• Home
  • »
  • News
  • »
  • coronavirus-latest-news
  • »
  • Lockdown Guideline: ಬಹುತೇಕ ಹಿಂದಿನ ಕರ್ಫ್ಯೂ ನಿಯಮಗಳೇ ಜಾರಿ; ಹಾಗಾದರೆ ನಿರ್ಬಂಧ ಯಾವುದಕ್ಕೆ?

Lockdown Guideline: ಬಹುತೇಕ ಹಿಂದಿನ ಕರ್ಫ್ಯೂ ನಿಯಮಗಳೇ ಜಾರಿ; ಹಾಗಾದರೆ ನಿರ್ಬಂಧ ಯಾವುದಕ್ಕೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಹುತೇಕ ಹಿಂದಿನ ಜನತಾ ಕರ್ಫ್ಯೂನಲ್ಲಿ ಹೇರಲಾಗಿದ್ದ ನಿಯಮಗಳನ್ನು ಇಲ್ಲಿ ಜಾರಿ ಮಾಡಲಾಗಿದೆ. ಕೆಲವೊಂದು ನಿರ್ಬಂಧಗಳನ್ನು ಮಾಡಲಾಗಿದೆ. ಸಿಎಂ ಬಿಎಸ್​ವೈ ಲಾಕ್​ಡೌನ್​ ಎಂಬ ಪದ ಬಳಸಿದ್ದರೆ, ಮುಖ್ಯ ಕಾರ್ಯದರ್ಶಿಗಳು ಇದು ಲಾಕ್​ಡೌನ್​ ಅಲ್ಲ, ಕಠಿಣ ನಿಯಮಗಳು ಜಾರಿ ಎಂದು ಹೇಳಿದರು. 

  • Share this:

    ಬೆಂಗಳೂರು: ಕೊರೋನಾ ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್​. ಯಡಿಯೂರಪ್ಪ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿನ ಇರಲಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.


    ಸಿಎಂ ಬಿಎಸ್​ವೈ ಅವರು ಲಾಕ್​ಡೌನ್​ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಲಾಕ್​ಡೌನ್​ ಮಾರ್ಗಸೂಚಿಗಳನ್ನು ವಿವರಿಸಿದರು. ಬಹುತೇಕ ಹಿಂದಿನ ಜನತಾ ಕರ್ಫ್ಯೂನಲ್ಲಿ ಹೇರಲಾಗಿದ್ದ ನಿಯಮಗಳನ್ನು ಇಲ್ಲಿ ಜಾರಿ ಮಾಡಲಾಗಿದೆ. ಕೆಲವೊಂದು ನಿರ್ಬಂಧಗಳನ್ನು ಮಾಡಲಾಗಿದೆ. ಸಿಎಂ ಬಿಎಸ್​ವೈ ಲಾಕ್​ಡೌನ್​ ಎಂಬ ಪದ ಬಳಸಿದ್ದರೆ, ಮುಖ್ಯ ಕಾರ್ಯದರ್ಶಿಗಳು ಇದು ಲಾಕ್​ಡೌನ್​ ಅಲ್ಲ, ಕಠಿಣ ನಿಯಮಗಳು ಜಾರಿ ಎಂದು ಹೇಳಿದರು.


    ಯಾವುದಕ್ಕೆ ಅವಕಾಶ


    • ಬೆಳಗ್ಗೆ 6ಗಂಟೆಯಿಂದ 10ರವರೆಗೆ ಮದ್ಯ ಪಾರ್ಸೆಲ್‌ಗೆ ಅವಕಾಶ

    • ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡೇ ಹೋಗಬೇಕು. ಅಗತ್ಯ ವಸ್ತಗಳ ತರಲು ವಾಹನ ಬಳಸುವಂತಿಲ್ಲ

    • ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

    • ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಲು ಮಾರಾಟಕ್ಕೆ ಅನುಮತಿ

    • ವೈದ್ಯಕೀಯ ತುರ್ತುಸೇವೆಗಳಿಗೆ ಅನುಮತಿ

    • ಹೋಟೆಲ್​ಗಳಿಂದ ಪಾರ್ಸೆಲ್​ಗೆ ಅನುಮತಿ. ಆದರೆ, ನಡೆದುಕೊಂಡೇ ಹೋಗಬೇಕು.

    • ಸರ್ಕಾರಿ ಕಚೇರಿಗಳು ಸೀಮಿತ ಮಂದಿಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ

    • ಆರೋಗ್ಯ ಸಂಬಂಧಿತ ಸಿಬ್ಬಂದಿ ಓಡಾಡಲು ಅವಕಾಶ

    • ಮಾಧ್ಯಮ ಸಿಬ್ಬಂದಿ ಓಡಾಡಲು ಅನುಮತಿ

    • ಮದುವೆಯಲ್ಲಿ 50 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ

    • ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅನುಮತಿ

    • ರೈಲು, ವಿಮಾನ ಎಂದಿನಂತೆ ಓಡಾಟ. ಆದರೆ, ಟಿಕೆಟ್ ಕಡ್ಡಾಯವಾಗಿ ತೋರಿಸಬೇಕು

    • ಈ ಕಾಮರ್ಸ್ ಚಟುವಟಿಕೆಗಳಿಗೆ ಅವಕಾಶ

    • ನಿಗದಿತ ಕಟ್ಟಡ ಆವರಣದೊಳಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ

    • ತುರ್ತು ಎಂದು ಧೃಡಪಡಿಸಿದರೆ ಮಾತ್ರ ಸಂಚಾರಕ್ಕೆ ಮಾತ್ರ


    ಇದನ್ನು ಓದಿ: Karnataka Lockdown: ರಾಜ್ಯದಲ್ಲಿ ಸಂಪೂರ್ಣ ಲಾಕ್​​ಡೌನ್​ ಘೋಷಣೆ; ಮೇ 10ರಿಂದ 2 ವಾರ ಕರ್ನಾಟಕ ಸ್ತಬ್ಧ!

    ಯಾವುದಕ್ಕೆ ನಿರ್ಬಂಧ

    • 10 ಗಂಟೆಯ ಮೇಲೆ ಯಾರೂ ರಸ್ತೆಯಲ್ಲಿ ಓಡಾಡುವಂತಿಲ್ಲ

    • ಕಾರ್ಮಿಕರು, ಕೆಲಸಗಾರರು ಬೆಂಗಳೂರು ಬಿಟ್ಟು ಹೋಗುವಂತಿಲ್ಲ

    • ವಾಹನ ಸಂಚಾರಕ್ಕೆ ಅವಕಾಶ ಇಲ್ಲ

    • ಯಾರಿಗೂ ಪಾಸ್ ನೀಡುವುದಿಲ್ಲ

    • ಗಾರ್ಮೆಂಟ್ಸ್ ಕ್ಲೋಸ್ ಆಗಲಿವೆ

    • ಅಂತರ್​ಜಿಲ್ಲಾ ಗಡಿಗಳು ಬಂದ್​

    • ಎಲ್ಲ ಕೈಗಾರಿಕಗಳಿಗೆ ನಿರ್ಬಂಧ

    Published by:HR Ramesh
    First published: