ಕಳೆದ 3 ತಿಂಗಳಿಗಿಂತ ದುಪ್ಪಟ್ಟು ವೇಗದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ಗುರಿ ಹೊಂದಿರುವ ರಾಜ್ಯ ಸರ್ಕಾರ

ರಾಜ್ಯದಲ್ಲಿ ಬರೋಬ್ಬರಿ 3 ಲಕ್ಷ ಜನರಿಗೆ ಆಂಟಿಜನ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಕೂಡಾ ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತೀಚೆಗೆ 1 ದಿನಕ್ಕೆ 1-2 ಸಾವಿರ ಸೋಂಕಿತರು ಗುರುತಾಗುತ್ತಿದ್ದಾರೆ. ಆಂಟಿಜನ್ ಟೆಸ್ಟ್ ರಿಸಲ್ಟ್ 10-20 ನಿಮಿಷಗಳ ಒಳಗೆ ತಿಳಿಯುತ್ತದೆ. ಇದರಿಂದ ಪ್ರತಿದಿನದ ಸೋಂಕಿತರ ಲೆಕ್ಕ ಒಂದಕ್ಕೆ 10 ಪಟ್ಟು ಹೆಚ್ಚಾಗುವ ಸಂಭವ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜು.15): ರಾಜ್ಯದಲ್ಲಿ ಕೊರೋನಾ ಪರೀಕ್ಷೆಗಳ ಸಂಖ್ಯೆ ವೇಗ ಪಡೆದುಕೊಳ್ಳುತ್ತಿದೆ. ಪ್ರತಿ ದಿನ ಹೆಚ್ಚೆಚ್ಚು ಜನರ ಪರೀಕ್ಷೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಪರೀಕ್ಷೆಗಳ ಸಂಖ್ಯೆಯ ಹೆಚ್ಚಳ ಕೂಡಾ ಅತ್ಯವಶ್ಯಕವಾಗಿದೆ.

ಮಾರ್ಚ್ ತಿಂಗಳಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ‌ಪರೀಕ್ಷೆ ಮಾಡಿದ್ದು, ಮಾರ್ಚ್ 25ರಂದು 801 ಸ್ಯಾಂಪಲ್ ಟೆಸ್ಟಿಂಗ್ ಮಾಡಲಾಗಿತ್ತು. ಅದೇ ರೀತಿ ಏಪ್ರಿಲ್ ತಿಂಗಳಲ್ಲಿ ಒಂದು ದಿನದಲ್ಲಿ ಅತೀ ಹೆಚ್ಚು ಸಂಖ್ಯೆಯ ಪರೀಕ್ಷೆ ನಡೆದಿದ್ದು, ಏಪ್ರಿಲ್ 28ರಂದು 4827 ಜನರ ಪರೀಕ್ಷೆ ಮಾಡಲಾಗಿತ್ತು.

ಇನ್ನು ಮೇ ತಿಂಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಪರೀಕ್ಷೆ ನಡೆದ ದಿನ ಮೇ 30. ಅವತ್ತು ಒಟ್ಟು 15,728 ಸ್ಯಾಂಪಲ್ಸ್ ಪರೀಕ್ಷೆ ಮಾಡಲಾಗಿತ್ತು. ಅದೇ ರೀತಿ ಜೂನ್ 27 ರಂದು 14733 ಸ್ಯಾಂಪಲ್ಸ್ ಪರೀಕ್ಷೆ ಮಾಡಿದ್ದೇ ಆ ತಿಂಗಳ ಅತೀ ಹೆಚ್ಚು ಪರೀಕ್ಷೆ ಆಗಿತ್ತು. ಆದರೆ ಜುಲೈ ತಿಂಗಳ 12 ದಿನಗಳ ವೇಳೆಗೆ 2.1ಲಕ್ಷ ಜನರ ಪರೀಕ್ಷೆ ನಡೆದಿದೆ. ಅಂದರೆ 10 ಲಕ್ಷ ಜನಸಂಖ್ಯೆಯಲ್ಲಿ ಸರಿಸುಮಾರು 4,981 ಜನರ ಪರೀಕ್ಷೆ ಮಾಡಲಾಗಿದೆ.

ಮುಂಬೈಗೆ ನೆರೆ ಭೀತಿ, ಹವಾಮಾನ ಇಲಾಖೆ ಎಚ್ಚರಿಕೆ; ಬಾಂಗ್ಲಾ, ಇಂಡೋನೇಷ್ಯಾದಲ್ಲಿ ಪ್ರವಾಹಕ್ಕೆ ಜೀವ ಹಾನಿ

ಆಂಟಿಜನ್ ಟೆಸ್ಟ್

ಈಗಾಗಲೇ ರಾಜ್ಯದಲ್ಲಿ ಆಂಟಿಜನ್ ಪರೀಕ್ಷೆ ಕೂಡ ಆರಂಭವಾಗಿದೆ. ರಾಜ್ಯದಲ್ಲಿ ಬರೋಬ್ಬರಿ 3 ಲಕ್ಷ ಜನರಿಗೆ ಆಂಟಿಜನ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಕೂಡಾ ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತೀಚೆಗೆ 1 ದಿನಕ್ಕೆ 1-2 ಸಾವಿರ ಸೋಂಕಿತರು ಗುರುತಾಗುತ್ತಿದ್ದಾರೆ. ಆಂಟಿಜನ್ ಟೆಸ್ಟ್ ರಿಸಲ್ಟ್ 10-20 ನಿಮಿಷಗಳ ಒಳಗೆ ತಿಳಿಯುತ್ತದೆ. ಇದರಿಂದ ಪ್ರತಿದಿನದ ಸೋಂಕಿತರ ಲೆಕ್ಕ ಒಂದಕ್ಕೆ 10 ಪಟ್ಟು ಹೆಚ್ಚಾಗುವ ಸಂಭವ ಇದೆ.

ಅಷ್ಟು ಪ್ರಮಾಣದ ಸೋಂಕಿತರಿಗೆ ಚಿಕಿತ್ಸೆ ಕೊಡುವ ಸೌಕರ್ಯ ಬೆಂಗಳೂರಿನಲ್ಲಿ ಸದ್ಯಕ್ಕೆ ಇಲ್ಲ. ಹಾಗಾಗಿ ರಾಜ್ಯ ಸರ್ಕಾರದ ಮುಂದೆ ಬಹು ದೊಡ್ಡ ಸವಾಲು ಇದೆ. ಸದ್ಯದ ಮಟ್ಟಿಗೆ ಘೋಷಣೆ ಮಾಡದ ಸೋಂಕಿತರ ಸಂಖ್ಯೆಯೇ ಸಾವಿರಗಟ್ಟಲೇ ಇದೆ ಎನ್ನಲಾಗಿದೆ. ಹೀಗಿದ್ದಾಗ ಮತ್ತಷ್ಟು ಸೋಂಕಿತರು ಜಾಸ್ತಿಯಾದರೆ ಅದಕ್ಕೆ ಬೇಕಾಗುವಷ್ಟು ಮೂಲ ಸೌಕರ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗಲಿದೆ. ಆದರೆ ಈ ಪರೀಕ್ಷೆ ಬಹಳ ಅನಿವಾರ್ಯ ಕೂಡಾ ಹೌದು.

ಆಂಟಿಬಾಡಿ ಟೆಸ್ಟ್

ಇಡೀ ಸಮುದಾಯಕ್ಕೆ ಆಂಟಿಬಾಡಿ ಪರೀಕ್ಷೆ ಸದ್ಯಕ್ಕಿಲ್ಲ ಎನ್ನುತ್ತಾರೆ ತಜ್ಞರು. ಕನಿಷ್ಟ 6 ತಿಂಗಳಿನಿಂದ 1 ವರ್ಷಗಳಾದ ನಂತರವೇ ಆಂಟಿಬಾಡಿ ಪರೀಕ್ಷೆ ಸಾಧ್ಯತೆ ಎನ್ನಲಾಗಿದೆ. ಅದುವರೆಗೂ ಸಮುದಾಯದ ಬಹುಪಾಲು ಜನರಿಗೆ ಸೋಂಕು ಬಂದು ಹೋಗಿರುತ್ತದೆ.

ಆ ಸಂದರ್ಭದಲ್ಲೇ ಆಂಟಿಬಾಡಿ ಪರೀಕ್ಷೆ ಮಾಡಬೇಕಾಗುತ್ತದೆ. ಆಗಷ್ಟೇ ಇಡೀ ಸಮಾಜ ಸೋಂಕಿನಿಂದ ಹೋರಾಡಲು ಸಮರ್ಥವಾದ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದೆಯಾ ಎನ್ನುವುದು ತಿಳಿಯುತ್ತದೆ.
Published by:Latha CG
First published: