ಲಾಕ್ ಡೌನ್ ನಡುವೆಯೂ ರಾಜ್ಯದ 41 ರೇಷ್ಮೆ ಮಾರುಕಟ್ಟೆ ಆರಂಭ - ಕೆಜಿ ರೇಷ್ಮೆಗೆ 370 ರೂಪಾಯಿ ಬಂಪರ್ ದರ

ರಾಜ್ಯದ ಪ್ರಮುಖ ರೇಷ್ಮೆ ಮಾರುಕಟ್ಟೆಗಳಾದ ಶಿಡ್ಳಘಟ್ಟ ಕೊಳ್ಳೆಗಾಲ, ಕನಕಪುರ, ಚನ್ನಪಟ್ಟಣ ಮಾರುಕಟ್ಟೆಗಳು ಸಹ ಇಂದಿನಿಂದ ಆರಂಭವಾಗಿವೆ.

news18-kannada
Updated:April 2, 2020, 11:50 PM IST
ಲಾಕ್ ಡೌನ್ ನಡುವೆಯೂ ರಾಜ್ಯದ 41 ರೇಷ್ಮೆ ಮಾರುಕಟ್ಟೆ ಆರಂಭ - ಕೆಜಿ ರೇಷ್ಮೆಗೆ 370 ರೂಪಾಯಿ ಬಂಪರ್ ದರ
ರಾಮನಗರ ರೇಷ್ಮೆ ಮಾರುಕಟ್ಟೆ
  • Share this:
ಬೆಂಗಳೂರು(ಏ.02): ಲಾಕ್ ಡೌನ್ ನಡುವೆಯೂ ಸರ್ಕಾರದ ಆದೇಶದಂತೆ ಇಂದಿನಿಂದ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆ ಆರಂಭವಾಗಿದೆ. ಬೆಳಗ್ಗೆಯೇ ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ, ಬಿಜಾಪುರ ಸೇರಿದಂತೆ ಹಲವು ಭಾಗಗಳಿಂದ ರೇಷ್ಮೆ ಬೆಳೆಗಾರರು ಆಗಮಿಸಿ ತಮ್ಮ ರೇಷ್ಮೆಗೂಡುಗಳನ್ನ ವ್ಯಾಪಾರ ಮಾಡಿದ್ದಾರೆ.

ಇನ್ನು ಕೊರೋನಾ ಭೀತಿಯಿಂದ  ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಸ್ಪ್ರೆ ಮಾಡುವ ವ್ಯವಸ್ಥೆ ಇತ್ತು. ಅನೇಕರು ಮುಖಕ್ಕೆ ಮಾಸ್ಕ್ ಧರಿಸಿ ಮಾರುಕಟ್ಟೆ ಪ್ರವೇಶ ಪಡೆದರು. ಆದರೆ, ಸಾಮಾಜಿಕ ಅಂತರ ಮಾತ್ರ ಮಾರುಕಟ್ಟೆಯಲ್ಲಿ ಕಂಡು ಬರಲಿಲ್ಲ, ಜೊತೆಗೆ ಕೆಲವರು ಮಾಸ್ಕ್ ಕೂಡ ಹಾಕಿಕೊಂಡಿರಲಿಲ್ಲ. ಇದಕ್ಕೆ ರಾಮನಗರ ಜಿಲ್ಲಾಡಳಿತದ ವೈಫಲ್ಯ ಎನ್ನಲಾಗಿದೆ.

ಬೆಳಗ್ಗೆ ಹತ್ತುಗಂಟೆ ಬಳಿಕ ಮಾರುಕಟ್ಟೆಯಲ್ಲಿ ರೀಲರ್ಸ್ ಗಳಿಂದ ರೇಷ್ಮೆಗೂಡು ವ್ಯಾಪಾರ ಪ್ರಕ್ರಿಯೆ ಪ್ರಾರಂಭವಾಯ್ತು. ಇನ್ನು ನಾಳೆಯಿಂದ ರಾಮನಗರದಲ್ಲಿ ರೇಷ್ಮೆಗೂಡು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೇ ಎನ್ನಲಾಗಿದೆ.‌ ರಾಮನಗರದ ಜೊತೆಗೆ ಚನ್ನಪಟ್ಟಣ, ಕನಕಪುರದ ಇಂದು  ಆರಂಭವಾಗಿವೆ.

ರಾಜ್ಯದ ಪ್ರಮುಖ ರೇಷ್ಮೆ ಮಾರುಕಟ್ಟೆಗಳಾದ ಶಿಡ್ಳಘಟ್ಟ ಕೊಳ್ಳೆಗಾಲ, ಕನಕಪುರ, ಚನ್ನಪಟ್ಟಣ ಮಾರುಕಟ್ಟೆಗಳು ಸಹ ಇಂದಿನಿಂದ ಆರಂಭ ಆಗಿವೆ. ನಿನ್ನೆ ವರೆಗೆ ಸಿಬಿ ರೇಷ್ಮೆ ಬೆಲೆ ಪ್ರತಿ ಕೆಜಿಗೆ 241 ರೂ. ಇತ್ತು. ಆದರೆ ಇವತ್ತು ಕೆ.ಜಿಗೆ 300 ರಿಂದ 350 ರೂ.ಗೆ ಏರಿಕೆ ಆಗಿದೆ. ಸಿ ಎಸ್ ಆರ್ ರೇಷ್ಮೆ ಬೆಲೆಯು 300 ರಿಂದ 370ರೂ. ದಾಟಿದೆ. ಪ್ರಮುಖವಾಗಿ ಏಷ್ಯಾ ನಂ.1 ಅತಿದೊಡ್ಡ ರಾಮನಗರ ರೇಷ್ಮೆ ಮಾರುಕಟ್ಟೆ ಓಪನ್ ಆದ ಮೊದಲ ದಿನವೇ 12 ಟನ್ ರೇಷ್ಮೆಗೂಡು ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ : ಕೂಲಿ ಕಾರ್ಮಿಕರಿಗೆ ನೆರವಾದ ಡಿಸಿಎಂ ಸವದಿ ಮಗ ಚಿದಾನಂದ - ಬಡವರಿಗೆ ದಿನಸಿ ವಸ್ತುಗಳ ವಿತರಣೆ

ಸಿಬಿ - ಸರಿ ಸುಮಾರು 2.720 ಕೆ.ಜಿ, ಸಿ ಎಸ್ ಆರ್ - ಸರಿಸುಮಾರು - 10 ಸಾವಿರೂ ಕೆ.ಜಿ ಒಟ್ಟು - 12.720 ಕ್ಕೂ ಹೆಚ್ಚು ಕೆ.ಜಿ ಮೊದಲೇ ದಿನವೇ ಬಂದಿದೆ.  ಈ ಬಗ್ಗೆ ಕೃಷಿ ಮಾರುಕಟ್ಟೆ ಸಚಿವ ನಾರಾಯಣಗೌಡಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ ರೇಷ್ಮೆ ಮಾರುಕಟ್ಟೆಯಲ್ಲಿ ಕೊರೋನಾ ವೈರಸ್ ಹರಡದಂತೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
First published: April 2, 2020, 11:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading