ರಾಜ್ಯದ ಎಲ್ಲಾ ಇಲಾಖೆ, ನಿಗಮ, ಮಂಡಳಿ ಸಿಬ್ಬಂದಿಗೆ ಕೆಲಸಕ್ಕೆ ಹಾಜಾರಾಗುವಂತೆ ಸರ್ಕಾರ ಆದೇಶ

ಹೀಗೆ ಮುಂದುವರಿದ ಅವರು, ಇಲಾಖೆಗಳಲ್ಲದೇ ಸರ್ಕಾರಿ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್​​ ಸಿ, ಗ್ರೂಪ್​​ ಡಿ ವೃಂದದ ಎಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ಕೆಲಸಕ್ಕೆ ಹಾಜರದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಹಾಜರಾದವರ ಬಗ್ಗೆ ಏಪ್ರಿಲ್​​ 29ನೇ ತಾರೀಕಿನೊಳಗೆ ಮಾಹಿತಿ ನೀಡಬೇಕೆಂದು ಆದೇಶಿಸಿದ್ದಾರೆ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

 • Share this:
  ಬೆಂಗಳೂರು(ಏ.27): ದೇಶಾದ್ಯಂತ ಮೂರನೇ ಅವಧಿಗೆ ಮೇ 15ರವರೆಗೂ ಲಾಕ್​​ಡೌನ್​​ ವಿಸ್ತರಿಸಬೇಕಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸೂಚನೆ ಸಿಕ್ಕ ಬೆನ್ನಲ್ಲೀಗ ರಾಜ್ಯ ಸರ್ಕಾರವೂ ಅಗತ್ಯ ಸೇವೆ ಒದಗಿಸುತ್ತಿರುವ ಎಲ್ಲಾಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದೆ. ರಾಜ್ಯದ ಪ್ರಮುಖ ಇಲಾಖೆಯ ಅಧಿಕಾರಿಗಳು ಸೇರಿದಂತೆ, ಸರ್ಕಾರಿ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ, ಗ್ರೂಪ್ ಬಿ ಎಲ್ಲಾ ಅಧಿಕಾರಿಗಳು, ಗ್ರೂಪ್ ಸಿ, ಗ್ರೂಪ್ ಡಿ ವೃಂದಗಳ ಶೇ.33ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಸಿಶಿದೆ.

  ರಾಜ್ಯದಲ್ಲಿನ ಸಚಿವಾಲಯ ಸೇರಿದಂತೆ ಉನ್ನತ ಮಟ್ಟದ ಕಚೇರಿಗಳಲ್ಲಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ 18 ಇಲಾಖೆಗೆಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿ ವೆಂಕಟರಸಪ್ಪ ಹೊರಡಿಸಿದ್ದಾರೆ.  ಹೀಗೆ ಮುಂದುವರಿದ ಅವರು, ಇಲಾಖೆಗಳಲ್ಲದೇ ಸರ್ಕಾರಿ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್​​ ಸಿ, ಗ್ರೂಪ್​​ ಡಿ ವೃಂದದ ಎಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ಕೆಲಸಕ್ಕೆ ಹಾಜರದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಹಾಜರಾದವರ ಬಗ್ಗೆ ಏಪ್ರಿಲ್​​ 29ನೇ ತಾರೀಕಿನೊಳಗೆ ಮಾಹಿತಿ ನೀಡಬೇಕೆಂದು ಆದೇಶಿಸಿದ್ದಾರೆ.

  ಇದನ್ನೂ ಓದಿ: ​ಕೋವಿಡ್‌-19: ಪತ್ರಕರ್ತರಿಗೆ 15 ಲಕ್ಷ ರೂ ಜೀವ ವಿಮೆ ಘೋಷಿಸಿದ ಒರಿಸ್ಸಾ ಸರ್ಕಾರ
  First published: