HOME » NEWS » Coronavirus-latest-news » STEROIDS IN ISOLATION KIT ISSUED BY YOUTH CONGRESS BJP YUVA MORCHA WHO FILED THE CASE MAK

ಯೂತ್​ ಕಾಂಗ್ರೆಸ್​ ವಿತರಿಸಿದ ಐಸೊಲೇಶನ್​ ಕಿಟ್​ನಲ್ಲಿ ಸ್ಟಿರಾಯ್ಡ್​; ಕೇಸ್​ ದಾಖಲಿಸಿದ ಬಿಜೆಪಿ ಯುವ ಮೋರ್ಚಾ

ಯೂತ್​ ಕಾಂಗ್ರೆಸ್​ ವಿತರಿಸಿದ ಮೆಡಿಕಲ್ ಕಿಟ್​ನಲ್ಲಿ ಎಲ್ಲಾ ಔಷಧ ಜೊತೆಗೆ ಸ್ಟಿರಾಯ್ಡ್​ ಸಹ ಇದೆ. ಈ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ಪಡೆಯುವಂತಿಲ್ಲ. ಹಾಗೆ ಪಡೆದರೆ ಇದು ಜೀವಕ್ಕೆ ಮಾರಕವಾಗಬಲ್ಲದು ಎಂದು ಎಎಪಿ ಎಚ್ಚರಿಸಿತ್ತು.

news18-kannada
Updated:May 18, 2021, 4:37 PM IST
ಯೂತ್​ ಕಾಂಗ್ರೆಸ್​ ವಿತರಿಸಿದ ಐಸೊಲೇಶನ್​ ಕಿಟ್​ನಲ್ಲಿ ಸ್ಟಿರಾಯ್ಡ್​; ಕೇಸ್​ ದಾಖಲಿಸಿದ ಬಿಜೆಪಿ ಯುವ ಮೋರ್ಚಾ
ಯೂತ್ ಕಾಂಗ್ರೆಸ್ ವಿತರಿಸಿದ ಐಸೊಲೇಶನ್ ಕಿಟ್.
  • Share this:
ಬೆಂಗಳೂರು (ಮೇ 18); ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಕೊರೋನಾ ದೃಢಪಟ್ಟ ತಕ್ಷಣ ಆತಂಕಕ್ಕೆ ಒಳಗಾಗುವ ಜನ ಸಾಮಾನ್ಯವಾಗಿ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಅಧಿಕ ವಾಗುತ್ತಿದೆ. ಹೀಗಾಗಿ ಸೋಂಕು ದೃಢಪಟ್ಟ ತಕ್ಷಣ ಆಸ್ಪತ್ರೆಗೆ ತೆರಳುವ ಅಗತ್ಯವಿಲ್ಲ, ಮನೆಯಲ್ಲೇ ಚಿಕಿತ್ಸೆ ಪಡೆದು ಸಹ ಗುಣವಾಗಬಹುದು ಎಂದು ಎಲ್ಲೆಡೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇದೇ ಕಾರಣಕ್ಕೆ ಬಡ ಜನರಿಗೆ ಸಹಾಯ ಮಾಡುವ ದೃಷ್ಟಿಯಲ್ಲಿ ಕಾಂಗ್ರೆಸ್​ ಸಹ ಕೋವಿಡ್ ಸಹಾಯ ವಾಣಿಯನ್ನು ಆರಂಭಿಸಿದೆ. ಅಲ್ಲದೆ, ಜನರಿಗೆ ಹೋಮ್ ಐಸೊಲೇಶನ್ ಕಿಟ್​ ವಿತರಿಸುತ್ತಿದೆ. ಆದರೆ, ಯೂತ್​ ಕಾಂಗ್ರೆಸ್​ ಹೀಗೆ ವಿತರಿಸಿದ ಐಸೊಲೇಶನ್ ಕಿಟ್​ನಲ್ಲಿ ಜನರ ಜೀವಕ್ಕೆ ಮಾರಕವಾದ ಸ್ಟಿರಾಯ್ಡ್​ ಔಷಧ ಸಹ ಇರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಬಿಜೆಪಿ ಯುವ ಮೋರ್ಚ ಈ ಬಗ್ಗೆ ಕೇಸ್ ಸಹ ದಾಖಲಿಸಿದೆ.

ಯೂತ್​ ಕಾಂಗ್ರೆಸ್​ ವಿತರಿಸಿದ ಮೆಡಿಕಲ್ ಕಿಟ್​ನಲ್ಲಿ ಎಲ್ಲಾ ಔಷಧ ಜೊತೆಗೆ ಸ್ಟಿರಾಯ್ಡ್​ ಸಹ ಇದೆ. ಈ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೆ ಪಡೆಯುವಂತಿಲ್ಲ. ಹಾಗೆ ಪಡೆದರೆ ಇದು ಜೀವಕ್ಕೆ ಮಾರಕವಾಗಬಲ್ಲದು. ಅಲ್ಲದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಟಿರಾಯ್ಡ್​ಗಳನ್ನು ಕೊಳ್ಳುವುದು ಸಹ ಭಾರತದಲ್ಲಿ ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್​ ಇದನ್ನು ಜನರಿಗೆ ವಿತರಿಸಿದೆ. ಈ ಬಗ್ಗೆ ಮೊದಲ ಎಎಪಿ ಪಕ್ಷದ ಮುಖಂಡ ಪೃಥ್ವಿ ರೆಡ್ಡಿ ಟ್ವೀಟ್​ ಮೂಲಕ ಸರ್ಕಾರದ ಮತ್ತು ಜನರ ಗಮನ ಸೆಳೆದಿದ್ದರು. ನಂತರ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪರಿಣಾಮ ಜನರಿಂದ ಈ ಔಷಧ ಕಿಟ್​ ಅನ್ನು ಹಿಂಪಡೆಯಲಾಗಿತ್ತು.

ಆದರೆ, ಇದೀಗ ಕಾಂಗ್ರೆಸ್​ ಪಕ್ಷದ ಈ ಕೆಲಸವನ್ನು ಖಂಡಿಸಿರುವ ಬೆಂಗಳೂರು ಬಿಜೆಪಿ ಯುವ ಮೋರ್ಚ ಇಂದು ಕಮೀಷನರ್ ಕಚೇರಿಗೆ ದೂರು ನೀಡಿದೆ. ರಕ್ಷಾ ರಾಮಯ್ಯ ಮೆಡಿಕಲ್ ಕಿಟ್ ವಿತರಣೆ ಮಾಡಿದ್ದು, ಸ್ಟಿರಾಯ್ಡ್​ ದುರುಪಯೋಗ ಆರೋಪ ಮಾಡಲಾಗಿದೆ. ಆಸ್ಪತ್ರೆ ಒಡೆತನ ಇರುವುದರಿಂದ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ಯುವ ಮೋರ್ಚ್ ಮುಖಂಡ ವಿಜೇಂದ್ರ ಈ ಬಗ್ಗೆ ಮಾತನಾಡಿದ್ದು, "ಸ್ಟಿರಾಯ್ಡ್ ಔಷಧಿ ಕಿಟ್ ಅನ್ನು ಕಾಂಗ್ರೆಸ್ ಮನೆ ಮನೆಗೆ ಹಂಚಿದ್ದಾರೆ. ಅವರು ಮಾಡುತ್ತಿರುವುದು ಒಳ್ಳೆ ವಿಚಾರವೇ, ಆದರೆ ಸ್ಟಿರಾಯ್ಡ್ ಗಳನ್ನೆಲ್ಲ ಹಂಚೋದು ತಪ್ಪು‌. ಇಷ್ಟು ಪ್ರಮಾಣದ ಸ್ಟಿರಾಯ್ಡ್ ಹೇಗೆ ಸಿಕ್ತು ಗೊತ್ತಿಲ್ಲ. ಇದರ ಬಗ್ಗೆ ನೆನ್ನೆ ಡ್ರಗ್ ಕಂಟ್ರೋಲ್ ಅವರಿಗೆ ದೂರು ನೀಡಿದ್ದೇವೆ. ಹೀಗಾಗಿ ಇಂದು ಕಮೀಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಅಬ್ಬರ:

ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಅಪಾಯದ ಮಟ್ಟ ಮೀರಿದೆ. ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್ 5 ಜಿಲ್ಲೆಗಳ ಪೈಕಿ ಕರ್ನಾಟಕದ 2 ಜಿಲ್ಲೆಗಳು ಗುರುತಿಸಿಕೊಂಡಿವೆ. ಬಳ್ಳಾರಿ ಮತ್ತು ಉತ್ತರ ಕನ್ನಡದಲ್ಲಿ ಅತಿಹೆಚ್ಚು ಕೊರೋನಾ ಪಾಸಿಟಿವಿಟಿ ರೇಟ್ ಇರುವುದು ಪತ್ತೆಯಾಗಿದೆ. ಇದರ ನಡುವೆ ಕೊರೋನಾ ಸೋಂಕು ಹೆಚ್ಚಳದಿಂದ ಒತ್ತಡಕ್ಕೆ ಒಳಗಾಗಿ ಕಡಿಮೆ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೈನಂದಿನ ಟೆಸ್ಟ್​ ಪ್ರಮಾಣ 1 ಲಕ್ಷಕ್ಕೂ ಕಡಿಮೆಯಾಗಿದೆ.

ಇದನ್ನೂ ಓದಿ: CoronaVirus: ಕಾಳಸಂತೆಯಲ್ಲಿ Remdisivir ಮಾರಾಟ ದಂಧೆ; ಕೋಲಾರ ಪೊಲೀಸರಿಂದ 6 ಜನರ ಬಂಧನ!ಸೋಮವಾರ ಕರ್ನಾಟಕದಲ್ಲಿ ಕೇವಲ 97,336 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಇಷ್ಟು ಕಡಿಮೆ ಟೆಸ್ಟ್ ಮಾಡಿದರೂ 38,603 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕರ್ನಾಟಕದ ಕೊರೋನಾ ಪಾಸಿಟಿವಿಟಿ ರೇಟ್ 39.70ಗೆ ಏರಿಕೆಯಾಗಿದೆ. ಕರ್ನಾಟಕ ಸರ್ಕಾರ ಮಾಡುತ್ತಿರುವ ಎಡವಟ್ಟು ಅನಾಹುತದಿಂದ ಟೆಸ್ಟ್ ಸಂಖ್ಯೆ ಇಳಿಮುಖವಾದರೆ ಸಾವು, ಸೋಂಕು ಎರಡೂ ಉಲ್ಬಣಿಸುತ್ತದೆ.
Youtube Video

ಸೋಂಕು ಪತ್ತೆ ವಿಳಂಬದಿಂದ ಇನ್ನಷ್ಟು ಮಂದಿಗೆ ಸೋಂಕು ಅಂಟುತ್ತದೆ. ಬೇಗ ಕೊರೋನಾ ಸೋಂಕು ಪತ್ತೆಯಾಗದಿದ್ದರೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತದೆ. ಸೋಂಕು ಉಲ್ಬಣಿಸಿದಾಗ ಸೋಂಕು ಪತ್ತೆಯಾದರೆ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರಲಿದೆ.
Published by: MAshok Kumar
First published: May 18, 2021, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories