ ನೋಡುಗರ ಲಿಸ್ಟ್​ನಲ್ಲಿ ಟಾಪ್​ 5ನಲ್ಲಿದೆ. ವಾರ್ನರ್​ ಬ್ರದರ್ಸ್​ ಅವರ ಹ್ಯಾರಿಪಾಟರ್​ ಸರಣಿ ನಂತರ ಇದೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರ.

ಇದನ್ನೂ ಓದಿ: ಬಲ್ಲಾಳದೇವ ರಾಣಾರನ್ನೂ ಕಾಡಿದ ಕೊರೋನಾ: 'ಅರಣ್ಯ' ಸಿನಿಮಾ ರಿಲೀಸ್​ ಮುಂದಕ್ಕೆ..!

ಜನವರಿಯಿಂದ ಪ್ರತಿದಿನ ಈ ಸಿನಿಮಾವನ್ನು ಅಂದಾಜು 5,609 ಮಂದಿ ವೀಕ್ಷಿಸುತ್ತಿದ್ದಾರಂತೆ. ಸದ್ಯ ಈ ಸಿನಿಮಾವನ್ನು ಇನ್ನಷ್ಟು ಜನ ವೀಕ್ಷಿಸುವ ಸಾಧ್ಯತೆಯಿದೆ.

Meghana Raj: ಮತ್ತೆ ಮದುಮಗಳಾದ ಮೇಘನಾರಾಜ್​: ವೈರಲ್​ ಆಯ್ತು ಫೋಟೋಗಳು..!
First published: