Stay and Play at Home: ಜನಪ್ರಿಯ ಕೋಡಿಂಗ್​ ಗೇಮ್​ ಸೀರಿಸ್​ಗಳನ್ನು ಮತ್ತೆ ಪರಿಚಯಿಸಿದ ಗೂಗಲ್​ ಡೂಡಲ್​

Popular Google Doodle Games: ಮಾಹಾಮಾರಿ ಕೊರೋನಾ ವೈರಸ್ ದಾಳಿಗೆ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವೆಯೇ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಇವರೆಲ್ಲರಿಗೂ ವಿಭಿನ್ನ ಡೂಡಲ್​ ಮೂಲಕ ಗೂಗಲ್​ ಧನ್ಯವಾದ ಹೇಳಿತ್ತು.

ಗೂಗಲ್​ ಡೂಡಲ್​

ಗೂಗಲ್​ ಡೂಡಲ್​

  • Share this:
    ಕೊರೋನಾ ವೈರಸ್​ ವಿರುದ್ಧ ಅನೇಕರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮನೆಯಲ್ಲೇ ಇರುವಂತೆ ಜನರ ಬಳಿ ಕೋರುತ್ತಿದೆ. ಈ ಮಧ್ಯೆ ಗೂಗಲ್​ ಕೂಡ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈಗ ಸ್ಟೇ  ಆಂಡ್​ ಪ್ಲೇ ಅಟ್​ ಹೋಮ್​ ಟ್ಯಾಗ್​ಲೈನ್​ ಅಡಿಯಲ್ಲಿ ಹಳೆಯ ಜನಪ್ರಿಯ ಡೂಡಲ್​ ಗೇಮ್​ಗಳನ್ನು ಮತ್ತೆ ಗೂಗಲ್​ ಪರಿಚಯಿಸಿದೆ.

    2017ರಲ್ಲಿ ಪರಿಚಯಸಿದ್ದ ಕೋಡಿಂಗ್​ ಗೇಮ್​ಅನ್ನು ಮತ್ತೆ ಪರಿಚಯಿಸಲಾಗಿದೆ. ವಿಶೇಷವಾಗಿ ಮಕ್ಕಳಿಗೋಸ್ಕರ ಈ ಗೇಮ್​ಅನ್ನು ಸಿದ್ಧಪಡಿಸಲಾಗಿತ್ತು. ಈ ಆಟದಲ್ಲಿ ಮೊಲವೊಂದು ಇರುತ್ತದೆ. ಅದಕ್ಕೆ ಎಲ್ಲ ಕ್ಯಾರೆಟ್​ಗಳನ್ನು ಕಲೆ ಹಾಕಲು ಸಹಾಯ ಮಾಡಿದರೆ ಅವರು ಗೆದ್ದಂತೆ.

    ಮಾಹಾಮಾರಿ ಕೊರೋನಾ ವೈರಸ್ ದಾಳಿಗೆ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವೆಯೇ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಇವರೆಲ್ಲರಿಗೂ ವಿಭಿನ್ನ ಡೂಡಲ್​ ಮೂಲಕ ಗೂಗಲ್​ ಧನ್ಯವಾದ ಹೇಳಿತ್ತು.

    ಇದನ್ನೂ ಓದಿ: ಕೊರೋನಾ ನಡುವೆಯೂ ಮನೆಯಿಂದ ಹೊರ ಬಂದು ಸೇವೆ ಸಲ್ಲಿಸುತ್ತಿರುವವರಿಗೆ ಗೂಗಲ್​ ಡೂಡಲ್​ ಧನ್ಯವಾದ

    ಭಾರತದಲ್ಲಿ ಲಾಕ್​ಡೌನ್​ ಆದೇಶದ ನಡುವೆಯೂ ಕೊರೋನಾ ವೈರಸ್ ಬಹಳ ವೇಗವಾಗಿ ಹಬ್ಬುತ್ತಿದೆ. ಸರ್ಕಾರ ಎಷ್ಟೇ ಹರಸಾಹಸ ಪಟ್ಟರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಭಾನುವಾರ ಭಾರತದಲ್ಲಿ ದಾಖಲೆಯ ಕೊರೋನಾ ಪ್ರಕರಣ ದಾಖಲಾಗಿವೆ. ಒಂದೆ ದಿನ ಸುಮಾರು 2 ಸಾವಿರ ಮಂದಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.
    First published: